ವಿಶ್ವವಾಣಿ

ಉ.ಕ. ಎಂಬ ‘ಪಾಪದ ಕೂಸು’ ವರ್ಸಸ್ ಸಾಂದರ್ಭಿಕ ಕೂಸು

ನಮ್ಮ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಏನಾಗಿದೆಯೋ ತಿಳಿದಿಲ್ಲ. ಒಂದಲ್ಲ ಒಂದು ರೀತಿಯ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. 2006ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇದ್ದಂತಹ ವಾತಾವರಣ 2018ರಲ್ಲಿ ಇಲ್ಲದಿರುವುದು ಅತಿ ಮುಖ್ಯ ಕಾರಣವಾಗಿದೆ.  ರಾಜ್ಯದಲ್ಲಿ ಇದ್ದದ್ದು ಕೇವಲ 2 ಖಾಸಗಿ ಟಿ.ವಿ. ನ್ಯೂಸ್ ಚಾನೆಲ್‌ಗಳು. ಆದರೀಗ ಬರೋಬ್ಬರಿ 20 ನ್ಯೂಸ್ ಚಾನೆಲ್‌ಗಳಿವೆ. ಮುಖ್ಯಮಂತ್ರಿಗಳು ಎಲ್ಲಿಗೆ ಹೋದರೂ ಬ್ಯಾಟರಿ ಹಾಕಿಕೊಂಡು ಹುಡುಕುತ್ತಾ ಹುಡುಕುತ್ತವೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಕಾಟವು ಬೇರೆ. ತಗೋ, ಒಂದು ವಾಕ್ಯ ಸಿಕ್ಕರೇ ಮುಗಿಯಿತು ಜನುಮ ಜಾಲಾಡಿಬಿಡುತ್ತಾರೆ.

ಹೀಗಾಗಿ ಕದ್ದುಮುಚ್ಚಿನ ರಾಜಕಾರಣದ ಕೆಲವು ಮಾಯವಾಗಿ ಹೋಯ್ತು. ತೀರಾ ಇತ್ತೀಚಿಗೆ ನಮ್ಮ ಮುಖ್ಯಮಂತ್ರಿಗಳು ಭಾವೋದ್ವೇಗಕ್ಕೆ ಒಳಗಾಗಿ ಚನ್ನಪಟ್ಟಣದ ಜನರ ಮನ ಗೆಲ್ಲಲು  ಕರ್ನಾಟಕ ಭಾಗದ ರೈತರ ಬಗ್ಗೆ ತುಸು ಹಗುರವಾಗಿಯೇ ಮಾತಾನಾಡಿಬಿಟ್ಟರು. ಯಾರಾದರೂ ಅಷ್ಟೇ ಕುಮಾರಸ್ವಾಮಿ ಅಥವಾ ಸಿದ್ದರಾಮಯ್ಯ ಅಥವಾ ಯಡಿಯೂರಪ್ಪನವರನ್ನು ನೋಡಿ ವೋಟು ಹಾಕುವುದಿಲ್ಲ. ವೋಟು ಹಾಕುವಾಗ ನೆನಪಿಗೆ ಬರುವುದು ಮುಖ್ಯಮಂತ್ರಿಯೆಂಬ ಸ್ಥಾನವೇ ಹೊರತು ವ್ಯಕ್ತಿಯಲ್ಲ. ಅವರವರಿಗೆ ಯಾರ ಮೇಲೆ ನಂಬಿಕೆ ಇರುತ್ತದೆಯೋ ಅಂತಹವರಿಗೆ ಎಲ್ಲರೂ ವೋಟು ಹಾಕುವುದು. ಈ ಹಿಂದೆಯೂ ಅಷ್ಟೇ ಮೈತ್ರಿ ಸರಕಾರಗಳಿದ್ದಾಗ  ಈ ರೀತಿಯ ಮಾತುಗಳನ್ನು ಯಾರೊಬ್ಬ ಮುಖ್ಯಮಂತ್ರಿಯೂ ಆಡಿರಲಿಲ್ಲ. ಅದರಲ್ಲಿಯೂ ಆ ಪವಿತ್ರ  ಕುಳಿತ ಮೇಲೆ ರಾಜ್ಯದವರೆಲ್ಲರೂ ಮಕ್ಕಳೇ ಹೊರತು ಕೇವಲ ತನ್ನ ಕ್ಷೇತ್ರದವರನ್ನು ಮಾತ್ರ ಮಕ್ಕಳೆಂದರೆ ಮಾತು ತಪ್ಪಾಗುತ್ತದೆ. ಇಷ್ಟೆಲ್ಲಾ ಮಾತನಾಡುವ ನಮ್ಮ ನಾಯಕರುಗಳು ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಲ್ಲಿ ಎಂದೂ ಸಮಗ್ರ ಚಿತ್ರವನ್ನೆಂದೂ ತಿಳಿಸಿಲ್ಲ. ಪಕ್ಕದ ರಾಜ್ಯಗಳನ್ನೇ ತೆಗೆದುಕೊಳ್ಳಿ. ಆಂಧ್ರಪ್ರದೇಶದಲ್ಲಿ ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ ದಂತಹ ಮೂರು ಪ್ರಮುಖ ನಗರಗಳಿವೆ. ತಮಿಳುನಾಡಿನಲ್ಲಿ ಚೆನ್ನೈ ಹಾಗೂ ಕೊಯಮತ್ತೂರು, ಕೇರಳದಲ್ಲಿ ಕೊಚ್ಚಿ, ತಿರುವನಂತಪುರ, ಮಹಾರಾಷ್ಟ್ರದಲ್ಲಿ ಮುಂಬಯಿ, ಪುಣೆ ಹಾಗೂ ನಾಗಪುರ ನಗರಗಳು. ಆದರೆ,  ತೆಗೆದುಕೊಂಡರೆ ಇವರ ತಲೆಯಲ್ಲಿರುವುದೊಂದೇ, ಬೆಂಗಳೂರು ಅಷ್ಟೇ. ಪ್ರತಿ ವರ್ಷವೂ ಅಷ್ಟೇ ಬಜೆಟ್‌ನಲ್ಲಿ ಬಿಬಿಎಂಪಿ ಗೆ ಸಾವಿರಾರು ಕೋಟಿ ರು.ಗಳಷ್ಟು ಅನುದಾನವನ್ನು ನೀಡುವ ರಾಜ್ಯ ಸರಕಾರಗಳು ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ ನಗರಗಳಿಗೆ ಎಷ್ಟು ಅನುದಾನವನ್ನು ನೀಡಿವೆ?

