About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹಸುವಿನ ಮೇಲೆ ದಾಳಿ ಮಾಡಿದ ಹುಲಿ..!

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಕೆ.ಜಿ.ಹಬ್ಬನಕುಪ್ಪೆ ತರಗನ್ ಎಸ್ಟೇಟ್‌ನಲ್ಲಿ ಕಳೆದ ಹತ್ತು ದಿನದಿಂದ ಬೀಡುಬಿಟ್ಟಿರುವ ಹುಲಿ, ಹಸು ಮೇಲೆ ದಾಳಿ ಮಾಡಿ ಗಾಯಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಕಾವೆರಪ್ಪ ತಮ್ಮ ಹಸುವನ್ನು ಎಸ್ಟೇಟ್‌ನಲ್ಲಿ ಮೇಯಲು ಬಿಟ್ಟ ಸಮಯದಲ್ಲಿ ಹುಲಿ ದಾಳಿ ಮಾಡಿದೆ. ದಾಳಿಗೆ ಹೆದರಿದ ಹಸುವಿನ ಅರಚ್ಚಾಟ ಕೇಳಿ ಸ್ಥಳಕ್ಕೆ ಸ್ಥಳೀಯರು ತೆರಳುತ್ತಿದಂತೆ ಹುಲಿ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಹುಲಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಪರೀಶಿಲಿಸಿ ಶತಾಯಗತಾಯ ಹುಲಿ ಸೆರೆ ಹಿಡಿಯುವ ಎಲ್ಲ ಪ್ರಯತ್ನ ಮುಂದುವರೆಸುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಆದರೆ ಹುಲಿ ಅತೀ ಸೂಕ್ಷ್ಮ ಮತ್ತು ಬಲಿಷ್ಠ ಪ್ರಾಣಿಯಾಗಿದ್ದು.ಆದ್ದರಿಂದಲೇ ಹುಲಿ ಹೆಜ್ಜೆ ಕಂಡು ಹಿಡಿಯಬಹುದು ಎಂದು ತಿಳಿಸಿದರು.

ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು.
Tags

Related Articles

Leave a Reply

Your email address will not be published. Required fields are marked *

Language
Close