ಡೆಲ್ಲಿಗೆ ಕಠಿಣ ಸವಾಲು

Posted In : ಕ್ರೀಡೆ

ಕೋಲ್ಕತಾ: ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಅವರ ಅಬ್ಬರದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿತು. ಇಲ್ಲಿನ ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.

ನಿರಂತರ ವಿಕೆಟ್ ಉರುಳುವಿಕೆಯ ನಡುವೆಯೂ ಮಿಂಚಿದ ಕೋಲ್ಕತಾ ಬ್ಯಾಟ್‌ಸ್ಮನ್‌ಗಳು ರನ್ ಗಳಿಕೆಯ ವೇಗ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಆರಂಭಿಕನಾಗಿ ಕಣಕ್ಕಿಳಿದ ಸುನಿಲ್ ನಾರಾಯಣ್‌ಗೆ ದಿನ ಕೂಡಿ ಬರಲಿಲ್ಲ. ಬೌಲ್ಟ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಮ್ಯಾಕ್ಸವೆಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ಕ್ರಿಸ್ ಲಿನ್(31) ಮತ್ತು ರಾಬಿನ್ ಉತ್ತಪ್ಪ(35)ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಸೇರಿ 55 ರನ್‌ಗಳ ಉಪಯುಕ್ತ ಜತೆಯಾಟ ನಡೆಸಿದರು. ದೊಡ್ಡ ಇನಿಂಗ್ಸ್ ಕಟ್ಟುವ ಲೆಕ್ಕಾಚಾರದಲ್ಲಿದ್ದ ಈ ಜೋಡಿಯನ್ನು ಮೊಹಮ್ಮದ್ ಶಮಿ ಬೇರ್ಪಡಿಸಿದರು. ಶಮಿ ಬೌಲಿಂಗ್‌ನಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಲು ಪ್ರಯತ್ನಿಸಿದ ಲಿನ್ ಅವರು ಜೇಸನ್ ರಾಯ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅತ್ಯುತ್ತಮ ಪ್ರದರ್ಶನ ರಾಬಿನ್ ಉತ್ತಪ್ಪ 19 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳ ನೆರವಿನಿಂದ 35 ರನ್ ಸಿಡಿಸಿದರು.  ರಾಣಾ ಮಿಂಚಿನ ಅರ್ಧ ಶತಕಮಿಂಚಿನ ಬ್ಯಾಟಿಂಗ್ ನಡೆಸಿದ ನಿತೀಶ್ ರಾಣಾ ಅರ್ಧ ಶತಕ ಸಿಹಿ ಸವಿದರು.

ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಗ್ಯಾಲರಿಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಬೌಂಡರಿ, ಸಿಕ್ಸರ್‌ಗಳಿಂದ ರೋಮಾಂಚನಗೊಳಿಸಿದರು. ರಕ್ಷಣಾತ್ಮಕ ಹಾಗೂ ಕೌಶಲಯುತ ಆಟ ಪ್ರದರ್ಶಿಸಿದ ಅವರು ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟುವಂತೆ ಮಾಡಿದರು. ಅವರು 35 ಎಸೆತಗಳಲ್ಲಿ 59 ರನ್ ಬಾರಿಸಿದರು. ಅದರಲ್ಲಿ ಚೆಂಡನ್ನು ನಾಲ್ಕು ಬಾರಿ ಸಿಕ್ಸರ್‌ಗೆ ಮತ್ತು 5 ಬಾರಿ ಬೌಂಡರಿ ಗೆರೆ ದಾಟಿಸಿದರು. ಆದರೆ ಕ್ರಿಸ್ ಮೋರಿಸ್ ಬೌಲಿಂಗ್‌ನಲ್ಲಿ ಗಂಭೀರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅದ್ಭುತ ಬ್ಯಾಟಿಂಗ್ ನಡೆಸಿದ ಅವರು ಕೆಕೆಆರ್ ಪಾಲಿನ ಹೀರೊ ಎನಿಸಿಕೊಂಡರು.

 ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗಿಳಿದ ರಸೆಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಹೊಡಿಬಡಿ ಆಟವಾಡಿದ ಅವರು 5 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಬಳಿಕವೂ ಬ್ಯಾಟಿಂಗ್ ಮುಂದುವರಿಸಿದ ಅವರು 12 ಎಸೆತಗಳಲ್ಲಿ 6 ಸಿಕ್ಸರ್‌ಗಳೊಂದಿಗೆ 41 ರನ್ ಸಿಡಿಸಿದರು. ಆದರೆ ಟ್ರೆಂಟ್ ಬೌಲ್‌ಟ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್‌ಡ್ ಆದರು. ದಿನೇಶ್ ಕಾರ್ತಿಕ್(19) ಸ್ವಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಕ್ರಿಸ್ ಮೋರಿಸ್ ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್‌ಟ್ಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಬಂದವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ಡೆಲ್ಲಿಗೆ 201 ರನ್‌ಗಳ ಗುರಿ ನೀಡಿತು.

Leave a Reply

Your email address will not be published. Required fields are marked *

15 + nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top