ಇಲ್ಲವೇ ಇಲ್ಲ ಬಿಡಿ, ಅತೀ ಕಡಿಮೆಯಲ್ಲಿ ಕಡಿಮೆ. 2017-18ರಲ್ಲಿ ಸುಮಾರು 6,000 ಕೋಟಿರು.ಅಷ್ಟು ಅನುದಾನವನ್ನು ಕೇವಲ ರಾಜಧಾನಿಗೆ ಮೀಸಲಿಡುವ ಅಗತ್ಯವೇನಾದರೂ ಇತ್ತೇ? ಇದರಲ್ಲಿ ಅರ್ಧ ಭಾಗದಷ್ಟು ಹಣವನ್ನು ಉತ್ತರ ಕರ್ನಾಟಕದ  ನೀಡಿದ್ದರೆ ಏನಾಗುತ್ತಿತ್ತು? ಬೆಂಗಳೂರಿಗೆ ಇಷ್ಟೆಲ್ಲಾ ನೀಡಿದರೂ ರಾಜಧಾನಿಯ ಸ್ಥಿತಿಯು ಎಷ್ಟು ಹದಗೆಟ್ಟಿದೆ ಎಂಬುದನ್ನು ಇತ್ತೀಚಿನ ಮಳೆ ಬಂದ ಸಂದರ್ಭದಲ್ಲಿ ಈಗಾಗಲೇ ನೋಡಿದ್ದೇವೆ. ಮನೆಗೆ ನೀರು ನುಗ್ಗುವುದು ತಪ್ಪಲಿಲ್ಲ, ಕೆರೆಗಳ ಒತ್ತುವರಿ ತಪ್ಪಲಿಲ್ಲ. ಬೆಳ್ಳಂದೂರು ಕೆರೆಯ ಅಭಿವೃದ್ಧಿಯೂ ಆಗಲಿಲ್ಲ. ಟ್ರಾಫಿಕ್ ಸಮಸ್ಯೆಯಂತೂ ದೇವರಿಗೆ ಬಿಟ್ಟ ವಿಷಯ. ಈ ರೀತಿಯ ಅನುದಾನವನ್ನು ನೀಡಿದರೂ ಬಿಬಿಎಂಪಿ ಬೃಹತ್ ಸಾಲದ ಹೊರೆಯಿಂದ ಹೊರಬರಲು ಆಗುತ್ತಿಲ್ಲವಲ್ಲವೆಂಬುದು ಇನ್ನೊಂದು ಆಶ್ಚರ್ಯಕರ ಸಂಗತಿ. ಪೌರಕಾರ್ಮಿಕರ ಹಣವೂ ಇನ್ನೂ ಪೂರ್ತಿಯಾಗಿ  ಕಾಂಟ್ರಾಕ್ಟರ್‌ಗಳ ಹಣವೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವೆಂಬ ಸಂಗತಿಗಳೂ ಕೇಳಿಬರುತ್ತಿವೆ.

