ಇದೊಂದಿದ್ದರೆ ಸಾಕು! ಸಚಿವರಾಗಬಹುದಿತ್ತು !

Posted In : ಕ್ಷಣಹೊತ್ತು ಅಣಿ ಮುತ್ತು

ಬ್ರಿಟಿಷರು ಭಾರತವನ್ನಾಳುತ್ತಿದ್ದ ಕಾಲದಲ್ಲಿ ಅಂದರೆ 1947ರಲ್ಲಿ ಸ್ವಾತಂತ್ರ್ಯ ಬರುವ ಮೊದಲು, ಬ್ರಿಟಿಷ್ ವೈಸ್‌ರಾಯರು ಬ್ರಿಟನ್ ಚಕ್ರವರ್ತಿಯ ಪ್ರತಿನಿಧಿಯಾಗಿ ರಾಜ್ಯಭಾರ ನಡೆಸುತ್ತಿದ್ದರು. ಅವರ ಕೈಕೆಳಗೆ ದಿನನಿತ್ಯದ ಉಸ್ತುವಾರಿ ನೋಡಿಕೊಳ್ಳಲು ಎಕ್ಸಿಕ್ಯು ಟಿವ್ ಕೌನ್ಸಿಲ್ ಅಂದರೆ ಸಚಿವ ಸಂಪುಟ ಇರುತ್ತಿತ್ತು. ಸಾಮಾನ್ಯವಾಗಿ ಬ್ರಿಟಿಷ್ ಅಧಿ ಕಾರಿಗಳೇ ಸಂಪುಟದ ಸದಸ್ಯರೂ ಆಗಿರುತ್ತಿದ್ದರು. ಆದರೆ ಅಪರೂಪದ ಸಂದರ್ಭ ಗಳಲ್ಲಿ ಪ್ರತಿಭಾವಂತ ಭಾರತೀಯರಿಗೂ ಆ ಅವಕಾಶ ಸಿಗುತ್ತಿತ್ತು.

1915ರಲ್ಲಿ ಶಂಕರನ್ ನಾಯರ್ ಎಂಬ ಧೀಮಂತ ನ್ಯಾಯವಾದಿಯ ಪ್ರತಿಭೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರನ್ನು ಸಚಿವ ಸಂಪುಟದ ಸದಸ್ಯರನ್ನಾಗಿ ನೇಮಿಸಿತು. ಅದಕ್ಕೆ ಮುಂಚೆ ಅವರು ಮದರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿದ್ದರು. ಭಾರತೀಯರಿಗೆ ಸಿಗಬಹುದಾದ ಅತ್ಯುನ್ನತ ಸ್ಥಾನ ಅದಾಗಿತ್ತು. ನಾಯರ್ ಅವರು ಉನ್ನತ ವಿದ್ಯಾಭ್ಯಾಸವನ್ನು ಮಾಡಿದ್ದವರು. ನ್ಯಾಯಾಧೀಶರಾಗಿದ್ದವರು ಮತ್ತು ಆಡಳಿತದಲ್ಲಿ ಅಪಾರವಾದ ಅನುಭವ ಪಡೆದಿದ್ದವರು. ಈ ಕಾರಣಗಳಿಂದ ಅಂದಿನ ವೈಸ್‌ ರಾಯ್ ಆಗಿದ್ದ ಲಾರ್ಡ್ ಚೆಲ್‌ಮ್ಸ್ ಅವರಿಗೆ ನಾಯರ್ ಬಹಳ ಆಪ್ತರಾಗಿದ್ದರು. ಬ್ರಿಟಿಷರ ಅಡಳಿತದಲ್ಲಿ ಕೆಲಸ ಮಾಡು ತ್ತಿದ್ದರೂ ಅವರು ಮಹಾನ್ ಸ್ವಾಭಿಮಾನಿ ಭಾರತೀಯರಾಗಿದ್ದರು.

1919ರಲ್ಲಿ ಪಂಚಾಬ್‌ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು. ನಿರ್ದೋಷಿಗಳಾದ ಸಾವಿರಾರು ಭಾರತೀಯರು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಟ್ಟರು. ನಾಯರ್ ಅವರಿಗೆ ಹತ್ಯಾಕಾಂಡದ ಅನ್ಯಾಯವನ್ನು ಸಹಿಸಿಕೊಂಡು ಅಧಿಕಾರದಲ್ಲಿ ಮುಂದು ವರಿಯಲು ಮನಸ್ಸಾಗಲಿಲ್ಲ. ಅವರು ನೇರವಾಗಿ ಭೇಟಿಯಾಗಿ ತಮ್ಮ ಅಸಮಾಧಾನವನ್ನು ಧೈರ್ಯದಿಂದ ವ್ಯಕ್ತಪಡಿಸಿ ಸಚಿವ ಸಂಪುಟದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಎಲ್ಲೋ ನಡೆದ ಹತ್ಯಾಕಾಂಡವನ್ನು ಪ್ರತಿಭಟಿಸುವುದಕ್ಕಾಗಿ ಅಧಿಕಾರ ವನ್ನು ತ್ಯಜಿಸುತ್ತಿರುವ ನಾಯರ್ ಅವರನ್ನು ಕಂಡು ವೈಸ್‌ರಾಯರಿಗೆ ಆಶ್ಚರ್ಯವಾಯಿತು.

