About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ನನ್ನನ್ನು ಪದಚ್ಯುತಿಗೊಳಿಸಿದರೆ ಜಗತ್ತಿನ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತೆ: ಟ್ರಂಪ್‌

ವಾಷಿಂಗ್ಟನ್​: ನನ್ನನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರೆ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿಯುವುದರ ಜತೆಗೆ ಜಗತ್ತಿನ ಅರ್ಥ ವ್ಯವಸ್ಥೆಯೂ ಬುಡಮೇಲಾಗುತ್ತದೆ  ಎಂದು ಸಂದರ್ಶನವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಯತ್ನ ನಡೆದರೆ ಅಮೆರಿಕಾ ದೇಶವೇ ಬಡತನದಲ್ಲಿ ಮುಳಗಲಿದೆ. ಅಮೆರಿಕಾದ ಪ್ರತೀ ಪ್ರಜೆಯೂ ಬಡವರಾಗುತ್ತಾರೆ. ಇದು ಸಾಧ್ಯವಾಗುತ್ತದೆ ಎಂದರೆ ನೀವು ನಂಬದೇ ಇರಬಹುದು ಆದರೆ ಈ ಯೋಚನೆ ನನ್ನಲ್ಲಿದೆ,” ಎಂದು ಫಾಕ್ಸ್​ ಮತ್ತು ಫ್ರೆಂಡ್ಸ್​ ಸಂದರ್ಶನದಲ್ಲಿ ಟ್ರಂಪ್​ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕದ ಮಾಜಿ ಅಟಾರ್ನಿ ಮೈಕೆಲ್​ ಕೋಹೆನ್​ ಇತ್ತೀಚೆಗಷ್ಟೇ ಟ್ರಂಪ್​ ವಿರುದ್ಧ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಚುನಾವಣಾ ಅಭಿಯಾನದ ಕಾನೂನುಗಳನ್ನು ಮುರಿಯುವಂತೆ ಟ್ರಂಪ್​ ಸೂಚನೆ ನೀಡಿದ್ದರು ಎಂದು ಆರೋಪಿಸಿದ್ದರು.

ಕೋಹೆನ್​ಗೆ ಈ ರೀತಿ ಸೂಚನೆ ನೀಡಿದ ನಂತರ ಟ್ರಂಪ್​, ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆಗಳನ್ನು ಅಮೆರಿಕಾದ ಜನತೆಗೆ ನೀಡುತ್ತ ಬಂದಿದ್ದರು. ಹಿಲರಿ ಕ್ಲಿಂಟನ್​ರನ್ನು ಗೆಲ್ಲಿಸಿದರೆ ಅಮೆರಿಕಾದ ಭವಿಷ್ಯ ಡೋಲಾಯಮಾನವಾಗಲಿದೆ ಎಂದೂ ಟ್ರಂಪ್​ ಹೇಳಿದ್ದಾರೆ.

“ದೇಶಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡಿದ ನನ್ನನ್ನು ಹೇಗೆ ಪದಚ್ಯುತಿ ಗೊಳಿಸಲು ಮುಂದಾಗುತ್ತಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ,” ಎಂದು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close