About Us Advertise with us Be a Reporter E-Paper

ಅಂಕಣಗಳು

ಆರ್ಥಿಕ-ತಾಂತಿಕ ವಿಶ್ವ ಪಾರಮ್ಯಕ್ಕಾಗಿ ಹೋರಾಟವೇ ಟ್ರೇಡ್‌ವಾರ್!

ವಿದೇಶ: ಡಾ. ಎ. ಜಯಕುಮಾರ್ ಶೆಟ್ಟಿ ಪ್ರಾಧ್ಯಾಪಕರು

ಜಾಗತೀಕರಣದ ಬಳಿಕ ಪ್ರಪಂಚದ ರಾಷ್ಟ್ರಗಳ ನಡುವೆ ವ್ಯಾಪರ-ವಹಿವಾಟು, ತಂತ್ರಜ್ಞಾನ, ಶಸಾಸ, ಅಭಿವೃದ್ಧಿ ಸಹಿತ ಹಲವಾರು ವಿಷಯಗಳ ಬಗ್ಗೆ ಪೈಪೋಟಿ ನಡೆಯುತ್ತಲೇ ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಪೈಪೋಟಿ ತೀವ್ರವಾಗಿದ್ದು, ಆಂತರಿಕ ಭಿನ್ನಾಭಿಪ್ರಾಯ ಹಾಗೂ ಕಲಹಕ್ಕೆ ಎಡೆ ಮಾಡಿಕೊಟ್ಟಿದೆ. ಅಭಿವೃದ್ಧಿ ವಿಷಯಗಳಿಗೆ ನಡೆಯಬೇಕಿದ್ದ ಪೈಪೋಟಿ ಪ್ರತಿಷ್ಠೆ ಹಾಗೂ ಗರ್ವದ ಸಂಕೇತವಾಗಿದೆ. ಈ ಮೊದಲು ಶಸಾಸ ತಯಾರಿ ಹಾಗೂ ಖರೀದಿಯ ಬಗ್ಗೆ ಶತ್ರು ರಾಷ್ಟ್ರಗಳು ಪರಸ್ಪರ ಪೈಪೋಟಿಗಿದದಿದ್ದವು, ಈಗ ಅದು ವ್ಯಾಪಾರದ ಕಡೆ ಹೊರಳಿದೆ. ಇಂಥ ಅನಾರೋಗ್ಯಕರ ಪೈಪೋಟಿ ಜಾಗತಿಕ ಆರ್ಥಿಕ ಹಾಗೂ ರಾಜತಾಂತ್ರಿಕ ದೃಷ್ಠಿಯಿಂದ ಒಳ್ಳೆಯದಲ್ಲ.

ಒಂದು ದೇಶವು ತನ್ನ ದೇಶೀಯ ಉದ್ಯಮಗಳನ್ನು ಸಂರಕ್ಷಿಸಲು ತನ್ನ ಆಮದುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತದೆ. ಇದಕ್ಕೆ  ಪ್ರತೀಕಾರವಾಗಿ ಇನ್ನೊಂದು ದೇಶ ಆ ದೇಶದ ಆಮದುಗಳ ಮೇಲೆ ಸುಂಕವನ್ನು ಹೆಚ್ಚಿಸಿದಾಗ ವ್ಯಾಪಾರ ಯುದ್ಧದ ಆತಂಕದ ಸನ್ನಿವೇಶ ಸೃಷ್ಠಿಯಾಗುತ್ತದೆ. ಆಮದು ಮೇಲಿನ ಸುಂಕ, ವಿದೇಶಿ ವಸ್ತುಗಳನ್ನು ದುಬಾರಿಯನ್ನಾಗಿಸುತ್ತದೆ. ವಿದೇಶಿ ವಸ್ತುಗಳ ಆಕರ್ಷಣೆ ಕಡಿಮೆಯಾಗಿ, ಸ್ಥಳೀಯ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಸ್ಥಳೀಯ ಉದ್ಯೋಗಗಳನ್ನು ಮತ್ತು ಕೈಗಾರಿಕೆಗಳನ್ನು ರಕ್ಷಿಸುತ್ತದೆ.