ಇನ್ನೂ ಏನೇನು ಕೇಳಬೇಕೋ ತಿಳಿದಿಲ್ಲ. ಪ್ರತಿವರ್ಷವೂ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಮಾಡುತ್ತಾ ಬಂದಿರುವ ರಾಜ್ಯಸರಕಾರಗಳು ಮತ್ತೆ ಬೆಂಗಳೂರನ್ನು ಟಾರ್ಗೆಟ್ ಮಾಡಿವೆ. ಅಲ್ಲಾದರೂ ಏನಾದರೂ ಒಳ್ಳೆಯದಾದೀತಾ ಎಂದರೆ ಅದೂ ಇಲ್ಲ. ಬೆಂಗಳೂರಿಗೆ ಹರಿದು ಬಂದ ಬಂಡವಾಳದ ಪ್ರಮಾಣವೂ1.50 ಲಕ್ಷಕೋಟಿ ರು. ಎಂದು ಬಾಯಿ ಬಡೆದುಕೊಂಡವರಿಗೆ ತಿಳಿದಿರಲಿ, ಫ್ಲಿಪ್‌ಕಾರ್ಟ್, ಅಮೆಜಾನ್, ವೋಲಾ ಹಾಗೂ ಉಬರ್ ಕಂಪನಿಗಳಿಂದಲೇ ಸುಮಾರು 1.20 ಲಕ್ಷಕೋಟಿರು. ಬಂಡವಾಳವೂ  ಬಂದಿದೆ. ಇವರ್ಯಾರೂ ಬಂಡವಾಳ ಸಮಾವೇಶಗಳಲ್ಲಿ ಭಾಗವಹಿಸಲಿಲ್ಲ. ಗ್ರಾಹಕರನ್ನು ನೋಡಿ ಬಂದರಷ್ಟೇ, ಅದರಲ್ಲಿ ಸರಕಾರದ ಪ್ರಯತ್ನ ಏನೂ ಇಲ್ಲವೇ ಇಲ್ಲ.

ಬೆಂಗಳೂರನ್ನು ಬಿಟ್ಟು ಹುಬ್ಬಳಿಯಲ್ಲಿ ಹಾಗೂ ಬೆಳಗಾವಿಯಲ್ಲಿ ಒಮ್ಮೆಯಾದರೂ ಬಂಡವಾಳ ಸಮಾವೇಶವನ್ನು ಮಾಡುವ ಕಾರ್ಯವೇನಾದರು ಒಬ್ಬರಾದರೂ ನೀಡಿದ್ದಾರಾ? ಬೆಂಗಳೂರಿನಿಂದ ಹುಬ್ಬಳ್ಳಿಗೆ ರಾಷ್ಟ್ರೀಯ ಹೆದ್ದಾರಿಯೇ ಇದೆ. ಜತೆಗೆ ಉತ್ತಮ ವಿಮಾನ ನಿಲ್ದಾಣವೂ ಇದೆ. ಯಾಕೆ ಯಾರೊಬ್ಬರು ಈ ನಿಟ್ಟಿನಲ್ಲಿ ಯೋಚಿಸುವ ಪ್ರಯತ್ನ ಮಾಡಲಿಲ್ಲ? ಇನ್ನೂ ಹುಬ್ಬಳ್ಳಿ -ಧಾರವಾಡ ಅವಳಿ ನಗರಗಳೂ ವಿದ್ಯಾಕಾಶಿಯೆಂದೇ  ಪಡೆದಿರುವಾಗ ಅಲ್ಲಿ ಕಲಿತು ಬಂದ ಹುಡುಗರು ಕೆಲಸ ಅರಸಿ ಬೆಂಗಳೂರಿಗೆ ಯಾಕೆ ಬರಬೇಕು ಹೇಳಿ? ಅಲ್ಲಿಯೇ ಕೈಗಾರಿಕೆಗಳನ್ನು ಆರಂಭಿಸಲಿ ಪೂರ್ಣ ಪ್ರಯತ್ನ ಮಾಡಲೇ ಇಲ್ಲ. ಒಂದು ಒಳ್ಳೆಯ ಕೈಗಾರಿಕೆ ವಲಯವನ್ನು ಸ್ಥಾಪಿಸಿದರೆ ಆಗುವುದಿಲ್ಲ. ಸ್ಥಾಪನೆಯಾದ ಮೇಲೆ ಬಂಡವಾಳವನ್ನು ಹೂಡಿಸಿ ಅಭಿವೃದ್ಧಿ ಪಡಿಸಬೇಕು. ಜಗದೀಶ್‌ಶೆಟ್ಟರ್, ಪ್ರಹ್ಲಾದ್‌ಜೋಷಿ ಇಲ್ಲಿಯವರೇ ಆಗಿದ್ದರೂ, ಈ ರೀತಿಯ ಪ್ರಯತ್ನವನ್ನು ಮಾಡಲೇ ಇಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಅಭಿವೃದ್ಧಿಯು ಉತ್ತುಂಗಕ್ಕೇರಿ ಜಾಗವೇ ಇಲ್ಲದಿರುವಾಗ ಮತ್ತೆ ಬೆಂಗಳೂರಿನಲ್ಲಿಯೇ ಯಾಕೆ ಅಭಿವೃದ್ಧಿಯ  ಆಗಬೇಕೋ ತಿಳಿಯುತ್ತಿಲ್ಲ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡುರನ್ನು ನೋಡಿ ವಿಶಾಖಪಟ್ಟಣ ಶ್ರೀಸಿಟಿಯಲ್ಲಿ ಭಾರತದ ದೊಡ್ಡಮೊಬೈಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅವಕಾಶ ನೀಡಿದ್ದಾರೆ. ಅನಂತಪುರಂನಿಂದ ವಿಶಾಖಪಟ್ಟಣಕ್ಕೆ ಸುಮಾರು 600ಕಿ.ಮಿ.ಗಳ ಅಂತರವಿದೆ. ಇದು ಕೇವಲ ಆರಂಭವಷ್ಟೇ. ಇದಲ್ಲವೇ ನಿಜವಾದ ಇಚ್ಛಾಶಕ್ತಿ?

