ವಿಶ್ವವಾಣಿ

ನೀವು ಪ್ಯಾರಿಸ್ಸಿಗೆ ಹೋದಾಗ ನೋಡಲೇಬೇಕಾದ ಎರಡು ಸ್ಥಳಗಳು!

ದೃಷ್ಟವಶಾತ್, ನೀವು ಪ್ಯಾರಿಸ್ಸಿಗೆ ಹೋದರೆ ನೋಡಲೇಬೇಕಾದ ಎರಡು ಸ್ಥಳಗಳೆಂದರೆ, ‘ಕೆಫೇ ಮ್ಯಾಗ್ಸಿಮ್ಎಂಬ ಉಪಾಹಾರಗೃಹ ಮತ್ತು ದಿ ಮೆರೀರ್ ವಿಡೋಎಂಬ ಒಪೇರಾ (ಸಂಗೀತನಾಟಕ) ಪ್ರದರ್ಶನ. ಇವೆರಡಕ್ಕೂ ನೂರು ವರ್ಷಗಳ ಇತಿಹಾಸವಿದೆ ಮತ್ತು ಸಂಬಂಧವಿದೆ.

1902ರಲ್ಲಿ ಪ್ಯಾರಿಸ್ಸಿನ ಕೆಫೇ ಮ್ಯಾಗ್ಸಿಮ್ ಎಂಬ ಉಪಾಹಾರಗೃಹವಿತ್ತು. ಸಂಜೆ ಹಂಗೇರಿ ದೇಶದಿಂದ ಬಂದಿದ್ದ, ಬಹುಶಃ ಆಗಷ್ಟೇ ಮದುವೆಯಾಗಿದ್ದ ಯುವಕಯುವತಿಯ ಜೋಡಿಯೊಂದು ಅಲ್ಲಿ ಉಪಾಹಾರ ಸ್ವೀಕರಿುತ್ತಿದ್ದರು. ಪ್ರೀತಿಯ ಮಾತುಕತೆಗಳಲ್ಲಿ ಮೈಮರೆತಿದ್ದರು. ಕೊನೆಯಲ್ಲಿ ಉಪಾಹಾರದ ಬಿಲ್ಲು ಸಲ್ಲಿಸಲು ಜೇಬಿಗೆ ಕೈಹಾಕಿದ ಯುವಕ ಗಾಬರಿಯಾದ. ಏಕೆಂದರೆ ಆತನ ಪರ್ಸ್ ಕಳುವಾಗಿತ್ತು. ಆತ ಉಪಾಹಾರಗೃಹದ ಮಾಲೀಕನ ಬಳಿ ಹೋಗಿ ನನ್ನ ಪರ್ಸ್ ಕಳುವಾಗಿದೆ. ಅದರಲ್ಲಿದ್ದ ನನ್ನ ರೈಲ್ವೇ ಟಿಕೇಟುಗಳೂ ಕಳುವಾಗಿದೆ. ನನ್ನ ಮಾತನ್ನು ನಂಬಿ ಎಂದ.

ಮಾಲೀಕರು ಬಹುಶಃ ಸಹೃದಯರು. ಅವರು ನೀವೆಲ್ಲಿಯವರು? ಮಾಡುತ್ತೀರಿ? ಎಂದು ಕೇಳಿದರು. ಯುವಕ ನಾನು ಫ್ರಾನ್ಜ್ ಲೆಹೆರ್. ಹಂಗೇರಿ ದೇಶದವನು. ನಮ್ಮ ತಂದೆಯೂ ಸಂಗೀತಗಾರರು. ನಾನೂ ಸಂಗೀತಗಾರ. ನಾಟಕಗಳನ್ನೂ, ಕವನಗಳನ್ನೂ ಬರೆಯುತ್ತೇನೆ ಎಂದು ಪರಿಚಯಿಸಿಕೊಂಡ.

ಮಾಲೀಕರಿಗೆ ಏನೆನಿಸಿತೂ ಏನೋ? ಅವರು ನಾನೂ ನಿಮಗೊಂದಷ್ಟು ಹೆಚ್ಚಿಗೆ ಹಣ ಕೊಡುತ್ತೇನೆ. ಅದನ್ನುಪಯೋಗಿಸಿ ರೈಲ್ವೆ ಟಿಕೇಟುಗಳನ್ನು ಕೊಂಡುಕೊಳ್ಳಿ. ಹಣವನ್ನೂ, ಬಿಲ್ಲಿನ ಹಣವನ್ನೂ ನಿಮ್ಮೂರಿಗೆ ಹೋದ ನಂತರ ಕಳುಹಿಸಿಕೊಡಿ. ನಾನು ಸಾಹಿತಿಗಳನ್ನು, ಸಂಗೀತಗಾರರನ್ನು ನಂಬುತ್ತೇನೆ ಮತ್ತು ಗೌರವಿಸುತ್ತೇನೆ ಎನ್ನುತ್ತ ಲೆಹೆರ್ ಕೈಗೆ