ತಮ್ಮ ಆರ್ಥಿಕ ರಕ್ಷಣೆಗಾಗಿ ರಾಷ್ಟ್ರಗಳ ನಡುವೆ ನಡೆಯುವ ಈ ರೀತಿಯ ಸೇರಿಗೆ ಸವ್ವಾ-ಸೇರು ಪ್ರಕ್ರಿಯೆ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಇದರ ಹಿಂದೆ ಯಾವುದೇ ರಾಜಕೀಯ ಪ್ರೇರಿತ ಉದ್ದೇಶಗಳಿದ್ದರೂ ಅಂತಿಮವಾಗಿ ಪ್ರತಿಯೊಬ್ಬರೂ ಆರ್ಥಿಕವಾಗಿ ಬಾಽಸುತ್ತದೆ.  ಇಂಥಹ ರಕ್ಷಣಾ ನೀತಿಗಳು ಅಲ್ಪಾವಽಯಲ್ಲಿ ದೇಶಿಯ ಉದ್ಯೋಗವನ್ನು  ರಕ್ಷಿಸುವಲ್ಲಿ ಸಣ್ಣ ಮಟ್ಟಿನ -ಲ ಕೊಟ್ಟರೂ,  ದೀರ್ಘಾವಽಯಲ್ಲಿ  ಉದ್ಯೋಗ ಪ್ರಮಾಣದಲ್ಲಿ ಕುಸಿತ ಕಂಡು ಬಂದು ಆರ್ಥಿಕ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಆಮದು ಮಾಡಿದ ವಸ್ತುಗಳ ಬೆಲೆಗಳನ್ನು ಸುಂಕವು ಹೆಚ್ಚಿಸಿದಾಗ ಹಣದುಬ್ಬರವೂ ಹೆಚ್ಚಾಗಲು ಕಾರಣವಾಗುತ್ತದೆ. ೧೯೩೦ರ ಮಾಹಾ ಆರ್ಥಿಕ ಮುಗ್ಗಟ್ಟಿನ ವೇಳೆ ಇಂಥ ರಕ್ಷಣಾ ನೀತಿಗಳು ಇನ್ನಷ್ಟು ಹಾನಿಗೆ ಕಾರಣವಾಯಿತು ಎಂದು ಹಲವಾರು ಅರ್ಥಶಾಸಜ್ಞರು ಅಭಿಪ್ರಾಯ ಪಡುತ್ತಾರೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ೨೦೧೭ ಮತ್ತು ೨೦೧೮ರಲ್ಲಿ , ಹೆಚ್ಚಾಗಿ ಭಾರತ ಮತ್ತು ಚೀನಾ ಆಕ್ರಮಿಸಿಕೊಂಡಿದೆದ ಉತ್ಪಾದನಾ ಉದ್ಯೋಗವನ್ನು ಮರಳಿ ಅಮೆರಿಕಕ್ಕೆ ತರುವ ಉದ್ದೇಶದಿಂದ ರಕ್ಷಣಾ ನೀತಿಯ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಅಲ್ಲದೇ ಈ ರಕ್ಷಣಾ ನೀತಿಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ದೇಶಗಳ ನಡುವೆ  ಮನಸ್ತಾಪ ಸಂಘರ್ಷದ ಹಂತವನ್ನು ಮೀರಿ ಯುದ್ಧದ ಛಾಯೆ ಆವರಿಸಿದಾಗ ಆಂತಂಕದೊಂದಿಗೆ ಅಸಹಾಯಕತೆ ಎದುರಾಗುತ್ತದೆ. ವಾಣಿಜ್ಯ ನಿರ್ಬಂಧಗಳು ಹಾಗೂ ಸಮರ ಎರಡು ದೇಶಗಳಿಗೆ ಮಾತ್ರ ಹಾನಿಯಾಗುವುದಿಲ್ಲ. ಇತರ ದೇಶಗಳ ಆರ್ಥಿಕತೆಯ ಮೇಲೂ ಈ ನೀತಿಗಳು ಭಾರೀ ಪರಿಣಾಮ ಬೀರುತ್ತದೆ.

