About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸಿಬಿಐ ತನಿಖೆಗೆ ತೂತುಕುಡಿ ಹಿಂಸಾಚಾರ

ಚೆನ್ನೈ: ತೂತುಕುಡಿಯ ಸ್ಟರ್ಲೈಟ್‌ ಕಾಪರ್‌ ಘಟಕದ ಪ್ರತಿಭಟನೆ ವೇಳೆ ಪೊಲೀಸ್‌ ಫೈರಿಂಗ್‌ ನಡೆದ ವಿಚಾರವನ್ನು ಸಿಬಿಐ ತನಿಖೆಗೆ ಮದ್ರಾಸ್‌ ಹೈ ಕೋರ್ಟ್ ವಹಿಸಿದೆ.

13 ಜೀವಗಳನ್ನು ಬಲಿ ತೆಗೆದುಕೊಳ್ಳಲು ಕಾರಣವಾದ ಘಟನೆಯ ತನಿಖೆಯನ್ನು ನಾಲ್ಕು ತಿಂಗಳ ಕಾಲಾವಧಿಯಲ್ಲಿ ಮುಗಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಶಾಂತಿ ಕದಡಲು ಯತ್ನಿಸಿದ್ದ ಆಪಾದನೆ ಮೇಲೆ ಮಕ್ಕಳ್‌ ಅಧಿಕಾರಮ್‌ ಎಂಬ ಎಡಪಂಥೀಯ ಸಂಘಟನೆಯ ಆರು ಮಂದಿ ವಿರುದ್ಧ ಇದ್ದ ಆದೇಶವನ್ನು ಹೈಕೋರ್ಟ್ ವಜಾಮಾಡಿದೆ. ಇವರನ್ನು ರಾಷ್ಟ್ರೀಯ ಭದ್ರತೆ ಕಾಯಿದೆ ಅಡಿ ಬಂಧಿಸಲಾಗಿತ್ತು.

ತೂತುಕುಡಿಯಲ್ಲಿರುವ ತಾಮ್ರ ನಿರ್ಮಾಣ ಘಟಕದ ವಿರುದ್ಧ ಕೇಳಿ ಬರುತ್ತಿದ್ದ ಮಾಲಿನ್ಯದ ಆಪಾದನೆ ಸಂಬಂಧ ಜಿಲ್ಲಾಧಿಕಾರಿ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಈ ವೇಳೆ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಉಂಟಾಗಿತ್ತು.

ಮೇ 22-23ರಂದು ನಡೆದ ಹಿಂಸಾಚಾರವನ್ನು ತಹಬದಿಗೆ ತರಲು ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು. ಪ್ರತಿಭಟನೆ ವೇಳೆ ಕೆಲ ಪಾತಕಿಗಳು ಪೆಟ್ರೋಲ್‌ ಬಾಂಬ್‌ಗಳನ್ನು ಬಳಸಲು ಬಂದಿದ್ದರು ಎನ್ನಲಾಗಿದ್ದು, ಈ ಕುರಿತಂತೆ ವಿಡಿಯೋ ಸಾಕ್ಷ್ಯವನ್ನು ಒದಗಿಸಲು ಹೈಕೋರ್ಟ್ ಕೋರಿದೆ.

Tags

Related Articles

Leave a Reply

Your email address will not be published. Required fields are marked *

Language
Close