About Us Advertise with us Be a Reporter E-Paper

ಸಿನಿಮಾಸ್

ಇದೇ ಶನಿವಾರದಿಂದ ಮನೆಮನೆಯಲ್ಲಿ ‘ಮಾದೇಶ್ವರ’ ಮಹಿಮೆ 

ಭಾರತದ ಅತ್ಯಂತ ದೀರ್ಘ ಜಾನಪದ ಕಥನ ಕಾವ್ಯವೀಗ ಧಾರವಾಹಿಯಾಗಿ

ಮಲೆ ಮಹದೇಶ್ವರ ಅಗಾಧ ಭಕ್ತಸಾಗರವನ್ನುಹೊಂದಿರುವಂತಹ ದೇವರು. ಈ ಆಧುನಿಕ ಯುಗದಲ್ಲೂ ಕೂಡ ಕೋಟ್ಯಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆೆ ತೆರಳಿ ಸ್ವಾಮಿಯ ದರ್ಶನ ಪಡೆದು ಬರುತ್ತಾರೆ. ಹಾಗೆಯೇ ಭಾರತದ ಅತ್ಯಂತ ದೀರ್ಘ ಜಾನಪದ ಕಥನ ಕಾವ್ಯ ಎಂದು ಕರೆಸಿಕೊಳ್ಳುವುದು ‘ಮಲೆ ಮಹದೇಶ್ವರ ಮಹಾಕಾವ್ಯ’. ಈಗಿನ ಯುವ ಪೀಳಿಗೆಗೆ ಈ ಕಾವ್ಯದ ಪರಿಚಯ, ಸ್ವಾಮಿಯ ಮಹಿಮೆ ಅಷ್ಟರ ಮಟ್ಟಿಗೆ ತಿಳಿಯದ ವಿಚಾರ. ಹೊಸ ಪೀಳಿಗೆಗೆ ಸ್ವಾಮಿಯ ಕಥೆ ಮತ್ತು ಮಹಾತ್ಮೆೆ ತಿಳಿಸಲೆಂದು ಜೀ ಕನ್ನಡ ವಾಹಿನಿ ಮುಂದಾಗಿದೆ.

ಇದೇ ತಿಂಗಳ 8ನೇ ತಾರೀಖಿನಿಂದ ಜೀ ಕನ್ನಡ ವಾಹಿನಿಯಲ್ಲಿ ‘ಉಘೇ ಉಘೇ ಮಾದೇಶ್ವರ’ ಹೆಸರಿನ ಧಾರಾವಾಹಿ ಆರಂಭವಾಗಲಿದೆ. ಮಲೆ ಮಹದೇಶ್ವರನ ಜೀವನದ ಕಥಾನಕವನ್ನು ಈ ಧಾರಾವಾಹಿಯ ಮೂಲಕ ಮನೆ ಮನೆಗೆ ತಲುಪಿಸುವ ಪ್ರಯತ್ನ ಇದಾಗಿರಲಿದೆ. ‘ಸಂಭ್ರಮ’, ‘ಸೈನಿಕ’, ‘ಅಂಬರೀಶ’, ‘ಸಾರ್ವಭೌಮ’ದಂತಹ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಮಹೇಶ್ ಈ ಧಾರಾವಾಹಿಗೆ ‘ಸುಖಧರೆ ಪಿಕ್ಚರ‍್ಸ್‌’ ಲಾಂಛನದಲ್ಲಿ ಬಂಡವಾಳ ಹೂಡುವುದರ ಜತೆ ಆ್ಯಕ್ಷನ್ ಕಟ್ ಹೇಳಿದ್ದಾಾರೆ. ಧಾರಾವಾಹಿಗಾಗಿ ವೈಭವೋಪೇತ ಅರಮನೆ ಮತ್ತು ಇಂದ್ರಲೋಕದ ಸೆಟ್ ನಿರ್ಮಿಸಲಾಗಿದ್ದು, ಇದಕ್ಕೆೆಂದೇ ಭಾರತದ ವಿವಿಧ ಪ್ರದೇಶಗಳಿಂದ ನುರಿತ ಕುಶಲ ಕರ್ಮಿಗಳನ್ನು ಕರೆತರಲಾಗಿದೆ. ಕನ್ನಡದಲ್ಲಿ ಇಂಥಹ ಒಂದು ಪ್ರಯತ್ನ ಇದೇ ಮೊದಲಾಗಿದ್ದು, ವರ್ಷಗಟ್ಟಲೆ ಶ್ರಮವಹಿಸಿ ಜಾನಪದ ಸಂಶೋಧಕರ ನೆರವಿನಿಂದ ಕಥೆಯನ್ನು ಸಂಗ್ರಹಿಸಿ, ಒಂದು ಚೌಕಟ್ಟಿನಲ್ಲಿರಿಸಲಾಗಿದೆ.