ವ್ಯಾಪಾರ ಸಮರದ ಆರಂಭಿಕ ಹೆಜ್ಜೆ  ಆಮದುಗಳ ಮೇಲೆ ಸುಂಕ ಮತ್ತು ಪ್ರತಿ ಸುಂಕ ಹೆಚ್ಚಳ. ಮುಂದಿನ ಹಂತ ಹೂಡಿಕೆಗಳನ್ನು ತಡೆಗಟ್ಟುವುದು. ಅಮೆರಿಕದಿಂದ ಆಮದು ಮಾಡಲಾಗುತ್ತಿರುವ ಸರಕುಗಳ ಮೇಲೆ ಚೀನಾ ಹೆಚ್ಚಿನ ಸುಂಕ ವಿಽಸಿರುವುದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಚೀನಾ ವಸ್ತುಗಳ ಮೇಲೆ ಸುಂಕ ಏರಿಕೆ ಮಾಡಿದೆ. ಈ ಸಮರ ಇನ್ನೂ ತೀವ್ರಗೊಂಡರೆ, ಚೀನಾ ಅಮೆರಿದ ಹೂಡಿಕೆಗಳಿಗೆ ಅಡ್ಡಗಾಲು ಹಾಕಬಹುದು. ಇಂಥ ಆಂತಂಕಕಾರಿ ಹೆಜ್ಜೆ ಜಾಗತಿಕ ಸರಬರಾಜು ಸರಪಳಿಗಳನ್ನು ಅಡ್ಡಿಪಡಿಸುತ್ತದೆ.

ಉತ್ಪಾದನಾ ಘಟಕ ಮತ್ತು ವಿತರಣಾ ವ್ಯವಸ್ಥೆಗಳ ಸ್ಥಳಾಂತರ, ಹೂಡಿಕೆ ನಿರ್ಧಾರಗಳಲ್ಲಿ  ಉಂಟಾಗುವ ಬದಲಾವಣೆಯ ಒತ್ತಡ ಆರ್ಥಿಕವಾಗಿ ಪ್ರತಿಕೂಲಕರವಾಗಿ ಪರಿಣಮಿಸುತ್ತದೆ. ಇಂತಹ ದೂರಗಾಮಿ ಪರಿಣಾಮಗಳು ಸುಲಭವಾಗಿ ಬದಲಿಸಬಹುದಾದ ಸುಂಕಕ್ಕಿಂತ ಹೆಚ್ಚು ವಿಚ್ಛಿದ್ರಕಾರಿಯಾಗಬಹುದು.

ಉದಾಹರಣೆಗೆ ಆಪಲ್‌ನಂಥಹ ಬಹುರಾಷ್ಟ್ರೀಯ ಕಂಪೆನಿಗಳು ಎರಡೂ ದೇಶಗಳಲ್ಲಿ ಹೂಡಿಕೆ ಮಾಡಿದೆ. ಚೀನಾದಿಂದ ಬಿಡಿ ಭಾಗಗಳನ್ನು  ಆಮದು ಮಾಡಿಕೊಂಡು ಆಪಲ್ ತನ್ನ ಉತ್ಪನ್ನವನ್ನು ತಯಾರಿಸುತ್ತದೆ. ಹೀಗೆ ಉತ್ಪಾದನೆಯಾದ ಸರಕು ಜಗತ್ತಿನಾದ್ಯಂತ ಮಾರಾಟವಾಗುತ್ತದೆ. ಇಂಥ ವ್ಯಾಪಾರ ಸಮರದಿಂದ, ಆಪಲ್ ಕಂನಿಯ ಉತ್ಪನ್ನವನ್ನು ಖರೀದಿಸುವ, ವಿಶ್ವದ ಇತರ ಭಾಗದ ಜನರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಲಿದೆ. ಎರಡು ದೇಶಗಳ ನಡುವೆ ವ್ಯಾಪಾರ ಯುದ್ಧದ ಸನ್ನಿವೇಶ ಉಂಟಾದಾಗ, ಎರಡೂ ದೇಶಗಳ ಆರ್ಥಿಕತೆ ಮೇಲೆ ಭಾರೀ ಹಾನಿ ಉಂಟಾಗುವುದಲ್ಲದೇ, ಇತರ ದೇಶಗಳ ಆರ್ಥಿಕತೆ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ.

