About Us Advertise with us Be a Reporter E-Paper

ವಿ +

ತ್ರಿಮೂರ್ತಿ ಸ್ನೇಹಿತರು…

- ಮಲ್ಲಿಕಾರ್ಜುನ ಮೇತ್ರಿ, ಹಿಂಚಗೇರಿ

ಕಾಲೇಜು ಮುಗಿದು ಹಾಸ್ಟೇಲಿಗೆ ಬಂದು ಮಲಗಿದ್ದೆ. ಪಕ್ಕದಲ್ಲಿದ್ದ ಮೊಬೈಲ್ ರಿಂಗ್ ಆಯಿತು, ಎದ್ದು ನೋಡಿದರೆ ಅದು ನನ್ನ ಆತ್ಮೀಯ ಅಭಿ. ಅವನು ತುಂಬಾ ದಿನಗಳ ನಂತರ ಕಾಲ್ ಮಾಡಿದ್ದ. ಹೀಗೆ ಪರಸ್ಪರ ಇಬ್ಬರು ಯೋಗ ಕ್ಷೇಮ, ಸುಖ-ದುಃಖ ವಿಷಯಗಳನ್ನು ವಿನಿಮಯ ಮಾಡಿಕೊಂಡು ನಂತರ ಕಾಲ್ ಕಟ್ ಮಾಡಿದ. ಹಾಗೇ ಅವನ ಜತೆ ಕಳೆದ ಕಾಲೇಜಿನ ದಿನಗಳು ನೆನಪಿಗೆ ಬಂದು ಮೈ ರೊಮಾಂಚನಗೊಂಡು ಕಣ್ಣಂಚಲಿ ಹನಿ ನೀರು ತುಂಬಿ ಕೊಂಡಿತು.

ನಾವು ಎ3 ಗೆಳೆಯರು ಅಂದರೆ ಅಭಿ, ಅಜೀತ, ಅರ್ಜುನ್. ಯಾವಾಗಲೂ ನಾವು ಮಾಡುವ ಒಳ್ಳೆಯ ಕೆಲಸ ನಮಗೆ ಆರತಿ ನಮ್ಮಲ್ಲಿ ಯಾರು ಏನೇ ಮಾಡಿದರೂ ಮೂವರಿಗೂ ಜತೆ ಜತೆಯಾಗಿಯೇ ಮಂಗಳಾರುತಿ ಆಗುತ್ತಿತ್ತು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ನಾವು ಹಿಂದುಗಡೆ ಕುಳಿತು ಮೊಬೈಲ್‌ನಲ್ಲಿ ಗೇಮ್, ಕೀಟಲೆ, ದಾಂಧಲೆ ಹೀಗೆ ಕುಚೇಷ್ಟೆ ಮಾಡುತ್ತಿದ್ದೆವು, ಆದರೂ ಸಹ ಯಾರೂ ನಮ್ಮನ್ನು ಕೇಳುತ್ತಿರಲಿಲ್ಲ. ಕಾರಣ ಮೊದಲೆಲ್ಲ ಕೇಳಿ ಬಾಯಿಗೆ ಬಂದದ್ದು ಬೈದು ಅವರ ಬಾಯಿಯೂ ಜಡ್ಡುಗಟ್ಟಿತ್ತು. ಇವರಿಗೆ ಏನೇ ಬೈದರೂ ಪ್ರಯೊಜನ ಇಲ್ಲವೆಂದು ಸುಮ್ಮನೆ ಇರುತ್ತಿದ್ದರು.