ಇನ್ನೂ ಐಟಿ-ಬಿಟಿ ನಗರವೆಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ನಗರದ ಪ್ರಮುಖ ಕಂಪನಿ ಎಂದರೆ ಇನ್‌ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿಯವರೂ ಉತ್ತರ ಕರ್ನಾಟಕದವರೇ. ಇವರಾದರೂ ತಮ್ಮ ಸಂಸ್ಥೆಯ ಕೆಲವಾದರೂ ಕೆಲಸಗಳನ್ನು  ಕರ್ನಾಟಕದ ಯಾವೂದಾದರೊಂದು ನಗರದಲ್ಲಿ ಆರಂಭಿಸಿ ಅಲ್ಲಿನ ಅಭಿವೃದ್ಧಿಗೆ ಪಾತ್ರರಾಗಬೇಕಿದೆ. ಕೇವಲ ಆರಂಭಿಸಿದರೆ ಸಾಲದು, ಆದಷ್ಟೂ ಕೆಲಸಗಳನ್ನು ಅಲ್ಲಿಗೂ ಸ್ಥಳಾಂತರಿಸಬೇಕು. ಬೆಂಗಳೂರಿನ ಅವರದೇ ಸಂಸ್ಥೆಯಲ್ಲಿ ಎಷ್ಟು ಜನ ಉತ್ತರ ಕರ್ನಾಟಕದ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಇಲ್ಲಿಗೆ ಬರುವ ಬದಲಿ ಅಲ್ಲಿಯೇ ಕೆಲಸ ಮಾಡಿದರೆ ಉದ್ಯೋಗ ಸೃಷ್ಟಿಯೂ ಆದೀತು ಹಾಗೂ ಒಂದು ಹೊಸ ನಗರದ ಅಭಿವೃದ್ಧಿಗೆ ನಾಂದಿಯಾದೀತು. ಅಷ್ಟೇ ಯಾಕೆ ಸಣ್ಣಪುಟ್ಟ ಉದ್ದಿಮೆಗಳಾದ ಕಾಲ್ ಸೆಂಟರ್, ಬಿಪಿಒ ಗಳಂತಹ ಕೆಲಸಗಳನ್ನು  ಯಾಕೆ ಮಾಡಬೇಕು? ಬೆಳಗಾವಿ, ವಿಜಯಪುರ, ಗದಗ, ಧಾರವಾಡದಲ್ಲಿ ಮಾಡಿದರೆ ತಪ್ಪೇನು?

ಈ ರೀತಿಯಿಂದಲೇ ಶುರುವಾಗಬೇಕಿದೆ. ಬೆಂಗಳೂರಿನಲ್ಲಿರುವ ನಿಮ್ಹಾನ್‌ಸ್, ಜಯದೇವ, ಕಿದ್ವಾಯ್ ಈ ರೀತಿಯ ಆಸ್ಪತ್ರೆಗಳು ಹುಬ್ಬಳ್ಳಿ , ವಿಜಯಪುರ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಗದಗ ನಗರಗಳಲ್ಲಿಯೂ ಆಗಬೇಕಿದೆ. ಇಂದಿಗೂ ಆ ಭಾಗದಲ್ಲಿ ಯಾರಿಗಾದರೂ ತಲೆಗೆ ಪೆಟ್ಟು ಬಿದ್ದರೆ ಅಲ್ಲಿನ ವೈದ್ಯರು ಕರೆದೊಯ್ಯಲು ಹೇಳುವುದು ಬೆಂಗಳೂರಿನ ನಿಮ್ಹಾನ್‌ಸ್ಗೆ. ಅವರು ಅಲ್ಲಿಂದ ಇಲ್ಲಿಗೆ ಬರುವಷ್ಟರಲ್ಲಿ ರೋಗಿಯ ಪರಸ್ಥಿತಿ ಹೇಗಿರಬಹುದು ಯೋಚಿಸಿನೋಡಿ. ಅದನ್ನು  ರಾಮನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಹೊರಟಿರುವ ಕ್ರಮವೇಕೊ ಸರಿ ಎಂದು ತೋರುತ್ತಿಲ್ಲ. ಈ ಭಾಗದ ಬಹುಪಾಲು ಉದ್ದಿಮೆಗಳು ಶುಗರ್ ಫ್ಯಾಕ್ಟರಿ ಹಾಗೂ ರೈಸ್ ಮಿಲ್‌ಗಳಿಂದ ತುಂಬಿ ಹೋಗಿವೆ. ಅದರಲ್ಲಿಯೂ ನಮ್ಮ ರಾಜಕಾರಣಿಗಳದ್ದೇ ಇಲ್ಲಿ ದರ್ಬಾರ್. ಅವರ ಒಡೆತನದ ಉದ್ದಿಮೆಗಳೇ ಹೆಚ್ಚಾಗಿ ಕೂಡಿವೆ. ಕೇವಲ ಈ ಎರಡು ಉದ್ದಿಮೆಗಳಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯು ಹೇಗೆ ಸಾಧ್ಯ? ಯಾವುದೇ ಒಂದು ಭಾಗ ಬೆಳೆಯಬೇಕೆಂದರೆ ಅಲ್ಲಿನ ಉದ್ದಿಮೆಗಳು ತುಂಬಾನೇ ಮುಖ್ಯ. ಹೊಸ  ಉದ್ದಿಮೆಗಳನ್ನು ಶುರು ಮಾಡಿದಾಗ ಮಾತ್ರವಷ್ಟೇ ಬೆಳವಣಿಗೆ ಕಾಣಲು ಸಾಧ್ಯ.

