About Us Advertise with us Be a Reporter E-Paper

ವಿ +

ಆ ಸುಂದರ ಕ್ಷಣಗಳು ಇಂದಿಗೆ ಬರಿಯ ನೆನಪು

-  ಮಲ್ಲಿಕಾರ್ಜುನ ಮೇತ್ರಿ

ಅದು ಸಂಧ್ಯಾಕಾಲ, ಸೂರ್ಯ ಮುಳುಗಿ ನಿಧಾನವಾಗಿ ಚಂದ್ರ ಮೂಡುವ ಸಮಯ ಹಾಸ್ಟೇಲಿನ ಕಿಟಕಿಯ ಪಕ್ಕದಲ್ಲಿದ್ದ ಮಂಚದ ಮೇಲೆ ಕುಳಿತು ಕೈಯಲ್ಲಿನ ಲೋಟದಲ್ಲಿದ್ದ ಚಹಾ ಕುಡಿಯುತ್ತಾ, ಪಕ್ಕದಲ್ಲಿದ್ದ ಮೊಬೈಲ್ ಕಿರಿಕ್ ಚಿತ್ರದ ಹಾಡು ಗುಣುಗುತ್ತಿದ್ದಾಗ ಹಾಗೆ ಪದವಿ ಕಾಲೇಜಿನ ದಿನಗಳು, ಗೆಳೆಯರು ನೆನಪು ಮನಸ್ಸನ್ನು ಆವರಿಸಿತ್ತು. ಕಣ್ಣಂಚಲ್ಲಿ ಹನಿ ನೀರು ಮೂಡಿತು.

ಕಾಲೇಜು ನಗರದ ಹೊರವಲಯದಲ್ಲಿತ್ತು. ಅಲ್ಲಿಗೆ ನಡೆದುಕೊಂಡು ಹೋಗುವುದು ಬೇಸರವೆನ್ನಿಸಿದ್ದರೂ ಗೆಳೆಯರ ಜತೆ ಮಾತನಾಡುತ್ತ, ಹರಟೆ ಹೊಡೆಯುತ್ತಾ ಸಾಗುತ್ತಿದ್ದ ಸುಂದರ ಕ್ಷಣ ಇಂದು ನೆನಪು ಮಾತ್ರ.
ಪದವಿಯ ಎರಡನೇ ವರ್ಷ ನಮ್ಮ ಜೀವನದಲ್ಲಿ ಅದ್ಭುತ ನೆನಪು. ಈ ವರ್ಷದಲ್ಲಿ ನಾವು ಕಾಲೇಜಿನಲ್ಲಿ ಮಾಡಿದ ಹೋರಾಟ. ಪ್ರಿನ್ಸಿಪಾಲರನ್ನು ಭೀತಿಗೊಳಿಸಿದ ಕ್ಷಣ, ನಡೆದ ಕ್ರೀಡಾಕೂಟ ಮರೆಯಲಾಗದ ನೆನಪುಗಳು. ಗೆಳೆಯರಿಗೆ ಕರೆಯುತ್ತಿದ್ದ ಅಡ್ಡ ಹೆಸರು ನಗುವುಕ್ಕಿಸುತ್ತಿದ್ದವು. ಜಾಕಿ, ಚಿಕ್ಕು, ಕರಿಯ, ಬೆಳಕ, ಕಪ್ಪೆ, ಜಿನೇಲಿಯಾ, ಡುಮ್ಮಿ ಹೀಗೆ ಬರೆಯುತ್ತಾ ಹೋದರೆ ಸಾಲದು ಸಾಲುಗಳು.