ಅವರು ಭಾರತೀಯರೊಬ್ಬರಿಗೆ ಸಿಗಬಹುದಾದ ಅತ್ಯುನ್ನತ ಅಧಿಕಾರ ನಿಮಗೆ ಸಿಕ್ಕಿದೆ. ಕೈತುಂಬ ಸಂಬಳ, ಸವಲತ್ತುಗಳು ಎಲ್ಲ ವನ್ನೂ ಬಿಟ್ಟು ಹೋಗಲು ಸಿದ್ಧವಾಗಿದ್ದೀರಲ್ಲ? ಮತ್ತೊಮ್ಮೆ ಯೋಚನೆ ಮಾಡಿ! ಇಂತಹ ಅಧಿಕಾರ ನಿಮಗೆ ಮತ್ತೆ ಸಿಗುವುದಿಲ್ಲ ಎಂದು ಎಚ್ಚರಿಸಿದರು. ಆದರೆ ನಾಯರ್ ತಮ್ಮ ಅಂತಃಸಾಕ್ಷಿಯ ಕೆಲಸ ಮಾಡಲು ತಮ್ಮ ಮನಸ್ಸು ಒಪ್ಪುತ್ತಿಲ್ಲ. ಅಧಿಕಾರ ಒಂದೇ ಮುಖ್ಯವಲ್ಲ. ಆತ್ಮಾಭಿಮಾನವೂ ಮುಖ್ಯ! ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದುಬಿಟ್ಟರು. ಕೊನೆಗೆ ವೈಸ್ ರಾಯರು ರಾಜೀನಾಮೆಯನ್ನು ಒಪ್ಪಿಕೊಳ್ಳಲೇಬೇಕಾಯಿತು.

ಅವರನ್ನು ಬೀಳ್ಕೊಡುವ ಮುಂಚೆ ವೈಸ್‌ರಾಯರು ನೀವೀಗ ಬಿಟ್ಟುಕೊಟ್ಟ ಸ್ಥಾನಕ್ಕೆ ಯಾರನ್ನಾದರೂ ಸೂಚಿಸುತ್ತೀರಾ? ಎಂದು ಕೇಳಿದರು. ನಾಯರ್ ಅವರು ಹೌದು ಸೂಚಿಸುತ್ತೇನೆ. ಅಲ್ಲಿ ನಿಂತಿರುವ ರಾಮ್ ಪ್ರಸಾದನನ್ನು ನೀವು ಪರಿಗಣಿಸಬಹುದು ಎಂದರು. ವೈಸ್‌ರಾಯರು ಆಶ್ಚರ್ಯದಿಂದ ಏನು ನಿಮ್ಮ ಮಾತಿನ ಅರ್ಥ? ರಾಮ್ ಪ್ರಸಾದ್ ಡೋರ್ ಮ್ಯಾನ್ ಅಂದರೆ ದ್ವಾರ ಪಾಲಕ! ಅವನನ್ನು ಸಚಿವ ಸಂಪುಟದ ಸದಸ್ಯನನ್ನಾಗಿ ಮಾಡುವುದೇ? ಎಂದು ಕೇಳಿದರು. ನಾಯರ್ ಅವರು ಏಕಾಗ ಬಾರದು? ಅವನು ಎತ್ತರವಾಗಿದ್ದಾನೆ. ಸುಂದರವಾಗಿದ್ದಾನೆ. ಬಿಳಿಯ ಸಮವಸ್ತ್ರ, ಕೆಂಪು ಪೇಟಾ ಮತ್ತು ಡಾವಾಲಿಯನ್ನು ಚೆನ್ನಾಗಿ ಧರಿಸು ತ್ತಾನೆ. ನೀವು ಏನೇ ಹೇಳಿದರು ಹೌದು ಎನ್ನುತ್ತಾನೆ. ಹೌದು, ಹೌದೆನ್ನುವ ಗುಣವೊಂದಿದ್ದರೆ ಸಾಕು!

ಸಚಿವ ಸಂಪುಟದ ಸದಸ್ಯನಾಗಲು ಮಾದರಿಯಾಗುತ್ತಾನೆ ಎಂದು ಹೇಳಿ ಹೊರಟುಹೋದರಂತೆ. ವೈಸ್‌ರಾಯರು ಅವರು ಹೋದ ದಿಕ್ಕನ್ನೇ ನೋಡುತ್ತ ಕುಳಿತರಂತೆ.  ಈ ಅರ್ಥಪೂರ್ಣ ನಿವೃತ್ತ ಶಿಕ್ಷಕರು, ಉತ್ತಮ ಲೇಖಕರೂ ಆದ ಮಂಡ್ಯದ ಮನ್ನಾರ್ ಕೃಷ್ಣ ರಾವ್ ತಮ್ಮ ‘ಬದುಕು ಬೆಳಕು’ ಪುಸ್ತಕ ಮಾಲೆಯಲ್ಲಿ ವಿವರಿಸಿದ್ದಾರೆ. ಅವರಿಗೆ ಪ್ರಣಾಮಗಳು. ಇದು ಬ್ರಿಟಿಷರ ಕಾಲದ ಮಾತಾ ಯಿತು. ಈಗ ನಮ್ಮದೇ ರಾಜ್ಯಭಾರ! ಈಗ ಸಚಿವರಾಗಲು ಬೇಕಾದ ಅರ್ಹತೆಗಳು ಬೇರೆಯಾಗಿವೆಯೋ ಅಥವಾ ಅವೇ ಇವೆಯೋ? ಯೋಚಿಸಲು ಸಕಾಲ ಅಲ್ಲವೇ?

Leave a Reply

Your email address will not be published. Required fields are marked *

5 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top