Breaking Newsದೇಶಪ್ರಚಲಿತ
ಭೀಕರ ಅಪಘಾತ: ಕಂದಕಕ್ಕೆ ವಾಹನ ಉರುಳಿ ಮೂವರು ದಂಪತಿ ಸೇರಿ 13 ಮಂದಿ ಸಾವು

ಶಿಮ್ಲಾ: ವಾಹನವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ದಂಪತಿ ಸೇರಿದಂತೆ 13 ಜನ ಮೃತಪಟ್ಟಿರುವ ಘಟನೆ ಹಿಮಾಚಲಪ್ರದೇಶದ ಸನೈಲ್ನಲ್ಲಿ ನಡೆದಿದೆ.
ಹಿಮಾಚಲಪ್ರದೇಶದ ಶಿಮ್ಲಾ ಜಿಲ್ಲೆಯ ಸನೈಲ್ನಲ್ಲಿ ಅಫಘಾತ ಸಂಭವಿಸಿದೆ. ಕುದ್ದುವಿನಿಂದ 3 ಕಿ.ಮೀ ದೂರದಲ್ಲಿ ಈ ಅಪಘಾತ ನಡೆದಿದ್ದು ವಾಹನ ತಿಯುನಿಯಿಂದ ಸ್ವಾರಾ ಕಡೆಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ವಾಹನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಶಿಮ್ಲಾ ಎಸ್ಪಿ ಓಂಪತಿ ಜಮ್ವಾಲ್ ಸ್ಪಷ್ಟಪಡಿಸಿದ್ದಾರೆ.
ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ರೊಹ್ರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.