ಈಗ ಕಂಡು ಬರುತ್ತಿರುವ ವ್ಯಾಪಾರ ಯುದ್ದ ನಿಸ್ಸಂಶಯವಾಗಿ ಇಂದಿನ ಆಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಂದ ಪ್ರಾಂಭವಾಗಿಲ್ಲ ಎಂದು ಹೇಳಬಹುದು. ಕಳೆದ ಎರಡು ಮೂರು ದಶಕಗಳಿಂದ ಈ ಪ್ರಕ್ರೀಯೆ ನಡೆಯುತ್ತಾ ಬಂದಿದೆ.  ೨೦೦೦ರಲ್ಲಿ ಚೀನಾದ ದೇಶಿಯ ಉತ್ಪನ್ನ ಅಮೆರಿಕದ ಶೇ. ೨೦ರಷ್ಟು ಇತ್ತು.  ೨೦೧೭ ರಲ್ಲಿ  ಇದು ಶೇ. ೬೬ ತಲುಪಿದ್ದು, ೨೦೩೦ ಕ್ಕೆ ಈ ಎರಡೂ ದೇಶಗಳ ದೇಶಿಯ ಉತ್ಪನ್ನ ಸಮವಾಗಲಿದೆ ಅಂದಾಜಿಸಲಾಗಿದೆ. ಈ ವೇಳೆ ಚೀನಾ ಹಾಗೂ ಅಮೆರಿಕ ಆರ್ಥಿಕವಾಗಿ ಸಮವಾಗಿ ನಿಲ್ಲುತ್ತದೆ. ಹಾಗಾಗಿ ಚೀನಾಕ್ಕೆ ಮೂಗುದಾರ ಹಾಕಲು ಅಮೆರಿಕ ಕಳೆದ ಹಲವು ವರ್ಷಗಳಿಂದ ಈ ನೀತಿಯನ್ನು ಅನುಸರಿಸುತ್ತದೆ.

ಚೀನಾ ಮತ್ತು ಅಮೆರಿಕ ನಡುವೆ ಇಂದು ನಡೆಯುತ್ತಿರುವ ಹೋಲಿಕೆ ಮತ್ತು ವ್ಯಾಪಾರ ಸಮರ,  ಎರಡು ದೊಡ್ಡ ಆರ್ಥಿಕತೆಗಳ ನಡುವೆ  ಅನಿವಾರ್ಯವೂ ಹೌದು. ಉದಾಹರಣೆಗೆ, ಈ ಎರಡೂ ರಾಷ್ಟ್ರಗಳು ಸೂಪರ್ ಕಂಪ್ಯೂಟರ್‌ಗಳನ್ನು ಸೃಷ್ಠಿಸುವಲ್ಲಿ ಪ್ರಭುತ್ವ ಸಾಽಸಿದೆ.  ವಿಶ್ವದ ವೇಗದ ಸೂಪರ್ ಕಂಪ್ಯೂಟರ್‌ಗಳನ್ನು  ಉತ್ಪಾದಿಸುವ ಸ್ಪರ್ಧೆಯಿಂದಾಗಿ ಈಗಾಗಲೇ ಎರಡೂ ದೇಶಗಳಲ್ಲಿ ಉತ್ತಮ, ವೇಗದ ಕಂಪ್ಯೂಟರ್ಗಳನ್ನು ಉತ್ಪಾದನೆಯಾಗುತ್ತಿವೆ. ಹೋಲಿಕೆ ಮತ್ತು ಅದರಿಂದ ಆರಂಭವಾಗುವ ಸ್ಪರ್ಧೆಗಳು ಮುಂದಿನ ಆವಿಷ್ಕಾರಗಳಿಗೆ ನಾಂದಿಯಾಗುತ್ತದೆ.

