About Us Advertise with us Be a Reporter E-Paper

ಪ್ರಚಲಿತವಿದೇಶ

ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಎಚ್ಚರಿಕೆ

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ

ನ್ಯೂಯಾರ್ಕ್: ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ

ಮೊನ್ನೆ ನಡೆದ ಬಾಂಬ್ ಸ್ಪೋಟದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಕ್ಕೆ  ಮತ್ತು ಈ ಘಟನೆ ಕುರಿತಂತೆ ರಾಜಕಾರಣಿಗಳು ಪರಸ್ಪರ ಟೀಕೆಯಲ್ಲಿ ತೊಡಗಿದ್ದಕ್ಕೆ  ಪಾಕಿಸ್ತಾನಕ್ಕೆ ಚೀಮಾರಿ ಹಾಕಿದ್ದಾರೆ. ಪರಸ್ಪರ ಟೀಕೆ ಮಾಡುವುದನ್ನು ಬಿಟ್ಟು ಭಯೋತ್ಪಾದನೆ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಈ ಘಟನೆಯನ್ನು ವಿಶ್ವಸಂಸ್ಥೆಯ ವಿರೋಧಿಸುತ್ತದೆ. ಮತ್ತು ಬಾಂಬ್ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟವರ ಕುಟುಂಬಕ್ಕೆ ಆಂಟೋನಿಯೊ ಗುಟೆರಸ್ ಸಂತಾಪ ಸೂಚಿಸಿದರು. .

ಕಳೆದ ಒಂದು ವಾರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ನಾಲ್ಕು ಉಗ್ರರ ದಾಳಿ ನಡೆದಿವೆ. ಈ ದಾಳಿಯಲ್ಲಿ ೧೫೭ ಮಂದಿ ಮೃತಪಟ್ಟಿದ್ದು, ೨೦೦ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಕ್ಷಣವೇ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು ಎಂದು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close