ಇಡೀ ಕಾಲೇಜಿಗೆ ಕೇಳಿಸುವಂತೆ ನಗುತ್ತಿದ್ದ ರೀತಿಗೆ ಪ್ರಿನ್ಸಿಪಾಲರ ಹತ್ತಿರ ಬೈಯಿಸಿಕೊಂಡಿದ್ದು ಇದೆ. ಅಂತಿಮ ವರ್ಷದಲ್ಲಿ ಕ್ಲಾಸಿನಲ್ಲಿ ಕುಳಿತು ಪಾಠ ಕೇಳಿದ್ದಕ್ಕಿಂತ ಹೊರಗಡೆ ಗುಂಪು ಕಟ್ಟಿಕೊಂಡು ತರ್ಲೆ, ತಮಾಷೆ, ಕೀಟಲೆ, ಜಗಳ, ಆಟದಲ್ಲಿ ಕಾಲ ಕಳೆದದ್ದೇ ಹೆಚ್ಚು. ಕಾಲೇಜಿನಲ್ಲಿ ನಡೆದ ನಾವೂ ಮುದುಕರಾದರೂ, ಸದಾ ಕಣ್ಣ ಮುಂದೆ ಬಂದು ಕಟ್ಟುವಂತದ್ದು. ಆ ಸಮಯದಲ್ಲಿ ಎಲ್ಲರೂ ಜತೆಯಲ್ಲಿ ಕುಳಿತುಕೊಂಡು ಊಟಮಾಡಿದ್ದು, ಬೇರೆಯವರಿಗೆ ಊಟ ನೀಡುವಾಗ ಗೆಳತಿ ಜಗಳ ಮಾಡಿಕೊಂಡಿದ್ದು, ಪಥಮ ಸ್ಥಾನ ಗಳಿಸಬೇಕಾದ ಗೆಳೆಯ ದ್ವಿತೀಯ ಸ್ಥಾನ ಪಡೆದಾಗ ಎಲ್ಲರೂ ಸೇರಿಕೊಂಡು ಹೋರಾಟ ಮಾಡಿದ ಪರಿ ಇಂದು ಎದೆಯಲ್ಲಿ ಅಚ್ಚಳಿಯದ ನೆನಪು.

ಇನ್ನು ವಿವೇಕಾನಂದರ 150ನೇ ಜಯಂತಿಯ ಪ್ರಯುಕ್ತ ಕಾಲೇಜಿನ ಪರವಾಗಿ ನಾವೆಲ್ಲ ಗೆಳೆಯರು ಬೆಂಗಳೂರಿಗೆ ಶಿಕ್ಷಕರೊಂದಿಗೆ ಮಾಡಿದ ಪ್ರಯಾಣ, ಮೋಜು, ತರ್ಲೆ, ತಮಾಷೆ, ಡ್ಯಾನ್‌ಸ್, ಶಿಕ್ಷಕರ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳಲು ನಡೆಸಿದ ಕಿತ್ತಾಟ, ಎನ್‌ಎಸ್‌ಎಸ್ ಕಾರ್ಯಕ್ರಮದ ಆ ಸವಿನೆನನಪು ಇಡೀ ಪದವಿ ದಿನಗಳಲ್ಲೇ ಅತ್ಯಂತ ಸುಂದರ, ಮಧುರ. ಕೊನೆಯ ದಿನಗಳಲ್ಲಿ ನಡೆದದ್ದು. ಈ ಸಮಯದಲ್ಲಿ ನಾವು ಸ್ವಚ್ಛತೆ ಕಾರ್ಯಕ್ಕಿಂತಲೂ ನಾವು ಕ್ರಿಕೇಟ್, ಕಣ್ಣಿಗೆ ಬಟ್ಟೆ ಕಟ್ಟಿ ಆಡಿದ ಆಟವೇ ಹೆಚ್ಚು. ಹಾಗೆ ಒಂದು ದಿನ ರಾತ್ರಿ ಮಾಂಸಹಾರಿ ಊಟ ಮಾಡಿದ ಕ್ಷಣ, ನಂತರ ಶಿಕ್ಷಕರೊಂದಿಗೆ ಜೂಜು ಆಡಿದ ಸಂದರ್ಭ ಮರೆಯಲು ಕೊನೆಯ ದಿನ ಮಾಡಿದ ಫೈರ್ ಕ್ಯಾಂಪಿನ ಮಧುರ ರಾತ್ರಿ, ಮುಂದೆ ಎಂದೂ ಸಿಗದ ಸುಂದರ ರಾತ್ರಿ. ಹೀಗೆ ನೆನಪುಗಳೆಂಬ ಬೆಳಕನ್ನು ತುಂಬಿಕೊಂಡು ಪದವಿಯ ಜೀವನ ಮುಗಿದುಹೋಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close