ಮುಖ್ಯಮಂತ್ರಿಗಳ ಆಯ್ಕೆಯೂ ಕೇಂದ್ರದಿಂದಲೇ ನಡೆಯಬಹುದು: ಉದ್ಧವ್ ಠಾಕ್ರೆ

Posted In : ದೇಶ

ಮುಂಬೈ: ಮುಂಬರುವ ರಾಜ್ಯಪಾಲರ ನೇಮಕದಂತೆಯೇ ರಾಜ್ಯಗಳಿಗೆ ಮುಖ್ಯಮಂತ್ರಿಗಳ ಆಯ್ಕೆಯ ಕ್ರಮವನ್ನೂ ಕೇಂದ್ರ ಸರಕಾರ ಜಾರಿಗೊಳಿಸಬಹುದು ಎಂದು ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂಬೈನ ಉಲ್ಲಾಸನಗರದಲ್ಲಿ ನಡೆದ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಕರ್ನಾಟಕದ ರಾಜಕೀಯ ಪರಿಸ್ಥಿತಿಗಳನ್ನು ಗಮನಿಸಿ, ಬಿಜೆಪಿ ಭಾರತದ ಪ್ರಜಪ್ರಭುತ್ವವನ್ನು ಅವಮಾನಕ್ಕೆ ಗುರಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವಕ್ಕೇ ಮರ್ಯಾದೆ ನೀಡಲಾಗದ ಮೇಲೆ ಭಾರತವನ್ನು ಪ್ರಜಾ ಸತ್ತಾತ್ಮಕ ರಾಷ್ಟ್ರ ಎಂದು ಕರೆಯುವ ಅಗತ್ಯತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಎಲ್ಲಾ ನಿರ್ಧಾರಗಳನ್ನೂ ಪ್ರಧಾನ ಮಂತ್ರಿಯೇ ತೆಗೆದುಕೊಳ್ಳುತ್ತಾರೆ ಎಂದಾದ ಮೇಲೆ ಚುನಾವಣೆಗಳನ್ನು ನಡೆಸುವ ಅನಿವಾರ್ಯತೆಯಾದರೂ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅದನ್ನು ನಿಲ್ಲಿಸುವಂತೆ ಸೂಚಿಸಿರುವ ಅವರು, ಅದರಿಂದಾಗಿ ಹಣ ಮತ್ತು ಸಮಯಗಳೆರಡೂ ಉಳಿಯುವುದಾಗಿ ಹೇಳಿದ್ದಾರೆ. ಸದಾ ಕಾಲ ವಿದೇಶಿ ಯಾತ್ರೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಮೋದಿಗೂ ಇದು ಸಹಾಯಕವಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಹೋದರೂ ಯಡಿಯೂರಪ್ಪ ಕರ್ನಾಟಕದ ಮುಖ್ಯಮತ್ರಿಯಾಗಿದ್ದಾರೆ. ಬಹುಮತ ಸಾಬೀತಿಗೆ ಬೇಕಾದ ಅಭ್ಯರ್ಥಿಗಳಿಲ್ಲದಿದ್ದರೂ ವಜುಭಾಯಿ ಸರಕಾರ ರಚನೆಗೆ ಅನುಮತಿ ನೀಡಿದ್ದಾರೆ. ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಬಿಜೆಪಿ ಮೂಲವನ್ನೇ ಹೊಂದಿರುವ ರಾಜ್ಯಪಾಲರಿಂದ ಇದನ್ನಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಚುನಾವಣೆಗಳ ಸಂದರ್ಭದಲ್ಲಿ ಮಾತ್ರವೇ ಅಯೋಧ್ಯೆಯ ಬಗ್ಗೆ ಮಾತನಾಡುತ್ತದೆ. ಉಳಿದಂತೆ ಸೊಲ್ಲೆತ್ತುವುದಿಲ್ಲ ಎಂದು ತಿಳಿಸಿರುವ ಠಾಕ್ರೆ, ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ನಡೆದ ಶಕ್ತಿಯನ್ನೇ ರಾಮ ಮಂದಿರ ವಿಚಾರದಲ್ಲೂ ಬಳಸಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

20 − 8 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top