About Us Advertise with us Be a Reporter E-Paper

ವಿವಾಹ್

ಟ್ವಿನ್ಸ್ ವೆಡ್ಸ್ ಟ್ವಿನ್ಸ್

ಮಂದಾರ

ಅವಳಿ ಆಗಿ ಹುಟ್ಟಿದರೆ ಅದೇನೋ ಖುಷಿ. ನನ್ನಂತೆ ಅವಳು, ಅವಳಂತೆ ನಾನು ಎಂದುಕೊಂಡು ಒಂದೇ ತರದ ಡ್ರೆಸ್‌ಗಳನ್ನ ಧರಿಸಿ ನೋಡುಗರಿಗೆ ಗೊಂದಲ ಮೂಡಿಸಬಹುದು. ಹಾಗೆಯೇ ಅವಳಿ  ಅವಳಿ ಹುಡುಗರನ್ನೇ ಮದುವೆ ಆದರೆ ಹೇಗಿರುತ್ತದೆ? ಕೇಳಲು ರೋಮಾಂಚನಕಾರಿಯಾಗಿರುವ ಸಂಗತಿಯನ್ನು ಈ ಜೋಡಿ ಮಾಡಿ ತೋರಿಸಿದೆ. ಬ್ರಿಯಾನ ಮತ್ತು ಬ್ರಿಟಾನಿ, ಜೋಷ್ ಮತ್ತು ಜೆರೆಮಿ ಸಲ್ಯರ್‌ಸ್  ಎನ್ನುವ ಅವಳಿ ಜೋಡಿ ಹಸೆಮಣೆ ಏರಿದ್ದಾರೆ.

 ವಿಶೇಷವೆಂದರೆ ಇವರು ಈ ಮದುವೆಗೆ ಒಂದೊಳ್ಳೆಯ ಥೀಮ್‌ನ್ನು ನೀಡಿರುವುದು. ಟ್ವಿನ್‌ಸ್ಬರ್ಗ್‌ನಲ್ಲಿ, 2018ರ ಟ್ವಿನ್‌ಸ್ ಡೇ ಫೆಸ್ಟಿವಲ್ ದಿನ ಆಗಸ್‌ಟ್ 5ರಂದು ಈ ಎರಡೂ ಜೋಡಿ ‘ಟ್ವಿನ್‌ಸ್ ಅಪಾನ್ ಎ ಟೈಮ್’ ಎನುವ ಪರಿಕಲ್ಪನೆಯೊಂದಿಗೆ ದಾಂಪತ್ಯ  ಕಾಲಿಟ್ಟಿದೆ. ಅಂದ ಹಾಗೆ ಈ ಎರಡೂ ಜೋಡಿ ಪರಸ್ಪರ ಭೇಟಿಯಾಗಿದ್ದು ಕೂಡ  ಟ್ವಿನ್‌ಸ್ ಬರ್ಗ್‌ನ 2017ರ ಟ್ವಿನ್‌ಸ್ ಫೆಸ್ಟಿವಲ್‌ನಲ್ಲೇ ಅಂತೆ. ಹಲವು ವರ್ಷಗಳಿಂದ ಈ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದ ಬ್ರಿಯಾನ ಮತ್ತು ಬ್ರಿಟಾನಿ ಅವಳಿ ಸಹೋದರಿಯರಿಗೆ ಮೊದಲ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜೋಷ್ ಮತ್ತು ಜೆರೆಮಿ ಸಲ್ಯರ್‌ಸ್  ಎಂಬ ಅವಳಿ ಸಹೋದರರ ಜತೆ ಸ್ನೇಹವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇದೇ ವರ್ಷದ ಫೆಬ್ರವರಿ 2ರಂದು ಜೋಷ್ ಮತ್ತು ಜೆರೆಮಿ ಟ್ವಿನ್‌ಸ್  ಪ್ರಪೋಸ್ ಮಾಡಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಈ ಜೋಡಿ ಮದುವೆಯಾಗಿ ಒಂದೇ ಮನೆಯಲ್ಲಿ ಸಂಸಾರ ನಡೆಸಲು ಮುಂದಾಗಿದ್ದಾರೆ.

ಮದುವೆ ನಡೆಸಿಕೊಟ್ಟ ಪಾದ್ರಿಗಳು ಕೂಡ ಅವಳಿಗಳೇ! ವಧುವಿನ ಉದ್ದದ ಡ್ರೆಸ್ ಅನ್ನು ಹಿಡಿದು ಬಂದಿದ್ದು ಅವಳಿ ಪುಟಾಣಿಗಳು. ಮದುವೆಗೆ ಬಂದ ಅತಿಥಿಗಳೆಲ್ಲರೂ ಅವಳಿಗಳು. ಹೀಗೆ ಟ್ವಿನ್‌ಸ್ ಜೋಡಿಯ ಮದುವೆ, ಟ್ವಿನ್‌ಸ್ಗಳ ಸಮ್ಮುಖದಲ್ಲಿ ಟ್ವಿನ್‌ಸ್ಗಳ ಆಶಿರ್ವಾದದೊಂದಿಗೆ ಜರುಗಿದೆ. ಮುಂದೆ ಈ ಎರಡೂ ಜೋಡಿಗೆ ಯಾವ ರೀತಿಯ ಮಕ್ಕಳು ಹುಟ್ಟಬಹುದು ಎನ್ನುವ ಕಾತುರದಲ್ಲಿ  ಅವಳಿ ಮಕ್ಕಳೇ ಹುಟ್ಟಲಿ ಎಂದು ಹಾರೈಸುವುದರಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಒಂದೇ ಮನೆಯಲ್ಲಿ ಸಂಸಾರ ನಡೆಸುವ ಯೋಚನೆ ಯಲ್ಲಿರುವ ಈ ಜೋಡಿಗೆ ತಮ್ಮ ಹೆಂಡತಿ ಮತ್ತು ತಮ್ಮ ಗಂಡ ಯಾರೆಂಬ ಗೊಂದಲದಿಂದ ಅದಲು ಬದಲಾಗದಿದ್ದರೆ ಅಷ್ಟೇ ಸಾಕು.

Tags

Related Articles

Leave a Reply

Your email address will not be published. Required fields are marked *

Language
Close