About Us Advertise with us Be a Reporter E-Paper

ಸಿನಿಮಾಸ್

ಉದ್ದಿಶ್ಯ ವಿದೇಶದಲ್ಲಿ ಕಲಿತ ಕನ್ನಡಿಗನ ಚಿತ್ರ!

ಜಿ.ಎಸ್ ಸುಧನ್

ವಾಮಾಚಾರ, ಮಾಟಮಂತ್ರ ಅಥವಾ ಬ್ಲಾಕ್‌ಮ್ಯಾಜಿಕ್ ಎಂದರೆ ಜನ ಸಾಮಾನ್ಯರು ಒಮ್ಮೆ ಬೆಚ್ಚಿಬೀಳುವುದು ಸಹಜ. ವ್ಯಕ್ತಿಯೊಬ್ಬನಿಗೆ ತೊಂದರೆ ಕೊಡುವುದರಿಂದ ಹಿಡಿದು, ಜೀವ ತೆಗೆಯುವ ಶಕ್ತಿ ಕೂಡ ಬ್ಲಾಕ್ ಮ್ಯಾಜಿಕ್‌ನಲ್ಲಿದೆ ಎಂದು ಜನ ಇಂದಿಗೂ ನಂಬುತ್ತಾರೆ. ಇಂತಹ ಬ್ಲಾಕ್ ಮ್ಯಾಜಿಕ್ ಅನ್ನು ವ್ಯಕ್ತಿಯೊಬ್ಬ ತನ್ನ ಸ್ವಾರ್ಥಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾನೆ, ಅದರಿಂದ ಏನೇನು ಅನಾಹುತಗಳು ಸಂಭವಿಸಬಹುದು ಎಂಬ ಕಥಾ ಹಂದರ ಹೊಂದಿರುವ ‘ಉದ್ದಿಶ್ಯ’ ಚಿತ್ರ ಇಂದು ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ತಯಾರಾಗಿರುವ ಈ ಚಿತ್ರಕ್ಕೆ ಹಾಲಿವುಡ್‌ನ ಕಥೆಗಾರ ರಾಬರ್ಟ್ ಗ್ರಿಫಿನ್ ಕಥೆಯನ್ನು ಒದಗಿಸಿದ್ದಾರೆ. ಕೆಲ ವರ್ಷಗಳ ಕಾಲ ಅಮೆರಿಕಾದಲ್ಲಿ ವಾಸವಿದ್ದು, ಫಿಲ್‌ಮ್ ಮೇಕಿಂಗ್ ಬಗ್ಗೆ ಅನುಭವ ಪಡೆದುಕೊಂಡಿರುವ ಕನ್ನಡದ ನವ ಪ್ರತಿಭೆ ಹೇಮಂತ್ ಕೃಷ್ಣಪ್ಪ ನಾಯಕ ನಟನಾಗಿ ಅಭಿನಯಿಸುವುದರ ಜತೆಗೆ, ಸ್ಕ್ರೀನ್ ಪ್ಲೇ ಬರೆದು ಆ್ಯಕ್ಷನ್ಕಟ್ ಕೂಡ ಹೇಳಿದ್ದಾರೆ. ಚಿತ್ರದ ರಿಲೀಸ್‌ಗೂ ಮುನ್ನ ‘ವಿಶ್ವವಾಣಿ ಸಿನಿಮಾಸ್’ನೊಂದಿಗೆ ಮಾತಿಗೆ ಸಿಕ್ಕ ಹೇಮಂತ್ ಕೃಷ್ಣಪ್ಪ, ‘ಉದ್ದಿಶ್ಯ’ದ ಉದ್ದೇಶ, ಮತ್ತದರ ವಿಶೇಷತೆಗಳ ಕುರಿತು ಮಾತನಾಡಿದ್ದು

ಇದೊಂದು ಸಸ್ಪೆನ್‌ಸ್, ಥ್ರಿಲ್ಲರ್ ಸಬ್ಜೆಕ್‌ಟ್ ಇರುವ ಸಿನಿಮಾ. ಒಬ್ಬ ವ್ಯಕ್ತಿಯ ಮರ್ಡರ್ ಆಗುತ್ತದೆ. ಆ ಮರ್ಡರ್ ಮಾಡಿದವರಾರು ಎಂದು ಕಂಡು ಹಿಡಿಯುವ ಪತ್ತೆದಾರಿ ಕೆಲಸ ಆರಂಭವಾಗುತ್ತದೆ. ಈ ಕೆಲಸದಲ್ಲಿ ಅನೇಕ ರೋಚಕ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತದೆ. ಅಂತಿಮವಾಗಿ ಮರ್ಡರ್ ಮಾಡಿದವರು ಯಾರು..? ಮರ್ಡರ್ ಹಿಂದಿನ ಅಸಲಿ ಉದ್ದೇಶವೇನು..? ಎಂಬುದೇ ಚಿತ್ರದ ಕಥಾಹಂದರ. ಕನ್ನಡದಲ್ಲಿ ಮೊದಲ ಬಾರಿಗೆ ನಾವೊಂದು ವಿಭಿನ್ನ ರೀತಿಯ ನಿರೂಪಣೆಯನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದೇವೆ. ಅದು ಆಡಿಯನ್‌ಸ್ ಇಷ್ಟವಾಗುವುದೆಂಬ ನಂಬಿಕೆ ನಮ್ಮದು’ ಎನ್ನುತ್ತಾರೆ ನಟ ಕಂ ನಿರ್ದೇಶಕ ಹೇಮಂತ್ ಕೃಷ್ಣಪ್ಪ,

