ವಿಶ್ವವಾಣಿ

ಇಂದು ಅಂತಾರಾಷ್ಟ್ರೀಯ ಬೆಕ್ಕುಗಳ ದಿನ..!

ದೆಹಲಿ: ಬೆಕ್ಕುಗಳೆಂದ್ರೆ ಯಾರಿಗೆ ತಾನೆ ಪ್ರೀತಿಯಿಲ್ಲ ಹೇಳಿ..? ಬೆಕ್ಕುಗಳು ಮನುಷ್ಯರ ಅಚ್ಚುಮೆಚ್ಚಿನ, ಮುದ್ದಿನ ಸಾಕು ಪ್ರಾಣಿ. ತನ್ನ ಕಣ್ಣು ಹಾಗೂ ಬಣ್ಣದಿಂದಲೇ ಆಕರ್ಷಕವಾಗಿ ತೋರುತ್ತದೆ. ಇಂಥ ಬೆಕ್ಕುಗಳಿಗೂ ಒಂದು ದಿನವಿದೆ. ಹೌದು, ಇಂದು ಅಂತಾರಾಷ್ಟ್ರೀಯ ಬೆಕ್ಕುಗಳ ದಿನ..!

ಇಂಟರ್ ನ್ಯಾಷನಲ್ ಅನಿಮಲ್ ವೆಲ್‍ಫೇರ್ ಸಂಸ್ಥೆಯು 2002ನೇ ಇಸವಿಯಲ್ಲಿ ಬೆಕ್ಕುಗಳಿಗೆಂದೇ ದಿನ ಮೀಸಲಿರಿಸಲು ಯೋಜನೆ ರೂಪಿಸಿತು. ಅದರಂತೆ ಪ್ರತಿ ವರ್ಷ ಆಗಸ್ಟ್ 8ರಂದು ಬೆಕ್ಕುಗಳ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಬೆಕ್ಕು ತನ್ನದೇ ಆದ ಇತಿಹಾಸ ಹೊಂದಿದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಬೆಕ್ಕುಗಳ ಅಸ್ತಿತ್ವವಿತ್ತು ಎನ್ನಲಾಗಿದೆ.

 ಬೆಕ್ಕುಗಳು ತಮ್ಮ ಕಿವಿಯನ್ನು ನಿಯಂತ್ರಿಸಲು 20ಕ್ಕೂ ಹೆಚ್ಚು ಸ್ನಾಯುಗಳನ್ನು ಬಳಸುತ್ತವಂತೆ. ಅಷ್ಟೇ ಅಲ್ಲ ಅವು ತಮ್ಮ ಕಿವಿಯನ್ನು 180 ಡಿಗ್ರಿವರೆಗೆ ಸರಿಸುವ ಸಾಮರ್ಥವನ್ನು ಹೊಂದಿದೆಯಂತೆ. ಕತ್ತಲೆಯಲ್ಲಿ ಎಷ್ಟೇ ಚಿಕ್ಕ ವಸ್ತುವಾದರೂ ಕಾಣುವ ಸಾಮರ್ಥ್ಯ ಬೆಕ್ಕಿಗಿದೆ. ಅದೇನೆ ಇರಲಿ ಬೆಕ್ಕುಗಳಿಗೂ ಒಂದು ದಿನ ಮಾಡಿರೋದು ಖುಷಿಯ ವಿಚಾರ.