ಯುದ್ಧ ಬೇಕು ಎನ್ನುವವರನ್ನು ಸೈನಿಕರೊಂದಿಗೆ ಕಳುಹಿಸಿ

Posted In : ಸಿನಿಮಾ ಸಮಾಚಾರ

ಮುಂಬೈ: ಮನೆಯಲ್ಲಿ ಕುಳಿತು ಯುದ್ಧ ಬೇಕು ಎನ್ನುವವರನ್ನು ಗಡಿಗೆ ಕರೆತಂದು ಕೈಯಲ್ಲಿ ಗನ್ ಕೊಟ್ಟು ಸೈನಿಕರ ಜತೆಗೂಡಿ ಯುದ್ಧಕ್ಕೆ ನಿಲ್ಲಲು ಹೇಳಿ ಎಂದು ನಟ ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಟ್ಯೂಬ್ ಲೈಟ್ ಚಿತ್ರ ಇದೇ 23 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ ವೇಳೆ ಮಾತನಾಡಿ, ಸೈನಿಕರೊಂದಿಗೆ ಹೋದಾಗ ಮಾತ್ರ ಯುದ್ಧದ ಬಗ್ಗೆೆ ನಿಜಾಂಶ ಗೊತ್ತಾಗುತ್ತದೆ. ಪ್ರತಿಯೊಂದು ಸಮಸ್ಯೆಗೆ ಯುದ್ಧವೇ ಪರಿಹಾರವಲ್ಲ. ಯುದ್ಧದಿಂದ ನಷ್ಟವನ್ನು ಬಿಟ್ಟರೆ ಮತ್ತೇನನ್ನು ಪಡೆಯಲು ಸಾಧ್ಯವಿಲ್ಲ ಎಂದರು.  ಟ್ಯೂಬ್‌ಲೈಟ್ ಚಿತ್ರ 1962 ರಲ್ಲಿ ನಡೆದ ಚೀನಾ-ಭಾರತ ಯುದ್ಧದ ಸುತ್ತ ಹೆಣೆದಿರುವ ಕಥೆಯಾಗಿದೆ. ಆದರೆ ನಿರ್ದೇಶಕ ಕಬೀರ್ ಖಾನ್ ಯುದ್ಧದ ಬಗ್ಗೆ ಹೇಳದೆ, ಯುದ್ಧದ ನಂತರ ಎರಡು ದೇಶಗಳಲ್ಲಾಗುವ ಪರಿಣಾಮಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಿದ್ದಾರೆ.

One thought on “ಯುದ್ಧ ಬೇಕು ಎನ್ನುವವರನ್ನು ಸೈನಿಕರೊಂದಿಗೆ ಕಳುಹಿಸಿ

  1. Then, why Salman Khan is not advising stone pelters n its supporters to stop spreading violence in Kashmir. Why he is not supporting women on triple talaaq, halal ? Crocodile tears is not necessary.

Leave a Reply

Your email address will not be published. Required fields are marked *

16 − 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top