ನೈಸ್ ಸಂಸ್ಥೆಯ ಮಾಲೀಕರಾದ ಅಶೋಕ್ ಖೇಣಿಯವರು ಬೀದರ್ ನಗರವನ್ನು ಸಿಂಗಾಪುರಿನಂತೆ ಮಾಡುತ್ತೇನೆಂದು ಹೇಳಿ 2013ರಲ್ಲಿ ಗೆದ್ದು ಬಂದರು. ಅವರೂ ಉತ್ತರ ಕರ್ನಾಟಕದಲ್ಲಿ ಬೆಳೆದು ಬಂದವರು. ಆದರೆ ಮಾಡಿದ್ದೇನು? ಬೀದರ್ ನಗರದಲ್ಲಿ ಇಂದಿಗೂ ಸೊಳ್ಳೆಗಳ ಕಾಟದಿಂದ ಜನರಿಗೆ ಮುಕ್ತಿ ದೊರಕಿಲ್ಲ. ಹಂದಿಗಳ ಕಾಟದಿಂದ ಮುಕ್ತಿ ದೊರಕಿಲ್ಲ. ಇಷ್ಟು ಕೆಳ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದಿದ್ದಾಗ ಇನ್ನು ಎಲ್ಲಿಯ ಸಿಂಗಾಪೂರು? ಎತ್ತಣ  ನಗರವೆಂದು ನೀವೇ ಊಹಿಸಿಕೊಳ್ಳಿ. ಅದೂ ಅಲ್ಲದೇ ಬೀದರ್ ನಗರವು ಹೈದರಾಬಾದ್‌ನಿಂದ ಕೇವಲ 200 ಕಿ.ಮೀ. ಗಳ ಅಂತರದಲ್ಲಿದೆ. ಮಹಾನಗರದ ಇಷ್ಟೊಂದು ಹತ್ತಿರವಿರುವ ಜಿಲ್ಲೆಯ ಪರಿಸ್ಥಿತಿಯಿದು. ಇಂದಿಗೂ ಅಷ್ಟು ಕೋಪ ಬಂದರೆ ಬೆಂಗಳೂರಿನ ಜನ ಮಾತನಾಡುವುದು. ಬೀದರ್‌ಗೆ ಕಳುಹಿಸಿ ಬಿಡುತ್ತೇನೆಂದೇ ಹೊರತು ಮೈಸೂರಿಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಅವರಿಗೆ ಗೊತು,್ತ ಬೀದರಿನಲ್ಲಿ ಜೀವನ ಮಾಡುವ ಕಷ್ಟದ ಪರಿ. ಅಷ್ಟೇ ಯಾಕೆ ಸರಕಾರಿ ಕೆಲಸಗಳಲ್ಲಿಯೂ ಅಷ್ಟೇ ಅಧಿಕಾರಿಗಳು ತಮ್ಮ ಕೆಳಗಿನವರಿಗೆ ಬೀದರಿಗೆ  ಮಾಡಿಸುತ್ತೇನೆಂದು ಹೆದರಿಸುತ್ತಾರೆ. ಪಾಪ ಅಲ್ಲಿಯ ಜನರ ಮಸ್ಸಿಗೆ ಯಾವ ರೀತಿಯ ನೋವಾಗಬೇಡ? ತುಸು ಯೋಚಿಸಿ.