ಮಾಲೀಕರ ಔದಾರ್ಯದಿಂದ ಬೆರಗಾದ ಲೆಹೆರ್, ನಾನೊಂದು ಸಂಗೀತನಾಟಕ ಬರೆಯುತ್ತಿದ್ದೇನೆ. ಅದರಲ್ಲಿ ನಿಮ್ಮ ಉಪಾಹಾರಗೃಹವನ್ನು ಪ್ರಸ್ತಾಪಿಸುತ್ತೇನೆ. ನಿಮಗೆ ಅದರಿಂದ ಪ್ರಚಾರ ಸಿಗಬಹುದು. ಅದರಿಂದ ನಿಮ್ಮ ಉಪಕಾರದ ಭಾರವನ್ನು ತೀರಿಸುತ್ತೇನೆ ಎಂದ. ಮಾಲೀಕರು ಮುಗುಳ್ನಕ್ಕು ನನಗೆ ನನ್ನ ಹಣ ಕಳುಹಿಸಿಕೊಟ್ಟರೆ ಸಾಕು ಎಂದು ಶುಭ ಹಾರೈಸಿ ಕಳುಹಿಸಿಕೊಟ್ಟರು. ಲೆರ್ಹೆ ಹಂಗೇರಿಗೆ ಹಿಂತಿರುಗಿದ ನಂತರ ಮಾಲೀಕರ ಅಷ್ಟೂ ಹಣವನ್ನು ಹಿಂತಿರುಗಿಸಿದರು. ಅಷ್ಟೇ ಅಲ್ಲ! ಅವರು ಬರೆದ ದಿ ಮೆರೀರ್ ವಿಡೋಎಂಬ ಸಂಗೀತನಾಟಕದಲ್ಲಿ ಮ್ಯಾಗ್ಸಿಮ್ಹೆಸರನ್ನು ಉಲ್ಲೇಖಿಸಿದರು.

1905 ಡಿಸೆಂಬರ್ 30ರಂದು ಪ್ರದರ್ಶನವನ್ನಾರಂಭಿಸಿದ ನಾಟಕ ಅದೆಷ್ಟು ಜನಪ್ರಿಯವಾಯಿತೆಂದರೆ ನೂರೈದು ವರ್ಷಗಳ ನಂತರವೂ ಇಂದಿಗೂ ಅಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮತ್ತು ಕೆಫೇ ಮ್ಯಾಗ್ಸಿಮ್ ಹೆಸರು ಪ್ರಸ್ತಾಪವಾಗುತ್ತಿದೆ. ನಾಟಕ ನೋಡಿದವರು ಕೆಫೆ ಮ್ಯಾಗ್ಸಿಮ್ಎಲ್ಲಿದೆಯೆಂದು ಕೇಳುವಂತಾಗಿದೆ.

ಇಂದು ಫ್ರಾನ್ಜ್ ಲೆಹೆರ್ ಇಲ್ಲ. ಕೆಫೇ ಮ್ಯಾಗ್ಸಿಮ್ ಮಾಲೀಕರೂ ಇಲ್ಲ. ಆದರೆ ದಿ ಮೆರೀರ್ ವಿಡೋಒಪೇರಾ ಮತ್ತು ಕೆಫೇ ಮ್ಯಾಗ್ಸಿಮ್ಪರಸ್ಪರ ನಂಬಿಕೆಯ ಮತ್ತು ಔದಾರ್ಯದ ಶಾಶ್ವತವಾಗಿ ನಿಂತಿವೆ.

ಇಂಗ್ಲೀಷಿನ ಹೆಸರಾಂತ ಸಾಹಿತಿ ಸಾಮರ್ಸೆಟ್ ಮಾಮ್ ಅವರ ದಿ ರೇಜರ್‌ಸ್ ಎಡ್‌ಜ್ಎಂಬ ಕಾದಂಬರಿಯಲ್ಲೂ ಕೆಫೇ ಮ್ಯಾಗ್ಸಿಮ್ ಹೆಸರು ಪ್ರಸ್ತಾಪವಾಗಿದೆ. ಕಾದಂಬರಿಯ ನಾಯಕ ಸತ್ಯವನ್ನೂ, ದೇವರನ್ನೂ ಅನ್ವೇಷಿಸಲು ಹೊರಡುತ್ತೇನೆ ಎಂದು ಘೋಷಿಸುವುದು ಕೆಫೇ ಮ್ಯಾಗ್ಸಿಮ್ನಲ್ಲಿ!

ಆತ ಭಾರತಕ್ಕೆ ಬಂದು ಮಾರ್ಗದರ್ಶನ ಪಡೆದುಕೊಳ್ಳುವುದು ತಿರುವಣ್ಣಾಮಲೈನಲ್ಲಿದ್ದ ಭಗವಾನ್ ರಮಣ ಮಹರ್ಷಿಗಳಲ್ಲಿ!

ಮುಂದೆ ಎಂದಾದರೂ, ನಮಗೂ ಯಾರಾದರೂ ಅಪರಿಚಿತರನ್ನು ನಂಬುವ ಮತ್ತು ಸಹಾಯ ಮಾಡುವ ಅವಕಾಶ ಸಿಗಬಹುದು. ಶಕ್ತಿಯಿದ್ದರೆ, ಹಾನಿಯಾಗದಿದ್ದರೆ ಸಹಾಯ ಮಾಡಬಹುದು. ಯಾರಿಗೆ ಗೊತ್ತು? ಹಾಗೆ ಸಹಾಯ ಪಡೆದವರು ನಮ್ಮ ಹೆಸರನ್ನು ಶಾಶ್ವತವಾಗಿರಿಸಬಹುದು! ಏಕೆಂದರೆ ನಂಬದೆಲೆ ಕೆಟ್ಟವರುಂಟು! ನಂಬಿ ಕೆಟ್ಟವರಿಲ್ಲ! ಒಪ್ಪಬಹುದಾದ ಮಾತುಗಳಲ್ಲವೇ?