ಚುನಾವಣೆಯ ಕುರಿತು 3 ಮಿಲಿಯನ್‌ಗೂ ಹೆಚ್ಚು ಟ್ವೀಟ್!

Posted In : ದೇಶ

ದೆಹಲಿ: ದೇಶದ ಗಮನವನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಹವಾ ಟ್ವಿಟರ್‌ನಲ್ಲೂ ಮಾಡಿತ್ತು. ಏಪ್ರಿಲ್ 25ರಿಂದ ಮೇ 15ರ 20 ದಿನಗಳ ಅವಧಿಯಲ್ಲಿ ಟ್ವಿಟರ್ ನಲ್ಲಿ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ 30 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳು ಬಂದಿವೆ.

‘ಕರ್ನಾಟಕಎಲೆಕ್ಷನ್2018’ ಎಂಬ ಆ್ಯಶ್‌ಟ್ಯಾಗ್‌ನಲ್ಲೇ ಒಟ್ಟು 30 ಲಕ್ಷ ಟ್ವೀಟ್‌ಗಳು ಬಂದಿವೆ. ಚುನಾವಣೆಗೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌ನಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಜನರು ಚುನಾವಣೆ ಕುರಿತು ಬಿಸಿಬಿಸಿ ಚರ್ಚೆ ನಡೆಸಿದ್ದಾರೆ. ಚುನಾವಣೆಯ ರೋಚಕ ಬೆಳವಣಿಗೆಗಳನ್ನು ತಿಳಿಯಲು ಟ್ವಿಟರ್ ಉತ್ತಮ ವೇದಿಕೆಯಾಗಿ  ಮಾರ್ಪಟ್ಟಿತ್ತು.

ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶ ಹಾಗೂ ವಿದೇಶಗಳಿಂದಲೂ ಜನರು ಈ ಚುನಾವಣೆ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ನಡೆಸಿದ್ದಾರೆ. ‘ಚುನಾವಣಾ ಪ್ರಚಾರದುದ್ದಕ್ಕೂ ರಾಜಕೀಯ ಪಕ್ಷಗಳು ಪ್ರಚಾರ ಹಾಗೂ ಜನರ ಜತೆಗೆ ಸಂಪರ್ಕ ಬೆಳೆಸಿಕೊಳ್ಳಲು ಪಕ್ಷಗಳು ಹಾಗೂ ನಾಯಕರು ಟ್ವಿಟರ್ ಅನ್ನು ಪ್ರಮುಖ ವೇದಿಕೆಯಾಗಿ ಬಳಸಿಕೊಂಡಿದ್ದಾರೆ’ ಎಂದು ಟ್ವಿಟರ್ ತಿಳಿಸಿದೆ.

Leave a Reply

Your email address will not be published. Required fields are marked *

1 + sixteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top