ಇನ್ನೂ ಕಲಬುರ್ಗಿ ಜಿಲ್ಲೆಯ ಕಥೆಯಂತೂ ಹೇಳತೀರದು. ತೀರಾ ಇತ್ತೀಚೆಗಷ್ಟೇ ಇದೇ ಜಿಲ್ಲೆಯಲ್ಲಿ ಜೀವನ ಸಾಗಿಸಲು ಹಣವಿಲ್ಲದೇ ತನ್ನ ಮಕ್ಕಳನ್ನು ಮಾರಿದಂತಹ ಘಟನೆಗಳು ನಡೆದಿವೆ. ನಮ್ಮ ಜನ ಪ್ರತಿನಿಧಿಗಳಿಗೆ ಅವಮಾನವೆಂಬುದೇ ಆಗುವುದಿಲ್ಲ. ಇದೇ ಕ್ಷೇತ್ರವನ್ನು ಗೆದ್ದಂತಹ ಮಲ್ಲಿಕಾರ್ಜುನ್ ಖರ್ಗೆಯವರು ರಾಷ್ಟ್ರಮಟ್ಟದ ರಾಜಕಾರಣಿಯಾಗಿ ಮಾಡಿದ್ದು ಇಷ್ಟೇನಾ? ಲೋಕಸಭೆಯಲ್ಲಿ ಎಂದಾದರೂ ತನ್ನ ಜಿಲ್ಲೆಯ ಸಮಸ್ಯೆಯ ಬಗ್ಗೆ ಚಕಾರವೆತ್ತಿರುವುದನ್ನು  ನೋಡಿಲ್ಲ ಮತ್ತು ಕೇಳಿಲ್ಲ. ಇವರ ಜತೆಗೆ ಅವರ ಮಗ ಪ್ರಿಯಾಂಕ್ ಖರ್ಗೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿ ಮಂತ್ರಿಯೂ ಆಗಿದ್ದವರು. ಅದರಲ್ಲಿಯೂ ಬೆಂಗಳೂರಿನಲ್ಲಿ ಬಂಡವಾಳ ಸಮಾವೇಶವನ್ನು ಆಯೋಜಿಸುತ್ತಿದ್ದ ಇವರು ತನ್ನದೇ ಕ್ಷೇತ್ರವಾದ ಚಿತ್ತಾಪುರದ ಕಡೆ ಎಂದಿಗೂ ಸರಿಯಾಗಿ ಗಮನ ಹರಿಸಲಿಲ್ಲ. ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಯ ಬಗ್ಗೆ ಮಾತನಾಡುವ ಇವರಿಗೆ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ತಮ್ಮದೇ ಜಿಲ್ಲೆ ಪ್ರತಿವರ್ಷವು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿಯೂ ಇರುವುದಿಲ್ಲ . ತಮ್ಮದೇ ಜಿಲ್ಲೆಯಲ್ಲಿ ಎಷ್ಟೋ  ಶಿಕ್ಷಕರೇ ಇಲ್ಲದಂತಾಗಿರುವ ಸಂಗತಿ ತಿಳಿದಿದ್ದರೂ ಬೆಂಗಳೂರಿನಲ್ಲಿಯೇ ಕುಳಿತು ಸಮಾವೇಶಗಳನ್ನು ಮಾಡುವ ಪರಿ ಇವರದು. ಚುನಾವಣೆಯು ಎದುರಾದ ಕೂಡಲೇ ಮತ್ತದೇ ದಲಿತರ ವಿಷಯವನ್ನೇ ಮುಂದಿಟ್ಟುಕೊಂಡು ಗೆಲ್ಲುವ ಗುರಿಯೊಂದೇ ಇವರದ್ದಾಗಿ ಬಿಟ್ಟಿದೆ.

ಇನ್ನೂ ಬಳ್ಳಾರಿಯ ಸ್ಥಿತಿಯಂತೂ ಸಂಪೂರ್ಣ ಬದಲಾಗಿಲ್ಲ. ಬಳ್ಳಾರಿ ನಗರ, ಹೊಸಪೇಟೆ ಬಿಟ್ಟರೆ ಮತ್ತ್ಯಾವ ಜಾಗಗಳು ಹೇಳುವ ರೀತಿಯ ಅಭಿವೃದ್ಧಿಯಾಗಲಿಲ್ಲ. ವಿಶ್ವವಿಖ್ಯಾತ ಹಂಪಿಯನ್ನು ಇನ್ನೂ ಮೇಲ್ದರ್ಜೆಗೆ ಏರಿಸುವ ಸಾಹಸವನ್ನು ಯಾರೂ ಮಾಡಲಿಲ್ಲ. ಹಂಪಿಯಂದರೆ ತೀರಾ ಇತ್ತೀಚೆಗೆ ಯುವಕರಿಗೆ ಗಾಂಜಾ ಹೊಡೆಯುವ  ಜಾಗವೆಂಬುದಷ್ಟೇ ಗೊತ್ತು. ಪ್ರವಾಸೋದ್ಯಮದಲ್ಲಿ ವಿದೇಶಿಗರನ್ನು ನೋಡಿ ಕಲಿಯಬೇಕಿದೆ. ಒಂದು ಸಣ್ಣ ಜಾಗವನ್ನೇ ಯಾವ ರೀತಿ ಜಗತ್ತಿಗೆ ಬಿಂಬಿಸುತ್ತಾರೆಂದರೆ, ಆ ಜಾಗವೂ ಎಲ್ಲರ ಕನಸಿನ ಭೇಟಿ ನೀಡುವ ಜಾಗಗಳಾಗಿರುತ್ತವೆ. ಇಟಲಿಯಲ್ಲಿ ‘ಪೀಸಾ’ ಎಂಬ ವಾಲಿರುವ ಗೋಪುರದ ಬಗ್ಗೆ ನೀವು ಕೇಳಿರ ಬಹುದು. ಅಲ್ಲಿರುವುದೊಂದೇ ವಾಲಿದ ಕಂಬದಂತಹ ಗೋಪುರ. ಅದನ್ನು ಜಗತ್ತಿನ ಅಧ್ಯಾಯಗಳಿಗೆ ಸೇರಿಸಿರುವ ರಾಷ್ಟ್ರವದು. ಅದಕ್ಕಿಂತಲೂ ಉತ್ತಮ ತಂತ್ರಜ್ಞಾನದಿಂದ ರಚಿಸಲ್ಪಟ್ಟಿರುವ ಹಂಪಿಯ ಕಲ್ಲಿನ ರಥ. ಕಲ್ಲಿನಿಂದ ಬರುವ ತಬಲದ ಶಬ್ದವನ್ನು  ಪಡಿಸುವಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇಲ್ಲ. ಕೇವಲ ವರ್ಷಕ್ಕೊಮ್ಮೆ ಹಂಪಿ ಉತ್ಸವ ಮಾಡಿ ಹಾಡಿ ಕುಣಿದರೆ ಸಾಲದು. ಪ್ರತಿನಿತ್ಯವೂ ಹಂಪಿಯನ್ನು ಅತೀ ಹೆಚ್ಚು ಖ್ಯಾತಿಗೊಳಿಸುವ ಕಾರ್ಯಬೇಕಿದೆ. ಇನ್ನೂ ಬಳ್ಳಾರಿಯ ಗಣಿಧೂಳಿನಿಂದ ಅದೆಷ್ಟೋ ಹಳ್ಳಿಗಳು ಇಂದಿಗೂ ಹೊರ ಬಂದಿಲ್ಲ. ಕಾಯಿಲೆಗಳು ತಪ್ಪಿಲ್ಲ. ಕಲುಷಿತವಾದ ನೀರಿನ ಸೆಲೆಯನ್ನೇ ಅವಲಂಬಿಸಿರುವ ಜನ ಅವರು.

