About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರತ ಮತ್ತು ಚೀನಾಕ್ಕೆ ಸಬ್ಸಿಡಿ ಸ್ಥಗಿತ: ಟ್ರಂಪ್

ಚಿಕಾಗೋ: ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಭಾರತ ಹಾಗೂ ಚೀನಾ ದೇಶಗಳಿಗೆ ನೀಡುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಘೋಷಿಸಿದ್ದಾರೆ.

ಉತ್ತರ ಡಕೋಟಾ ನಗರದಲ್ಲಿ ನಿಧಿ ಸಂಗ್ರಹ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ‘ಬಹು ದೊಡ್ಡ ಆರ್ಥಿಕ ಶಕ್ತಿ’ಯಾಗಲು ಚೀನಾಗೆ ಸಹಕರಿಸುತ್ತಿರುವುದಕ್ಕೆ ವಿಶ್ವ ವ್ಯಾಪಾರ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡರು. ಈ ರಾಷ್ಟ್ರಗಳು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿವೆ. ಇನ್ನು ಮುಂದೆ ಅಭಿವೃದ್ಧಿ ಸಾಧಿಸಲು ಹೆಣಗಾಡುತ್ತಿರುವ ರಾಷ್ಟ್ರಗಳಿಗೆ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ಭಾರತ, ಚೀನಾ ಮತ್ತಿತರ ರಾಷ್ಟ್ರಗಳಿಗೆ ಸಬ್ಸಿಡಿ ನೀಡುವುದು ಒಂದು ರೀತಿಯ ಕ್ರೇಜಿ ಎಂದು ಬಣ್ಣಿಸಿದ್ದಾರೆ.

ಇದುವರೆಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಂದು ಪ್ರತಿಪಾದಿಸುತ್ತಾ ಈ ಎರಡೂ ದೇಶಗಳೂ ಸಬ್ಸಿಡಿ ಪಡೆಯುತ್ತಿದ್ದವು. ಇನ್ನು ಮುಂದೆ ಸಬ್ಸಿಡಿಯನ್ನು ನಿಲ್ಲಿಸುತ್ತೇವೆ. ನಮ್ಮ ದೇಶವೂ ಅಭಿವೃದ್ಧಿ ಹೊಂದುತ್ತಿದೆ. ನನಗೆ ತಿಳಿದಿರುವಂತೆ ಅಮೆರಿಕವೂ ಅಭಿವೃದ್ಧಿ ಹೊಂದುತ್ತಿದೆ. ಬೇರಾವುದೇ ದೇಶಕ್ಕಿಂತ ನಾವು ವೇಗವಾಗಿ ಬೆಳೆಯಬೇಕಿದೆ ಎಂದು  ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close