About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಇಂದಿನ ಸಮಾಜಕ್ಕೆ ಸೂಫಿ ಪರಂಪರೆ ಅಗತ್ಯ: ರಂಜಾನ್ ದರ್ಗಾ

ವಿದ್ಯಾಗಿರಿ, ಮೂಡುಬಿದಿರೆ: ಭಾರತೀಯ ಸೂಫಿ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕೃತಿ, ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮತತ್ವದ ಮೂಲಕ ಜಗತ್ತನ್ನು ತೋರಿಸಿಕೊಟ್ಟವರು ಎಂದು ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ರಂಜಾನ್ ದರ್ಗಾ ಹೇಳಿದರು.

ಆಳ್ವಾಸ್ ನುಡಿಸಿರಿಯ ದ್ವಿತೀಯ ದಿನದಂದು ರತ್ನಾಕರವರ್ಣಿ ವೇದಿಕೆಯಲ್ಲಿ ‘ಕರ್ನಾಟಕ ದರ್ಶನ: ಅಧ್ಯಾತ್ಮ ಪರಂಪರೆ ವಿಷಯದ ಕುರಿತು ಮಾತನಾಡಿದ ಅವರು, ‘ಕರ್ನಾಟಕದ ಸೂಫಿಗಳಿಂದ ಕಲಿಯಲು ಬಹಳಷ್ಟಿದೆ. ಅವರ ತತ್ತ್ವ ಗ್ರಂಥಗಳು ಆಂಗ್ಲ ಭಾಷೆಗೆ ಅನುವಾದಗೊಂಡರೆ ಇಡೀ ಜಗತ್ತೇ ಕರುನಾಡಿನತ್ತ ಅಚ್ಚರಿಯಿಂದ ನೋಡುವಂತಾಗುತ್ತದೆ. ಭಕ್ತಿ ಪಂಥ, ಬೌದ್ಧ ಪಂಥ, ಬೌದ್ಧ ಸಿದ್ಧ ಪಂಥ, ಅವದೂತ ಪಂಥಗಳಿಂದ ಪ್ರಭಾವಿತರಾದ ಸಿದ್ಧಾಂತದ ತತ್ತ್ವಗಳು ನಮ್ಮ ಮಣ್ಣಿನ ಮೇಲೆ ಪ್ರಭಾವ ಬೀರಿವೆ ಎಂದರು.

ಸೂಫಿಸಂಗೆ ಪ್ರತ್ಯೇಕ ಆಕಾರವಿಲ್ಲ. ಖಾದಿರಿಯ್ಯ, ಚಿಸ್ತಿಯ್ಯ, ಸುಹುರವರ್ದಿಯ್ಯ, ರಿಫಾಯಿಯ್ಯ ಎಂಬ ನಾಲ್ಕು ಪಂಥಗಳು ಬಹಳ ಪ್ರಮುಖವಾದುದು. ಅಲ್ಲದೇ ಅವುಗಳು ಶರೀಅತ್, ಹಕೇಕತ್, ಮರಿಫತ್, ತ್ವರೀಖತ್ ಎಂಬ ನಾಲ್ಕು ಆಧಾರ ಸ್ತಂಭಗಳ ಮೇಲೆ ನಿರ್ಮಿಸಲ್ಪಟ್ಟಿವೆ ಎಂದು ಸೂಫಿ ತತ್ತ್ವಗಳ ಬಗ್ಗೆ ವಿವರಿಸಿದರು.

ನವಾಜ್, ಕೊಡಕ್ಕಲ್ ಬಸವಣ್ಣ, ಯೂಸುಫ್ ಆದಿಲ್ ಖಾನ್‌ರಂತಹ ಅಧ್ಯಾತ್ಮ ತತ್ತ್ವ ಚಿಂತಕರು ಇದೇ ಹಾದಿಯನ್ನು ತುಳಿದರು. ಸಿದ್ಧಾಂತವು ಬರೀ ತೋರಿಕೆಯಾಗಿದ್ದು, ಜಗತ್ತು ಅದ್ವೈತದಿಂದ ಉದಯಿಸಿದೆ ಎಂದು ಅವರು ತೋರಿಸಿಕೊಟ್ಟವರು ಎಂದು ಅಭಿಪ್ರಾಯಪಟ್ಟರು.

ಜಗತ್ತಿನಲ್ಲಿಂದು ಹಿಂದೂಗಳನ್ನು ಕೋಮುವಾದಿಗಳೆಂದೂ, ಇಸ್ಲಾಮರನ್ನು ಮೂಲಭೂತವಾದಿಗಳೆಂದೂ ಪ್ರತ್ಯೇಕಿಸಿ ಕಾಣಲಾಗುತ್ತಿದೆ. ಅತ್ಯಾಚಾರ, ಅನಾಚಾರಗಳು ನಿರಂತರ ಗರಿಗೆದರುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ಮಣ್ಣಿನಲ್ಲಿ ಐಕ್ಯತೆಯ ಬೀಜವನ್ನು ಬಿತ್ತಿ ಮರೆಯಾದ ಸೂಫಿಗಳ ತತ್ತ್ವಗಳನ್ನು ಪಾಲಿಸಿ ಬದುಕು ರೂಪಿಸಬೇಕು ಕರೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close