
ಅಲಿಘಡ: ಮಕ್ಕಳಿಗೆ ಟ್ಯೂಷನ್ ಕೊಡುವ ಶಿಕ್ಷಕನೊಬ್ಬ ಏಳು ವರ್ಷದ ಬಾಲಕನಿಗೆ ಶೂ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆರು ನಿಮಿಷಗಳಿರುವ ಸಿಸಿ ಕ್ಯಾಮರಾ ಫೂಟೇಜ್ನಲ್ಲಿ ಏಳು ವರ್ಷದ ಬಾಲಕನ ಮೇಲೆ ತನ್ನ ಶೂನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತಲೆಗೆ ಹೊಡೆದು, ಕಿವಿ ಚಿವುಟಿದ್ದಾನೆ. ಬಾಲಕ ನೋವಿನಿಂದ ಅಳುತ್ತಿದ್ದರೂ ಕಲ್ಲು ಹೃದಯದವನಾದ ಟ್ಯೂಷನ್ ಟೀಚರ್ ಬಾಲಕನಿಗೆ ಇನ್ನಿಲ್ಲದ ಹಿಂಸೆ ನೀಡಿದ್ದಾನೆ. ಇವಿಷ್ಟೇ ಅಲ್ಲ ಶಿಕ್ಷಕ ಬಾಲಕನಿಗೆ ಬೆರಳನ್ನು ಕಚ್ಚುವಂತೆ ಹೇಳಿದ್ದಾನೆ. ಬಳಿಕ ಒಂದು ಗ್ಲಾಸ್ ನಲ್ಲಿ ಬಾಲಕನಿಗೆ ನೀರು ಕೊಟ್ಟು ಕಿರು ನಗೆಬೀರುವಂತೆ ಕೇಳಿದ್ದಾನೆ.
ಈ ಘಟನೆ ಮನೆಯ ರೂಮಿನೊಳಗೆ ನಡೆದಿದ್ದು, ಈ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ನೋಡಿದ ಬಳಿಕ ಬಾಲಕನ ತಂದೆ ಶಾಕ್ಗೆ ಒಳಗಾಗಿದ್ದಾರೆ. ಮನೆಯಲ್ಲಿ ಹಾರ್ಡ್ ವೇರ್ ಕೆಲಸ ಮಾಡುತ್ತಿದ್ದರಿಂದ ಆ ಶಬ್ಧದಲ್ಲಿ ಮಗು ಅಳುತ್ತಿರುವ ಶಬ್ದ ಯಾರಿಗೂ ಕೇಳಿಸುತ್ತಿರಲಿಲ್ಲ ಎಂದು ಬಾಲಕನ ತಂದೆ ಹೇಳಿದ್ದಾರೆ.
ಕೂಡಲೇ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯವನ್ನಾದರಿಸಿ ಟ್ಯೂಷನ್ ಟೀಚರ್ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.