About Us Advertise with us Be a Reporter E-Paper

Breaking Newsದೇಶಪ್ರಚಲಿತವಿದೇಶ
Trending

ಕೇರಳದ ಸಹಾಯಕ್ಕೆ ಧಾವಿಸಿದ ಯುಎಇ

ತಿರುವನಂತಪುರ: ಶತಮಾನ ಕಂಡರಿಯದ ಮಹಾ ಜಲಪ್ರಳಯಕ್ಕೆ ಈಡಾಗಿರುವ ಕೇರಳಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಸಹಾಯ ಹಸ್ತ ಚಾಚಿದೆ.

ಅರಬ್ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಟ್ವೀಟ್ ಮಾಡಿದ್ದು, ‘ಭಾರತದಲ್ಲಿನ ಕೇರಳ ರಾಜ್ಯವು ಭಾರಿ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಭಾರತದಲ್ಲಿನ ನಮ್ಮ ಸಹೋದರರಿಗೆ ಸಹಾಯ ಹಸ್ತವನ್ನು ನೀಡಲು ಮರೆಯಬೇಡಿ’ ಎಂದು ಕೇರಳದಲ್ಲಿನ ಸಂತ್ರಸ್ತರನ್ನ ರಕ್ಷಿಸುವ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಯುಎಇನ ಇಂದಿನ ಯಶಸ್ಸಿಗೆ ಕೇರಳ ಕೂಡ ಬಹು ಮುಖ್ಯ ಪಾತ್ರ ನಿರ್ವಹಿಸಿದೆ ಎಂದು ಶೇಖ್ ಮೊಹಮ್ಮದ್ ಹೇಳಿದ್ದಾರೆ. ಶೇಖ್ ಮೊಹಮ್ಮದ್ ಅವರ ನೇತೃತ್ವದಲ್ಲಿ ತುರ್ತು ಅಧಿಕಾರಿಗಳ ಸಭೆ ಕರೆದ ಅವರು, ಪ್ರವಾಹ ಪೀಡಿತ ಕೇರಳಕ್ಕೆ ತುರ್ತು ಪರಿಹಾರ ನೀಡುವ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈಗಾಗಲೇ ಕೇರಳದಲ್ಲಿ ಮಹಾಮಳೆಗೆ 324 ಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಮಂದಿಯನ್ನು ಸ್ಥಳಾಂತರಿಸಲಾಗಿದ್ದು, ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆಯಿದೆ.

Tags

Related Articles

Leave a Reply

Your email address will not be published. Required fields are marked *

Language
Close