ಈ ವ್ಯಾಪಾರ ಯುದ್ಧ ಸುಲಭವಾಗಿ ಒಂದು ಹಂತವನ್ನು ತಲಪುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿಶ್ವ ವ್ಯಾಪಾರ ಸಂಘಟನೆ ರೂಪಿಸಿದ ಜಾಗತಿಕ ವ್ಯಾಪಾರ ಚೌಕಟ್ಟನ್ನು ಬೀಜಿಂಗ್ ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದರಿಂದ ಆಮೆರಿಕಕ್ಕೆ ೩೭೫ ಶತಕೋಟಿಯಷ್ಟು ವ್ಯಾಪಾರ ಕೊರತೆ ಉಂಟಾಗಿದೆ. ಚೀನಾ ನಮಗೆ ಸತತವಾಗಿ ಮೋಸ ಮಾಡಯತ್ತಿದ್ದು ಅಧ್ಯಕ್ಷನಾಗಿ ಅದನ್ನು ತಡೆಗಟ್ಟುವುದು ತನ್ನ ಸ್ಪಷ್ಟ ಕರ್ತವ್ಯ ಎಂದು ಟ್ರಂಪ್ ನಂಬುತ್ತಾರೆ. ಚೀನಾದ ನ್ಯಾಯಪರವಲ್ಲದ ವ್ಯಾಪಾರದ ಆಚರಣೆಗಳು ಮತ್ತು ಆಮೇರಿಕಾದ ಬೌದ್ಧಿಕ  ಆಸ್ತಿಯ ಕಳ್ಳತನ ಈ ಒತ್ತಡಕ್ಕೆ ಕಾರಣ ಎಂದು ಆಮೇರಿಕಾದ ವಾದ.

ಹೆಚ್ಚು ಕಳೆದುಕೊಳ್ಳುವ ಭೀತಿಯಲ್ಲಿರುವ ಚೀನಾ ಕೂಡಾ ವೇಗವಾಗಿ ಮತ್ತು ಸಮಾನವಾಗಿ ಪ್ರತಿ ದಾಳಿಯನ್ನು ಒಡ್ಡಿದೆ. ಅಂತಿಮವಾಗಿ ಬಲುಜೋರಿನ ಆರ್ಥಿಕ ಯುದ್ಧಕ್ಕೆ ವಾಲುತ್ತಿರುವ ವಿಶ್ವದ ಆರ್ಥಿಕತೆಗೆ ಆತಂಕದ ಕ್ಷಣಗಳು ಎದುರಾಗಿದೆ. ಬೀಜಿಂಗ್ ಪ್ರತೀಕಾರದ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ,  ಟ್ರಂಪ್ ಚೀನಿ ಸರಕುಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ಪಾವತಿಸುವಂತೆ ಬೆದರಿಸುತ್ತಿದ್ದಾರೆ. ಎರಡೂ ರಾಷ್ಟ್ರಗಳು ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದು,  ಚೀನಾದ ವಾಣಿಜ್ಯ ಸಚಿವಾಲಯ ಅಮೆರಿಕದ ಈ ನಡೆಯನ್ನು ವಿಶಿಷ್ಟ ವ್ಯಾಪಾರದ ಬೆದರಿಕೆ ಎಂದು ಜರೆದಿದ್ದು, ದೇಶದ ಪ್ರಮುಖ ಆಸಕ್ತಿಗಳನ್ನು ಮತ್ತು ಜನರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ನಾವು ಪ್ರತೀಕಾರದ ಕ್ರಮವನ್ನು ಬಲವಂತವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದೆ. ಆಮೆರಿಕ ವಕ್ತಾರರ ಸ್ಟೀವ್ ಬ್ಯಾನಾನ್ನ್, ಚೀನಾ ಕಳೆದ ೨೦ ವರ್ಷಗಳಿಂದ ಸುಂಕದ ಯುದ್ದದಲ್ಲಿ ತೊಡಗಿದ್ದು, ಈಗ ನಾವು ಎದ್ದು ನಿಂತು ಮರು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಎರಡು ರಾಷ್ಟ್ರಗಳ ವ್ಯಾಪಾರ ಯುದ್ಧ ಭಾರತ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತ(ಶೇ.೭.೫ ದರ), ನೋಟ್ಯಾಂತರ, ಜಿ.ಎಸ್.ಟಿ ಮುಂತಾದ ಆತಂಕಗಳಿಂದ ಶೀಘ್ರವಾಗಿ ಚೇತರಿಸಿಕೊಂಡಿದೆ. ಸ್ಟಾಕ್ ಮಾರುಕಟ್ಟೆಯ ಸೆನ್ಸೆಕ್ಸ್‌ನ ನಾಗಾಲೋಟ ಸಾಮಾನ್ಯ ಜನರಲ್ಲಿರುವ ಆಶಾವಾದವನ್ನು ಸೂಚಿಸುತ್ತದೆ. ಇತ್ತೀಚೆಗೆ ಆರಂಭವಾಗಿರುವ ಚೀನಾ ಅಮೆರಿಕ ವ್ಯಾಪಾರ ಯುದ್ಧ ಪ್ರಭಲವಾಗುವ ಲಕ್ಷಣಗಳು ಗೋಚರಿಸುತ್ತಿದ್ದು,  ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀgರುವ ಸಾಧ್ಯತೆ ಇದೆ. ಜಾಗತಿಕ ವ್ಯಾಪಾರ ಯುದ್ಧದ ಕಳವಳಗಳ ಮಧ್ಯೆ, ಹೂಡಿಕೆದಾರರು ಜಾಗರೂಕತೆಯಿಂದ ಕೊಡು ಕೊಳ್ಳುವಿಕೆಯಲ್ಲಿ ತೊಡಗಿದ್ದು,  ಸೆನ್ಸೆಕ್ಸ್ ಸುಮಾರು ೩೮೦೦೦ ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಸರಾಸರಿ ವ್ಯಾಪಾರಕ್ಕೆ ಹೋಲಿಸಿದರೆ ಇದು ಕಡಿಮೆಯೇ.

