About Us Advertise with us Be a Reporter E-Paper

ದೇಶಯಾತ್ರಾಯಾತ್ರಾ panel 1
Trending

ಬೆಳ್ನೊರೆಯಾಗಿ ಧುಮ್ಮಿಕ್ಕುವ ಜೀವಧಾರೆಯ ಸೌಂದರ್ಯಕ್ಕೆ ಸಾಟಿಯಿಲ್ಲ (ವಿಡಿಯೋ)

ದಟ್ಟಡವಿ, ಮಂಜು, ಪಕ್ಷಿಗಳ ಕಲರವ, ಇಬ್ಬನಿ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾನುವ ಹಸಿರ ಹೊದಿಕೆಗಳೆಲ್ಲವನ್ನೂ ಕಣ್ಮನಕ್ಕೆ ಉಣಬಡಿಸುವ ಈ ವಿಡಿಯೋ ವಾಟ್ಸಾಪ್‌ನಲ್ಲಿ ಸಾಕಷ್ಟು ರವಾನೆಯಾಗುತ್ತಿದೆ. 

ಉತ್ತಮ ಮಳೆಯಾಗುತ್ತಿರುವ ಕಾರಣ ಮಹಾರಾಷ್ಟ್ರದ ನಾಶಿಕ್‌ ಬಳಿಯ ತ್ರಯಂಬಕೇಶ್ವರದಲ್ಲಿರುವ ಪಶ್ಚಿ ಘಟ್ಟಗಳ ಸಾಲುಗಳಲ್ಲಿನ ಜಲಪಾತಗಳು ಮೈದುಂಬಿಕೊಂಡಿದ್ದು, ಶ್ರೇಣಿಯುದ್ದಕ್ಕೂ ಅಲ್ಲಲ್ಲಿ ಸಣ್ಣ ಪುಟ್ಟ ಝರಿಗಳು, ಬೆಟ್ಟಗಳ ಕೆಳಗೆ ಆರಂಭವಾಗಿರುವ ಭತ್ತದ ಬಿತ್ತನೆ ನೋಡುಗರನ್ನು ಮೂಕವಿಸ್ಮಿತರಾಗುಷ್ಟರ ಮಟ್ಟಿನ ಸೌಂದರ್ಯವನ್ನು ಸೃಷ್ಟಿಸಿದೆ.

ದಟ್ಟಡವಿ, ಮಂಜು, ಪಕ್ಷಿಗಳ ಕಲರವ, ಇಬ್ಬನಿ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾನುವ ಹಸಿರ ಹೊದಿಕೆಗಳೆಲ್ಲವನ್ನೂ ಕಣ್ಮನಕ್ಕೆ ಉಣಬಡಿಸುವ ಈ ವಿಡಿಯೋ ವಾಟ್ಸಾಪ್‌ನಲ್ಲಿ ಸಾಕಷ್ಟು ರವಾನೆಯಾಗುತ್ತಿದೆ.

ದೇಶದ ಏಳು ಪವಿತ್ರ ಮಹಾನದಿಗಳಲ್ಲಿ ಒಂದಾದ ಗೋದಾವರಿಯ ಉಗಮಸ್ಥಾನ ಇದೇ ಶ್ರೇಣಿಯಾಗಿದೆ. ಅಲ್ಲದೇ 12 ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ತ್ರಯಂಬಕೇಶ್ವರ ಜ್ಯೋತಿರ್ಲಿಂಗದ ಸ್ಥಳವೂ ಇದೇ ಆಗಿದೆ.

ಮಾನ್ಸೂನ್‌ ಪ್ರಭಾವಕ್ಕೆ ಈ ಬಾರಿ ದೇಶದ ಕೆಲ ಭಾಗಗಳಲ್ಲಿ ಅತ್ಯುತ್ತಮ ಮಳೆಯಾಗುತ್ತಿದೆ. ಅದರಲ್ಲೂ, ಉಷ್ಣವಲಯದ ಮಳೆಕಾಡುಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳಲ್ಲಂತೂ ವರುಣ ಆರ್ಭಟ ಇನ್ನೂ ಹೆಚ್ಚು.

ಮಳೆಯ ಅಬ್ಬರಕ್ಕೆ ಘಟ್ಟ ಪ್ರದೇಶಗಳ ಎಲ್ಲ ಸಣ್ಣ ಪುಟ್ಟ ನದಿ, ತೊರೆಗಳು, ಝರಿಗಳು ಜೀವತುಂಬಿಕೊಂಡಿದ್ದು ಕಣ್ಮನ ಸೆಳೆಯುವ ದೃಶ್ಯಾವಳಿಗಳನ್ನು ಸೃಷ್ಟಿಸಿವೆ. ಘಟ್ಟಗಳ ಎಲ್ಲೆಡೆ ಜಲಾತಗಳು ಮೈತುಂಬಿದ್ದು ಪ್ರವಸಿಗರನ್ನು ಕೈ ಬೀಸಿ ಕರೆಯುತ್ತಿವೆ.

 

Related Articles

Leave a Reply

Your email address will not be published. Required fields are marked *

Language
Close