ಕಾಲೇಜಿನಲ್ಲಿ ಎಷ್ಟರ ಮಟ್ಟಿಗೆ ಹೆಸರು ಕ್ಯಾಂಪಸ್ ಒಳಗೆ ಎಲ್ಲೇ ಜಗಳವಾದರೂ, ಯಾವುದೇ ವಸ್ತು ಹಾಳಾದರು ಎಲ್ಲರೂ ನಮ್ಮನ್ನೇ ಕೈ ಮಾಡಿ ತೋರಿಸುವಷ್ಟು ಹವಾ ಇಟ್ಟುಕೊಂಡಿದ್ದೆವು. ಎಲ್ಲರಂತೆ ನಾವು ಒಂದು ದಿನವೂ ಸೆಮಿನಾರ್, ಪ್ರಾಜೆಕ್‌ಟ್, ಪ್ರಾರ್ಥನೆಗೆ ಹೋದವರಲ್ಲ. ಇಷ್ಟೆಲ್ಲ ಕುಖ್ಯಾತಿ ಪಡೆದಿದ್ದರೂ ಸಹ ಗೆಳೆಯ ಅಜೀತ ಪ್ರೀತಿ ಪ್ರೇಮ ಬಲೆಗೆ ಸಿಲುಕಿಕೊಂಡ. ಕೊನೆಗೆ ಅವನ ಪ್ರೀತಿ ಹೀಗೆ ಬಂದು ಹಾಗೆ ಹಾರಿ ಹೋದ ಪಕ್ಷಿಯಂತೆ ಆಯಿತು. ಅಷ್ಟರಲ್ಲೇ ಪರೀಕ್ಷೆ ಬಂದೇ ಬಿಟ್ಟಿತು, ಅದರ ಬಗ್ಗೆ ನಮಗೆ ಇರಲಿಲ್ಲ ಕಾರಣ ಅದರ ಬಗ್ಗೆ ನಾವೆಂದೂ ತೆಲೆನೇ ಕೆಡಿಸಿಕೊಂಡವರಲ್ಲ.

ನಕಲು ಮಾಡಿದರಾಯ್ತು ಎಂದು ನಿಶ್ಚಿಂತೆಯಿದಿದ್ದೆವು. ಅದರಂತೆ ಅಜೀತ ಗೈಡನ್ನೆ ಹರಿದುಕೊಂಡು ನಕಲು ಮಾಡುತ್ತಿದ್ದ ಆದರೆ ನಾನು ಅಭಿ ಮೊಬೈಲ್‌ನಲ್ಲಿ ಪೋಟೊ ತೆಗೆದು ಬರೆಯುತ್ತಿದ್ದೆವು. ಇದನ್ನು ನೋಡಿದ ಪ್ರಾಂಶುಪಾಲರು ನಮ್ಮನ್ನು ಚೇಂಬರ್‌ಗೆ ಕರೆಸಿ ಮಂಗಳಾರತಿ ಮಾಡಿದ್ದರು. ಆದರೂ ನಮಗೆ ಏನೂ ಅನಿಸಲಿಲ್ಲ ಕೊನೆಯಲ್ಲಿ ಅವರು ಹೇಳಿದ ಮಾತು ‘ಈ ನಿಮ್ಮ ಕಾಲೇಜು ಬದುಕು ಮುಂದೊಂದು ದಿನ ನಿಮಗೆ ಪಾಠ ಕಲಿಸುತ್ತದೆ’ ಆದರೂ ನಮಗೆ ತಲೆಗೆ ಹೋಗಲಿಲ್ಲ.

ಹೀಗೆ ತರ್ಲೆ ತುಂಟಾಟ, ಹಾಸ್ಯ, ಮೋಜು, ಮಸ್ತಿಯಿಂದ ಕಾಲೇಜಿನ ದಿನಗಳು ಮುಗಿದೇ ಹೋದವು ಆದರೆ ನಾವು ಏನೂ ಕಲಿಯಲಿಲ್ಲ. ನಂತರ ಕೆಲವು ದಿನಗಳಲ್ಲಿ ಅಭಿ ಮತ್ತು ಅಜೀತನಿಗೆ ಸರಕಾರಿ ನೌಕರಿ ಬಂದಿತು. ಆದರೆ ನಾನು ಮಾತ್ರ ಅವರ ಜತೆ ಕಳೆದ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ ಹೀಗೆ ತಲೆಗೆ ತೋಚಿದನ್ನು ಗೀಚುತ್ತಾ ನನ್ನ ಜೀವನವನ್ನು ಕಳೆಯುತ್ತಿದ್ದೇನೆ…

.

.

Tags

Related Articles

Leave a Reply

Your email address will not be published. Required fields are marked *

Language
Close