‘ಕಿರುತೆರೆಯಲ್ಲಿ ಮೊದಲ ಪ್ರಯತ್ನಕ್ಕೇ ‘ಉಘೇ ಉಘೇ ಮಾದೇಶ್ವರ’ ಎನ್ನುವಂಥಹ ವಿಶೇಷ ಪೌರಾಣಿಕ-ಜಾನಪದ ಧಾರಾವಾಹಿ ಮಾಡುತ್ತಿರುವುದು ತೃಪ್ತಿಯ ಜತೆ ಹೆಮ್ಮೆ ಪಡುವಂತೆ ಮಾಡಿದೆ’ ಎನ್ನುತ್ತಾರೆ ನಿರ್ದೇಶಕ ಕಂ ನಿರ್ಮಾಪಕ ಕೆ.ಮಹೇಶ್.

ಸಂಚಿಕೆ ನಿರ್ದೇಶನದ ಜವಬ್ದಾರಿಯನ್ನು ನವೀನ್ ಕೃಷ್ಣ ಹೊತ್ತಿದ್ದು, ವಿನಯ್ ಗೌಡ, ಆರ್ಯನ್ ರಾಜ್, ಮಾಸ್ಟರ್ ಅಮೋಘ, ಕೃತಿ, ಚಂದ್ರಶೇಖರ ಶಾಸ್ತ್ರಿ, ತನ್ಮಯಾ, ಶರತ್, ಶ್ರೀಸಂಧ್ಯಾ, ಪದ್ಮನಾಭ, ಅಮೃತಾ ನಾಯ್ಡು, ಭವಾನಿ ಮುಂತಾದವರು ಮುಖ್ಯ ಪಾತ್ರಗಳಾಗಿ ಅಭಿನಯಿಸಿದ್ದಾರೆ. ನೂರಾರು ರಂಗಕಲಾವಿದರಿಗೆ ಈ ಧಾರಾವಾಹಿಯ ಮೂಲಕ ಅವಕಾಶ ಒದಗಿಸಿಕೊಡಲಾಗಿದೆ. ಕಥೆಯ ಸಂಶೋಧನಾ ತಂಡವಾಗಿ ಡಾ.ಪಿ.ಕೆ.ರಾಜಶೇಖರ್, ಮಹೇಶ್ ಹರವೆ, ಬಸವರಾಜ್ ಸೂಳೇರಿಪಾಳ್ಯ, ನಾಗಮಂಗಲ ಕೃಷ್ಣಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ. ಪ್ರದೀಪ್ ಕುಮಾರ್ ಸಿಂಗಾನಲ್ಲೂರು ಶೀರ್ಷಿಕೆ ಗೀತೆ ಬರೆದಿದ್ದು ಚಲನಚಿತ್ರ ನಿರ್ದೇಶಕರಾದ ಪ್ರೇಮ್ ಹಾಡಿಗೆ ದನಿ ನೀಡಿದ್ದಾರೆ. ಕೆ.ಮಹೇಶ್ ಕುಮಾರ್ ಮತ್ತು ವಿನಾಯಕ ಭಟ್ ಚಿತ್ರಕತೆ ಬರೆದಿದ್ದು, ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ನಟರಾಜ್ ಮುದ್ದಾಲ, ದಿಲೀಪ್ ಮತ್ತು ಚಂದ್ರು ಅವರ ಛಾಯಾಗ್ರಹಣವಿದೆ. ಇದೇ ವಾರಾಂತ್ಯದಿಂದ (ಶನಿವಾರ ಮತ್ತು ಭಾನುವಾರ) ಸಂಜೆ 6:30ಕ್ಕೆೆ ‘ಮಾದೇಶ್ವರ’ ಮನೆಗೆ ಬರಲು ಸಜ್ಜಾಗಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close