ಭಾರತದಲ್ಲಿ ಸಾಕುನಾಯಿಗಳ ನಾನಾ ತಳಿಗಳಿಗೆ ಭಾರೀ ಬೇಡಿಕೆಯಿದೆ. ಅದರಲ್ಲಿಯೂ ವಿದೇಶಿ ತಳಿಗಳನ್ನು ಅಭಿವೃದ್ಧಿಮಾಡಿ ಮಾರಾಟ ಮಾಡುವ ಉದ್ದಿಮೆಯೂ ಜೋರಾಗಿಯೇ ಇದೆ.  ಹುಡುಗರ ತಲೆಗೆ ನೆನಪಾಗುವ ತಳಿಗಳೇ ಸೈಬೀರಿಯನ್ ಹಸ್ನಿ, ಡಾಬರ್‌ಮ್ಯಾನ್, ಗೋಲ್ಡನ್ ರಿಟ್ರೀವ್ ಇತ್ಯಾದಿ. ಆದರೆ, ಯಾರಿಗಾದರೂ ಮುಧೋಳ ತಳಿಯ ಬಗ್ಗೆ ಜ್ಞಾನವಿದೆಯೇ, ನೋ ಚಾನ್‌ಸ್ . ಇಲ್ಲವೇ ಇಲ್ಲ. ಮುಧೋಳದ ನಾಯಿಗಳು ಎಷ್ಟು ಪ್ರಸಿದ್ಧವೆಂದರೆ ಭಾರತೀಯ ಸೇನೇಯೂ ಈ ನಾಯಿಗಳ ಸಹಾಯ ಪಡೆದುಕೊಳ್ಳುತ್ತಿವೆ. ಇಂತಹ ವಿಶ್ವವಿಖ್ಯಾತದ ತಳಿಯಾಗಿರುವ ಮುಧೋಳ ನಾಯಿಗಳ ಬೆಳವಣಿಗೆಯ ಬಗ್ಗೆ ಒಮ್ಮೆಯಾದರೂ ನಮ್ಮ ಜನಪ್ರತಿನಿಧಿಗಳು ಯೋಚಿಸಿಲ್ಲವೆಂಬುದು ನಾಚಿಕೆಗೇಡಿನ ಸಂಗತಿ. ರಾಮನಗರವು ಹೊಸ ಜಿಲ್ಲೆಯಾದ ಮೇಲೆ ಸಾವಿರಾರು  ರು. ಅನುದಾನ ಸರಕಾರದಿಂದ ಹರಿದು ಬಂತು. ಆದರೆ, ಯಾದಗಿರಿ ಜಿಲ್ಲೆಯಾದ ಮೇಲೆ ಎಷ್ಟು ಅನುದಾನವನ್ನು ಸರಕಾರ ನೀಡಿದೆ ಯೋಚಿಸಿ? ಇಂದಿಗೂ ಅತೀ ಹೆಚ್ಚು ಕಿತ್ತು ತಿನ್ನುವ ಬಡತನದಿಂದ ಕೂಡಿರುವ ಜಿಲ್ಲೆ ಯಾದಗಿರಿ, ಪಾಪ ಅಲ್ಲಿಯ ಜನರಿಗೆ ಕನಿಷ್ಠ ಸೌಕರ್ಯಗಳಾದ ನೀರು, ಊಟ, ಆರೋಗ್ಯ, ವ್ಯವಸ್ಥೆ ಮಾಡಲಿಲ್ಲವೆಂಬುದು ವಿಷಾದದ ಸಂಗತಿ.

