About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

ಸೂಜಿಗೆ ದಾರ ಹಾಕುವ ಚಾಲೆಂಜ್, ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್..! (ವಿಡಿಯೊ)

ನೀವೆಲ್ಲಾ ಈಗಾಗಲೇ ಫಿಟ್‍ನೆಸ್ ಚಾಲೆಂಜ್ ಬಗ್ಗೆ ಕೇಳಿದ್ದೀರಾ. ಆದ್ರೆ ಸೂಜಿಗೆ ದಾರ ಹಾಕುವ ಹೊಸ ಚಾಲೆಂಜ್ ಹಾಕಿದ್ದಾರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ನಟ ವರುಣ್ ಧವನ್.

ಹೌದು, ಇವರಿಬ್ಬರೂ ಜೊತೆಯಾಗಿ ನಟಿಸಿರುವ ಸೂಯಿ ಧಗಾತತ್ ಸಿನಿಮಾದ ಪ್ರಮೋಶನ್ ನನ್ನು ಭರ್ಜರಿಯಾಗಿಯೇ ಮಾಡುತ್ತಿದ್ದಾರೆ. ಪ್ರಮೋಶನ್ ವೇಳೆ ಸೂಜಿಗೆ ದಾರವನ್ನು ಫಾಸ್ಟ್ ಆಗಿ ಹಾಕುವಂತೆ ಚಾಲೆಂಜ್ ಕೂಡ ಮಾಡಿದ್ದಾರೆ. ಸ್ವತಃ ಅನುಷ್ಕಾ ಶರ್ಮಾ ಅವರೇ ಸೂಜಿಗೆ ದಾರ ಹಾಕುತ್ತಿರುವ ವಿಡಿಯೊವನ್ನು ವರುಣ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ಅವರಿಗೆ ಈ ಚಾಲೆಂಜ್ ಹಾಕಿದ್ದಾರೆ.

ಮೊದಲಿಗೆ ನಟ ಅಕ್ಷಯ್ ಕುಮಾರ್ ಅವರು ಸೂಜಿಗೆ ದಾರ ಹಾಕುವ ಚಾಲೆಂಜ್‍ನ್ನು ಸ್ವೀಕರಿಸಿದ್ದಾರೆ. ಬಹಳ ಪ್ರಯತ್ನ ಪಟ್ಟ ಅಕ್ಷಯ್, ನೋಡಲು ಸುಲಭ ಎಂದೆನಿಸಿದರೂ ಭಾರಿ ಕಷ್ಟಕರ ಕೆಲಸ ಇದಾಗಿದೆ ಎಂದು ವಿಡಿಯೊ ಮೂಲಕ ಟ್ವೀಟ್ ಮಾಡಿದ್ದಾರೆ. ಇದೀಗ ಸಾಮಾನ್ಯ ಜನರೂ ಕೂಡ ಈ ಸೂಜಿಗೆ ದಾರ ಹಾಕುವ ಚಾಲೆಂಜ್ ಆಕ್ಸೆಪ್ಟ್ ಮಾಡಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಖತ್ ಸೌಂಡ್ ಮಾಡುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close