About Us Advertise with us Be a Reporter E-Paper

ಸಿನಿಮಾಸ್

ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುವ ‘ಬೆಲ್ ಬಾಟಂ’ ಪೋಸ್ಟರ್‌ಗಳು

ಟ್ರೇಲರ್, ಟ್ರೀಸರ್, ಮೋಷನ್ ಪೋಸ್ಟರ್‌ ಬೆಲ್ ಬಾಟಂ’ ಪೋಸ್ಟರ್‌

ಪೋಸ್ಟರ್ ಮೂಲಕ ಜನರ ತಲೆಗೆ ಹುಳ ಬಿಡುತ್ತಿದದ್ದು ಉಪೇಂದ್ರ, ಶೃಂಗಾರವನ್ನು ಸಿನಿಮಾದಲ್ಲಷ್ಟೇ ಅಲ್ಲದೇ ಪೋಸ್ಟರ್‌ನಲ್ಲಿಯೂ ತುಂಬುತ್ತಿದದ್ದು ರವಿಚಂದ್ರನ್. ಟ್ರೇಲರ್, ಟ್ರೀಸರ್, ಮೋಷನ್ ಪೋಸ್ಟರ್‌ಗಳ ಆರಂಭವಾಗುವುದಕ್ಕೂ ಮುನ್ನ ಸಿನಿಮಾಗೆ ಜನರನ್ನು ಸೆಳೆಯಲು ಇದ್ದ ಏಕೈಕ ಮಾರ್ಗ ಪೋಸ್ಟರ್ ಆಗಿತ್ತು.

ಬಹಳ ಸಲ ಇಡೀ ಸಿನಿಮಾದ ಒಟ್ಟು ಕತೆಯನ್ನು ಒಂದು ಪೋಸ್ಟರ್‌ನಲ್ಲಿಯೇ ತುಂಬಿ ಕೊಡುವ ಪ್ರಯತ್ನ ಕೂಡಾ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪೋಸ್ಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಸಿನಿಮಾಗಳು ಕಡಿಮೆ. ಎಷ್ಟೋ ಸಿನಿಮಾಗಳಲ್ಲಿ ಹಾಡಿನ ದೃಶ್ಯದ ಒಂದು ಫೋಟೋ ತೆಗೆದು ಅದಕ್ಕೆ ಸಿನಿಮಾದ ಹೆಸರು ಹಾಕಿ ಅದಕ್ಕೆ ಪೋಸ್ಟರ್ ಎಂಬ ನಾಮಕರಣ ಮಾಡಿ ಇತಿಶ್ರೀ ಹಾಡುತ್ತಿದ್ದರು. ಟ್ರೆಂಡ್‌ಅನ್ನು ಮತ್ತೆ ನೆನಪಿಸುವ ಪ್ರಯತ್ನ ಮಾಡಿದ್ದು ‘ಬೆಲ್‌ಬಾಟಂ’ ಸಿನಿಮಾ. ಸಾಮಾನ್ಯವಾಗಿ ನಟ ನಟಿಯರನ್ನು ಪ್ರಾಡಕ್‌ಟ್ ಪ್ರಮೋಷನ್‌ಗೆ ಬಳಸಿಕೊಳ್ಳುವುದು ಸಹಜ. ಆದರೆ ಇಲ್ಲಿ ಒಂದಿಷ್ಟು ಹಳೆಯ ಪ್ರಾಡಕ್‌ಟ್ಗಳನ್ನು ಸಿನಿಮಾ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಇದೊಂದು 80ರ ದಶಕದಲ್ಲಿ ನಡೆಯುವ ಕತೆ. ಈ ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಹೇಗೆ ಮಾಡಬಹುದು ಎಂಬ ಆಲೋಚನೆಯಲ್ಲಿದ್ದ ನಮಗೆ ನಮ್ಮ ಸಿನಿಮಾದ ಕತೆಗಾರ ಟಿ.ಕೆ.ದಯಾನಂದ್ ಈ ಹಳೆಯ ಜಾಹಿರಾತುಗಳನ್ನು ಇಟ್ಟುಕೊಂಡು ಸಿನಿಮಾ ಪೋಸ್ಟರ್ ಮಾಡುವ ಐಡಿಯಾ ಈ ಎಲ್ಲಾ ಪೋಸ್ಟರ್‌ಗಳನ್ನು ಮಾಡಿದ್ದು ಅವರೇ. ಪ್ರಚಾರ ಎಂದಷ್ಟೇ ಅಲ್ಲ ಸಿನಿಮಾಗೂ ಈ ಪೋಸ್ಟರ್‌ಗಳಿಗೂ ಸಂಬಂಧವಿದೆ. ಪ್ರತಿ ಪೋಸ್ಟರ್ ಕೂಡಾ ಸಿನಿಮಾದೊಳಗಿನ ಮುಖ್ಯ ಸಂದರ್ಭವನ್ನು ಹೇಳುತ್ತಿದೆ. ಇದು ಸಿನಿಮಾ ನೋಡಿದ ನಂತರ ಪ್ರೇಕ್ಷಕನಿಗೆ ಅರ್ಥವಾಗುತ್ತದೆ.
ಜಯತೀರ್ಥ ನಿರ್ದೇಶಕ

Tags

Related Articles

Leave a Reply

Your email address will not be published. Required fields are marked *

Language
Close