ನಮ್ಮ ಜನಪ್ರತಿನಿಧಿಗಳು ಕೇವಲ ನೀರಾವರಿ ಹಾಗೂ ರಸ್ತೆ ಸಂಪರ್ಕ ಮಾಡುವುದಷ್ಟೇ ತಮ್ಮ ಕರ್ತವ್ಯವೆಂದು ಭಾವಿಸಿದ್ದಾರೆ. ಆದರೆ ಅದರಾಚೆಗೂ ಮೀರಿದ  ಉತ್ತರ ಕರ್ನಾಟಕ ಭಾಗದಲ್ಲಿ ಆಗಬೇಕಿದೆ. ಕಾವೇರಿಗೆ ಬಾಗಿನ ಅರ್ಪಿಸಿದ ಕುಮಾರಸ್ವಾಮಿ ಅವರು ಆಲಮಟ್ಟಿಗೂ ಹೋಗಬೇಕಿತ್ತಲ್ಲವೇ? ಕಡ್ಡಾಯವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯು ಆಗಲೇಬೇಕಿದೆ. ನಮ್ಮ ಮುಂದಿನ ತಲೆಮಾರಿಗೆ ಇದೇ ಸಮಸ್ಯೆಗಳನ್ನು ಕೊಂಡೊಯ್ಯಬಾರದು. ಉತ್ತರ ಕರ್ನಾಟಕವೆಂದರೆ ಒಂದು ರೀತಿಯ ಉದಾಸೀನ ಮನೋಭಾವವನ್ನು ಎಲ್ಲರೂ ತೋರುತ್ತಿರುವುದು ಮಾತ್ರ ವಿಷಾದನೀಯ. ಟೇಕನ್ ಫಾರ್ ಗಾಂಟೆಡ್ ಅನ್ನೋ ರೀತಿ ಇಲ್ಲಿನ ಜನರನ್ನು ನಡೆಸಿಕೊಳ್ಳಲಾಗುತ್ತಿದೆ. ಅಷ್ಟೇ ಯಾಕೆ ಸಮಾಜದ ಮುಖ್ಯವಾಹಿನಿಗಳಾದ ಮಾಧ್ಯಮಗಳ ಎಷ್ಟೋ ಕೇಂದ್ರ ಕಚೇರಿಗಳು ಉತ್ತರ  ಹೇಳಿ ನೋಡೋಣ? ವಿಜಯ್ ಸಂಕೇಶ್ವರ್ ಟಿ.ವಿ ಚಾನೆಲ್‌ನ ಕೇಂದ್ರ ಕಚೇರಿ ಇರುವುದು ಬೆಂಗಳೂರಿನಲ್ಲಿಯೇ ಅಲ್ಲವೇ? ಎಲ್ಲರಿಗೂ ಅಷ್ಟೇ. ಆರಾಮಾಗಿರುವ ಒಂದು ಅಭಿವೃದ್ಧಿಯಾಗಿರುವ ನಗರವೇ ಬೇಕೇ ಹೊರತು ಉತ್ತರ ಕರ್ನಾಟಕ ಭಾಗದ ನಗರಗಳು ಬೇಕಿಲ್ಲ. ನೆನಪಿರಲಿ, ಉತ್ತರ ಕರ್ನಾಟಕ ಭಾಗದ ಜನಸಂಖ್ಯೆಯು ಸುಮಾರು 2.50 ಕೋಟಿ ದಾಟಿದೆ. ಅಂದರೆ ರಾಜ್ಯದ ಶೇ.40% ರಷ್ಟು ಜನರು ಈ ಭಾಗದಲ್ಲಿದ್ದಾರೆ. ರಾಜ್ಯದ ಆದಾಯದ ಬೊಕ್ಕಸಕ್ಕೆ ಇವರ ಪಾಲುದಾರಿಕೆ ಶೇ 40% ರಷ್ಟಿದೆ.

ಉತ್ತರ  ಹಾಗೂ ದಕ್ಷಿಣ ಭಾರತದ ಪಾಲುದಾರಿಕೆಯನ್ನು ಮಾತನಾಡುವ ನಮ್ಮ ನಾಯಕರು ತಮ್ಮದೇ ರಾಜ್ಯದಲ್ಲಿ ಉತ್ತರ ದಕ್ಷಿಣವೆಂದು ತಾರತಮ್ಯ ಮಾಡುತ್ತಿದ್ದಾರೆ. ಕೇವಲ ಸರಕಾರಿ ಅಧಿಕಾರಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಮಾಡಿದರೆ ಆಗುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳೇ, ತಮ್ಮ ವಿಷನ್ ಪ್ರತಿಗಳನ್ನು ಮೊದಲು ರಿಲೀಸ್ ಮಾಡಿ. ತಾವು ಉತ್ತರ ಕರ್ನಾಟಕವನ್ನು 5ವರ್ಷಗಳ ಬಳಿಕ ಹೇಗೆ ಕಾಣಬಯಸುತ್ತೀರೆಂದು ತಿಳಿಸಿ. ವರುಷಕ್ಕೊಮ್ಮೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕಿಂತಲೂ ಹೆಚ್ಚಾಗಿ ವಾರದಲ್ಲಿ ಎರಡು ಬಾರಿಯಾದರೂ ಉತ್ತರ ಕರ್ನಾಟಕದಲ್ಲಿ ತಾವು ಹಾಗೂ  ಮಂತ್ರಿಮಂಡಲ ಕುಳಿತು ಆಡಳಿತ ಮಾಡಿದರಷ್ಟೇ ಸಮಸ್ಯೆಗಳು ಬಗೆಹರಿಯುವುದು.