ನ.18ರಿಂದ “ಉದಯ ಸಿಂಗರ್ ಜೂನಿಯರ್ಸ್‌”

Posted In : ಸಿನಿಮಾ ಸಮಾಚಾರ

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಮತ್ತು ಮನೋ ತೀರ್ಪುಗಾರರು

ಮಕ್ಕಳಲ್ಲಿ ಹುದಗಿರುವ ನೈಪೂಣ್ಯತೆಯನ್ನು ಕರುನಾಡ ಜನತೆಗೆ ತೋರಿಸಲು ನಾನಾ ರೀತಿಯ ಟ್ಯಾಲೆಂಟ್‌ನ ಕಿಲಾಡಿ ಕಿಡ್ಸ್‌ ಎಂಬ ರಿಯಾಲಿಟಿ ಶೋವನ್ನು ಮಾಡಿ ಜನ ಮನ್ನಣೆ ಪಡದಿರುವ ಉದಯ ಟಿವಿ 4 ವರ್ಷದ ನಂತರ ಮಕ್ಕಳಿಗಾಗಿ ಮತ್ತೆ ಸಿಂಗಿಂಗ್ ರಿಯಾಲಿಟಿ ಶೋವನ್ನು ಪ್ರಾರಂಭಿಸಲಿದೆ.

5 ರಿಂದ 13 ವರ್ಷದ ಮಕ್ಕಳು ಈ ಶೋನಲ್ಲಿ ಭಾಗವಹಿಸುವ “ಉದಯ ಸಿಂಗರ್ ಜೂನಿಯರ್ಸ್‌” ಇದೇ ಶನಿವಾರ ಮತ್ತು ಭಾನುವಾರ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. 16 ಮಕ್ಕಳ ಈ ಸ್ಪರ್ಧೆಯಲ್ಲಿ ಇಬ್ಬರು ಮುಖ್ಯ ನಿರ್ಣಾಯಕರನ್ನು ಒಬ್ಬ ಮೆಂಟರ್‌ರನ್ನು ಹೊಂದಿದ್ದು ಅಲ್ಲದೇ ಪ್ರತಿ ವಾರವೂ ಹೆಸರಾಂತ ಸಂಗೀತಗಾರರು ಮತ್ತು ಸೆಲಿಬ್ರಿಟಿಗಳು ಈ ಶೋಗೆ ವಿಶೇಷ ನಿರ್ಣಾಯಕರಾಗಿ ಭಾಗವಹಿಸುತ್ತಾರೆ.

ಈಗಾಗಲೇ ರಾಜ್ಯದ ಹಲವುಕಡೆ ಆಡೀಶನ್ ಮಾಡಲಾಗಿದ್ದು ಉತ್ತಮ ಹಾಡಿಗಾರಿಕೆ ಮತ್ತು ವಾಕ್‌ಚಾತುರ್ಯ್ಯವನ್ನು ಹೊಂದಿದ 16 ಜನ ಮಕ್ಕಳನ್ನು ಆಯ್ಕೆಮಾಡಲಾಗಿದೆ. ಈ ಶೋನಲ್ಲಿ ಚಲನಚಿತ್ರಗಳ ಹಾಡುಗಳೊಂದಿಗೆ ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ದೇಶಿಗೀತೆ ಮತ್ತು ಇಂಡೋವೆಸ್ಟರ್ನ್ ಹಾಡುಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ

ಕನ್ನಡ ಚಿತ್ರರಂಗ ಕಂಡ ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ, ಸಂಯೋಜಕ ಕನಸುಗಾರ, ಮಲ್ಲ, ಯುಗಪುರುಷ, ರಣಧೀರ, ರಾಮಾಚಾರಿ, ಅಂಜದಗಂಡು ಕ್ರೇಜಿಸ್ಟಾರ್ ವಿ.ರವೀಚಂದ್ರನ್ “ಉದಯ ಸಿಂಗರ್ ಜೂನಿಯರ್ಸ್‌” ಮುಖ್ಯ ನೀರ್ಣಾಯಕರ ಸ್ಥಾನವನ್ನು ನಿರ್ವಹಿಸಲಿದ್ದಾರೆ. ಹಾಗೆ ಈ ದಿಗ್ಗಜರ ಜೊತೆಗೆ ಮತ್ತೊಬ್ಬ ಸಂಗೀತ ದಿಗ್ಗಜ ಮನೋ ಎಂದೆ ಪ್ರಖ್ಯಾತಿ ಪಡೆದ ನಾಗೂರು ಬಾಬು ಮತೊಬ್ಬ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ಹಾಗೆ ಸುಚೇತನ್ ಈ ಶೋಗೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ,ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ ನಿರೂಪಕಿಯಾಗಿ ನಿರ್ವಹಿಸಲಿದ್ದಾರೆ.

“ಉದಯ ಸಿಂಗರ್ ಜೂನಿಯರ್ಸ್‌” ಫಿಕ್ಷನ್ ಮತ್ತು ರಿಯಾಲಿಟಿ ಶೋಗಳಿಗೆ ಹೆಸರಾದ ಸಾಯಿಬಾಬಾ ಟೆಲಿಫೀಲ್‌ಮ್ಸ್‌ ಸಂಸ್ಥೆಯ ನಿರ್ಮಾಣದಲ್ಲಿ  ಮೂಡಿಬರುತ್ತಿದೆ. ಪ್ರತಿವಾರವೂ ಒಂದು ಎಲಿಮಿನೇಶನ್ ರೌಂಡನ್ನು ಹೊಂದಿದ್ದು ಕೊನೆಗೆ ಗ್ರ್ಯಾಂಡ್‌ಫಿನಾಲೆ ನಡೆಯಲಿದೆ. ರಂಗೇರಿದ ಸೆಟ್‌ನಲ್ಲಿ ಸಂಗೀತದ ಗುಂಗು ಹಿಡಿಸುವ ಮಕ್ಕಳ ರಿಯಾಲಿಟಿ ಶೋ “ಉದಯ ಸಿಂಗರ್ ಜೂನಿಯರ್ಸ್‌” ಇದೇ 18ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *

18 − twelve =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top