About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ನನಗೆ ಮಕ್ಕಳಿರುವುದು ಸಾಬೀತಾದರೆ ಪೀಠತ್ಯಾಗ: ಪೇಜಾವರ ಶ್ರೀ

ಉಡುಪಿ: ನನಗೆ ಮಕ್ಕಳಿರುವುದುನ್ನು ಸಾಬೀತುಪಡಿಸಿದರೆ ಪೀಠತ್ಯಾಗ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.

ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಸಾವಿಗೂ ಮುನ್ನ ಮಾತನಾಡಿದ್ದರು ಎನ್ನಲಾದ ಆಡಿಯೋ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಆಡಿಯೋದಲ್ಲಿ ಲಕ್ಷ್ಮೀವರ ತೀರ್ಥ ಸ್ವಾಮಿಗಳು, ಅಜ್ಜನಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಡಾ. ಉಷಾ ಅಂತ. ಅವರು ಚೆನ್ನೈನಲ್ಲಿ ಡಾಕ್ಟರ್‌ ಆಗಿದ್ದಾರೆ. ಅಜ್ಜ ತಮಿಳುನಾಡಿನಲ್ಲಿ ಮಹಿಳೆ ಜತೆ ಸಂಬಂಧ ಹೊಂದಿದ್ದು ಅವರ ಇತ್ತೀಚಿಗೆ ತೀರಿಕೊಂಡಿದ್ದರು. ಹೀಗೆ ಹಲವು ವಿಚಾರಗಳ ಕುರಿತು ಶಿರೂರು ಶ್ರೀಗಳು ಮಾತನಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀಗಳು ತಮ್ಮ ವಿರುದ್ಧ ಆರೋಪಗಳು ಶುದ್ಧ ಸುಳ್ಳು. ಮಹಿಳೆಯರ ಜತೆ ನನಗೆ ಸಹವಾಸವಿತ್ತು. ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಕಟ್ಟುಕಥೆ. ಇದೆಲ್ಲವೂ ಕೇವಲ ಕಲ್ಪನೆ, ಯಾರೂ ನಂಬುವುದಿಲ್ಲ. ಈ ಸಂಬಂಧ ಯಾವುದೇ ವೈದ್ಯಕೀಯ ಪರೀಕ್ಷೆ, ವಿಚಾರಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಒಂದು ವೇಳೆ ಆರೋಪ ಸಾಬೀತುಪಡಿಸಿದರೆ ನಾನು ಪೀಠತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close