About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಟಿಕೆಟ್ ದರ ಬಿಡುಗಡೆ

ದೆಹಲಿ-ವಾರಣಾಸಿ ನಡುವೆ ಸಂಚರಿಸಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಥವಾ ಟ್ರೇನ್‌ 18ರ ಟಿಕೆಟ್‌ ದರಗಳನ್ನು ಬಿಡುಗಡೆ ಮಾಡಲಾಗಿದೆ.

ದೆಹಲಿ-ವಾರಣಾಸಿ ಪ್ರಯಾಣಕ್ಕೆ AC ಕುರ್ಚಿಯಾನಕ್ಕೆ 1,850ರುಗಳು, ಎಕ್ಸಿಕ್ಯೂಟಿವ್‌ ದರ್ಜೆಗೆ 3,520ರುಗಳನ್ನು ಟಿಕೆ‌ಟ್‌ ದರವನ್ನಾಗಿ ನಿಗದಿಪಡಿಸಲಾಗಿದೆ. ರಿಟರ್ನ್‌ ಪ್ರಯಾಣದ ದರಗಳು ಕ್ರಮವಾಗಿ 55ರುಗಳು ಹಾಗು 50ರುಗಳಷ್ಟು ಅಗ್ಗವಿರಲಿವೆ. ಪ್ರಯಾಣದ ಅವಧಿಯಲ್ಲಿ ವಿವಿಧ ದರಗಳ ಆಹಾರವೂ ಲಭ್ಯವಿರಲಿದೆ.

ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ಟಿಕೆಟ್‌ನ 1.5ರಷ್ಟು ದರ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೆಮಿ ಹೈಸ್ಪೀಡ್‌ ರೈಲಿನ ಸಂಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 15ರಂದು ಚಾಲನೆ ನೀಡಲಿದ್ದಾರೆ.

ದೆಹಲಿಯಿಂದ ವಾರಣಾಸಿಗೆ ತೆರಳುವ ಮಾರ್ಗದಲ್ಲಿ ಎಕ್ಸಿಕ್ಯೂಟಿವ್‌ ದರ್ಜೆ ಪ್ರಯಾಣಿಕರಿಗೆ ಚಹಾ ಉಪಹಾರ ಹಾಗು ಭೋಜನಗಳಿಗೆ 399ರುಗಳನ್ನು ನಿಗದಿ ಮಾಡಲಾಗಿದ್ದು, ಕುರ್ಚಿಯಾನದ ಪ್ರಯಾಣಿಕರಿಗೆ 344ರುಗಳ ದರ ನಿಗದಿಪಡಿಸಲಾಗಿದೆ.

 

 

Tags

Related Articles

Leave a Reply

Your email address will not be published. Required fields are marked *

Language
Close