ಅಮೆರಿಕ ಸ್ಟೀಲ್ ಮತ್ತು ಅಲ್ಯುಮೀನಿಯಂ ಮೇಲಿನ ಸುಂಕ ಹೆಚ್ಚಳ ಮಾಡಿರುವುದರಿಂದ,  ಭಾರತಕ್ಕೆ ೨೪೨ ಮಿಲಿಯನ್ ಡಾಲರ್‌ನಷ್ಟು ಹೊರೆಯಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ವಿಽಸಿದ ಸುಂಕದಿಂದಾಗಿ ಅಮೇರಿಕಾವು ಭಾರತಕ್ಕೆ ಸುಮಾರು ೨೩೮ ಮಿಲಿಯನ್ ಡಾಲರ್ ಪಾವತಿಸಬೇಕಾಗಿದೆ. ಈ ಎಲ್ಲಾ ಕರದ ಭಾರ ಕೊನೆಯದಾಗಿ ಗ್ರಾಹಕನ ತಲೆ ಮೇಲೆ ಬೀಳುತ್ತದೆ. ಗ್ರಾಹಕನಿಗೆ ವಸ್ತುಗಳು ದುಬಾರಿಯಾಗುತ್ತದೆ. ಕೈಗಾರಿಕೆಗಳು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಸಮಸ್ಯೆಯನ್ನು ಎದುರಿಸುತ್ತದೆ.

ಪ್ರಸ್ತುತ ಅನಿಶ್ಚಿತ ಪರಿಸ್ಥಿಯಲ್ಲಿ ವ್ಯವಹಾರ ಪರಿಸರವನ್ನು ಸ್ಥಿರವಾಗಿಡಲು ಭಾರತೀಯ ಉದ್ಯಮಿಗಳ ಪಾತ್ರ ಪ್ರಮುಖವಾಗಿದೆ. ಮುಂಬರುವ ಎಲ್ಲಾ ರೀತಿಯ ಘಟನೆಗಳಿಗೆ ಸನ್ನದ್ದವಾಗಬೇಕು.  ಸುಂಕ ಯುದ್ಧ ಕಾರ್ಯರೂಪಕ್ಕೆ ಬರದೇ ಇದ್ದಲ್ಲಿ, ಭಾರತ ಮತ್ತು ವಿಶ್ವ ಆರ್ಥಿಕತೆಗೆ ಬೆಳವಣಿಗೆಗೆ ಆಪಾರ ಸಾಧ್ಯತೆ ಇದ್ದು ಅದನ್ನೂ ಕೂಡ ಸದುಪಯೋಗ ಪಡಿಸಿಕೊಳ್ಳಲು ಭಾರತ ತಯಾರಿರಬೇಕು.ಭಾರತ ತನ್ನ ಪ್ರಮುಖ ವ್ಯಾವಹಾರ ಸಂಬಂಧ ಆದ್ಯತೆಗಳನ್ನು ಕಳೆದುಕೊಳ್ಳದೆ ಜಾಗರೂಕತೆಯಿಂದ ಚಲಿಸಬೇಕು.