ಉದ್ದಿಶ್ಯ ಸಿನಿಮಾದ ನಿರ್ಮಾಣದಲ್ಲಿ ಅನೇಕ ವಿದೇಶೀ ತಂತ್ರಜ್ಞರು ಕೈ ಜೋಡಿಸಿದ್ದಾರೆ. ಸಿನಿಮಾದ ಮೇಕಿಂಗ್‌ನಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗದೆ ಹಾಲಿವುಡ್ ಸ್ಟೈಲ್‌ನಲ್ಲೇ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಟೆಕ್ನಿಕಲಿ ಸಿನಿಮಾ ರಿಚ್ ಆಗಿ ಬಂದಿದೆ. ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ನೋಡುವ ಆಡಿಯನ್‌ಸ್ ಗೆ ಡಿಫರೆಂಟ್ ಫೀಲ್ ಸಿಗಲಿದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಹೇಮಂತ್.

ಉದ್ದಿಶ್ಯ ಸಿನಿಮಾದ ಮತ್ತು ಕಲಾವಿದರ ಬಗ್ಗೆ ಹೇಳುವುದಾದರೆ, ಚೇತನ್ ರಘುರಾಮ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ ಕೆಲಸ ಮಾಡಿದ್ದಾರೆ. ಅದಮ್ಯ ಚೇತನ ಸಿಂಕ್ ಸೌಂಡ್ ಕೆಲಸ ನಿರ್ವಹಿಸಿದ್ದು, ಶಾದ್ರಚ್ ಸಾಲೋಮನ್ ಸಂಗೀತ ಸಂಯೋಜಿಸಿದ್ದಾರೆ. ಅರ್ಚನಾ ಗಾಯಕ್ವಾಡ್, ಇಚ್ಛಾ, ಅಕ್ಷತಾ ಶ್ರೀಧರ್ ಶಾಸ್ತ್ರಿ, ಅನಂತ ವೇಲು, ಅಶ್ವತ್ ನಾರಾಯಣ್, ಭರತ್ ಬಿ.ಜೆ, ಚೇತನ್ ಕುಮಾರ್ ಆರ್., ವಿಜಯ್ ಕೌಂಡಿನ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ’

ಉದ್ದಿಶ್ಯ’ ರಿಲೀಸ್‌ಗೂ ಮೊದಲೇ ಹಲವು ಇಂಟರ್ ನ್ಯಾಷನಲ್ ನಾಮಿನೇಟ್ ಆಗಿದೆ. ‘ಯು.ಕೆ. ಸ್ಕ್ರೀನ್ ಒನ್ ಇಂಟರ್‌ನ್ಯಾಷನಲ್ ಫಿಲ್‌ಮ್ ಫೆಸ್ಟಿವಲ್’ ಮತ್ತು ‘ಬಾರ್ಸಿಲೋನಾ ಪ್ಲಾನೆಟ್ ಫಿಲ್‌ಮ್ ಫೆಸ್ಟಿವಲ್’ ಮತ್ತು ‘ಕಲತ್ ನಿಸ್ಸಾ ಫಿಲ್‌ಮ್ ಫೆಸ್ಟಿವಲ್’ಗೆ ಅಧಿಕೃತವಾಗಿ ಆಯ್ಕೆಗೊಂಡಿದೆ. ಅಷ್ಟೇ ಅಲ್ಲದೆ ‘ಟಾಪ್ ಇಂಡಿ ಫಿಲ್‌ಮ್ ಅವಾರ್ಡ್‌ಸ್-2018’ರಲ್ಲಿ ಒರಿಜಿನಲ್ ಐಡಿಯಾ ಹಾಗೂ ಮೋಸ್‌ಟ್ ಟೆರಿಫೈಯಿಂಗ್ ಕೆಟಗರಿಯಲ್ಲಿನಾಮಿನೇಟ್ ಆಗಿದೆ. ಇಂದು ರಾಜ್ಯದಾದ್ಯಂತ ಸುಮಾರು 70ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ’ ಎಂಬ ಮಾಹಿತಿ ನೀಡುತ್ತಾರೆ ಹೇಮಂತ್.

Tags

Related Articles

Leave a Reply

Your email address will not be published. Required fields are marked *

Language
Close