ಗಣರಾಜ್ಯೋತ್ಸವಕ್ಕೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

Posted In : ಬೆಂಗಳೂರು

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನಗರ ಸಂಚಾರ ಪೊಲೀಸರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದ ಸುತ್ತಮುತ್ತ ಸೂಕ್ತ ಸಂಚಾರ ವ್ಯವಸ್ಥೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ತಿಳಿಸಿದರು.

ಹಳದಿ ಪಾಸ್ ಹೊಂದಿರುವ ಆಹ್ವಾನಿತರು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ, ಮೈದಾನಕ್ಕೆ ಪ್ರವೇಶ ದ್ವಾರ 1, ಬಿಳಿ ಪಾಸ್ ಹೊಂದಿ ರುವ ಗಣ್ಯರು ದ್ವಾರ 2ರಲ್ಲಿ ಮತ್ತು ಪಿಂಕ್ ಪಾಸುದಾರರು ದ್ವಾರ 3ರಲ್ಲಿ ಪ್ರವೇಶಿಸಬೇಕು. ಹಸಿರು ಪಾಸ್ ಹೊಂದಿರುವವರು ದ್ವಾರ 4 ಮತ್ತು 5 ರಲ್ಲಿ ಕಾಲ್ನಡಿಗೆಯಲ್ಲಿ ಪ್ರವೇಶಿಸಬೇಕೆಂದು ಹೇಳಿದರು.

ಎಂ.ಜಿ.ರಸ್ತೆ, ಅನಿಲ್‍ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳನ್ನು ಕರೆತರುವ ಬಿಎಂಟಿಸಿ ಬಸ್‍ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 26ರಂದು ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆ ಮಾರ್ಗದ ಬಿ.ಆರ್.ವಿ ಜಂಕ್ಷನ್‍ನಿಂದ ಕಾಮರಾಜ ಜಂಕ್ಷನ್‍ವರೆಗೆ ಎರಡು ದಿಕ್ಕುಗಳಿಂದ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಹಾಗೂ ಸಂಚಾರ ದಟ್ಟಣೆ ತಡೆಗಟ್ಟಲು ಸಾರ್ವ ಜನಿಕರು ನಗರ ಸಾರಿಗೆ ವ್ಯವಸ್ಥೆ ಹಾಗೂ ಮೆಟ್ರೋ ಸೇವೆ ಬಳಸುವಂತೆ ಆಯುಕ್ತರು ಮನವಿ ಮಾಡಿದರು.

Leave a Reply

Your email address will not be published. Required fields are marked *

nineteen − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top