 ನಿಗೂಢ ಅಸ್ಪಷ್ಟ ಹಾಗೂ ರಕ್ಷಣಾತ್ಮಕ ವ್ಯಾಪಾರ ಯುದ್ಧದ ವಾತಾವರಣದಲ್ಲಿ ಭಾರತವು ಕೃಷಿ, ಕೈಗಾರಿಕಾ ಸರಕು ಮತ್ತು ಸೇವೆಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ಅಮೆರಿಕ ತನ್ನ ಶಕ್ತಿಶಾಲಿ ಕೃಷಿ ಲಾಬಿಗಳಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದು, ಭಾರತದಲ್ಲಿ ಅಕ್ಕಿ ಮತ್ತು ಗೋಽಗೆರ ಘೋಷಿಸದ ಕೃಷಿ ಬೆಂಬಲ ಕಾರ್ಯಕ್ರಮಗಳು  ವಿಶ್ವ ವಾಣಿಜ್ಯ ಸಂಸ್ಥೆಯ ಬದ್ಧತೆಯ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಿದೆ. ವ್ಯಾಪಾರ ಯುದ್ಧದಿಂದ ಉದ್ಬವಿಸಿರುವ ಅವಾಕಾಶಗಳನ್ನು ಉಪಯೋಗಿಸಿಕೊಂಡು ಭಾರತೀಯ ಕೃಷಿ ರ-ದಾರರು ಸೋಯಾಬೀನ್ ಮತ್ತು ಹಾಲಿನ ಉತ್ಪನ್ನಗಳನ್ನು ರ- ಮಾಡಬಹುದು.ಭಾರತ ಚೀನಾ ಮತ್ತು ಇತರ ದೇಶಗಳ ಬೇಡಿಕೆಯನ್ನು ಸಮರ್ಥವಾಗಿ ತುಂಬುವ ಮೂಲಕ ರಫ್ತಿನ ಜತೆ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು.

ಈಗ ನಡೆಯುತ್ತಿರುವ ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧ ವ್ಯಾಪಾರದ ಬಗ್ಗೆ ಅಲ್ಲ. ಇದು ಎರಡು ದೊಡ್ಡ ದೇಶಗಳಲ್ಲಿ ಏಕಕಾಲದಲ್ಲಿ ನಡೆಯುವ ಪ್ರಮುಖ ದೀರ್ಘಾವಽ ಬೆಳವಣಿಗೆಗಳು. ವಿಶ್ವದ ಆರ್ಥಿಕ ಮತ್ತು ತಾಂತ್ರಿಕ ಪಾರಮ್ಯಕ್ಕಾಗಿ ನಡೆಯುವ ಸ್ಪರ್ಧೆ ಇದು. ಇದರೊಂದಿಗೆ ಜಗತ್ತಿನಲ್ಲಿ ಜನಪ್ರಿಯವಾದ ಪ್ರತ್ಯೇಕತಾವಾದಿ ಮತ್ತು ರಕ್ಷಣಾತ್ಮಕ ಭಾವನೆಗಳ ಪುನರುಜ್ಜೀವನವನ್ನು ಕೂಡಾ ಕಾಣಬಹುದಾಗಿದೆ. ವ್ಯಾಪಾರ ಯುದ್ಧದಿಂದ ಉಂಟಾಗುವ ಹಣದುಬ್ಬರ ಮತ್ತು ಕುಂಠಿತ ಬೆಳವಣಿಗೆಗಳು ಜಾಗತಿಕ ಮತ್ತು ದೇಶೀಯ ಸವಾಲುಗಳಿಗೆ ಕಾರಣವಾಗಲಿದ್ದು,  ಒದತರ ಸಂಯೋಜಿತ ಪರಿಣಾಮಗಳಿಂದಾಗಿ ಭಾರತೀಯ ಆರ್ಥಿಕತೆಯಲ್ಲಿ ಗಮನಾರ್ಹ ಬದಲಾವಣೆ ಮತ್ತು ಆರ್ಥಿಕ ಒತ್ತಡ ಉಂಟಾಗಬಹುದು.

Tags

Related Articles

Leave a Reply

Your email address will not be published. Required fields are marked *

Language
Close