About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಹಣ ದೋಚಲು ಬಂದ ಕಳ್ಳರು ಬಿರಿಯಾನಿ ತಿಂದ್ರು..!

ದೆಹಲಿ: ಹೋಟೆಲ್ ಒಂದರಲ್ಲಿ ಕಳವು ಮಾಡಲು ಮುಂದಾದ ಕಳ್ಳರು ಏನೂ ಸಿಗದಿದ್ದಕ್ಕೆ ಬಿರಿಯಾನಿ ತಿಂದು ಹೋದ ವಿಲಕ್ಷಣ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಬಿರಿಯಾನಿ ಪ್ರಿಯರಾಗಿರುವ ಛೋಟು ಮತ್ತು ರಾಜು ಎಂಬ ಕಳ್ಳರು ಸರಟಾ ವಿಹಾರ ಜಿ-ಬ್ಲಾಕ್‍ನಲ್ಲಿ ಬಿರಿಯಾನಿ ತಿನ್ನುತ್ತಿದ್ದರು. ಪ್ರತಿಬಾರಿ ಬಿರಿಯಾನಿ ತಿನ್ನುತ್ತಿದ್ದಾಗಲೂ ಅವರ ಕಣ್ಣು ಕ್ಯಾಶ್ ಕೌಂಟರ್ ಬಳಿಯೇ ವಾಲುತ್ತಿತ್ತು. ಹೀಗಾಗಿ ಉಪಾಯ ಹೂಡಿದ ಸ್ನೇಹಿತ ಕಳ್ಳರಿಬ್ಬರೂ ಕದಿಯಲು ಆ ಹೋಟೆಲ್‍ಗೆ ನುಗ್ಗಿದ್ದಾರೆ. ಆದ್ರೆ ಹಣ ಸಿಗದಿದ್ದರಿಂದ ರಾತ್ರಿ ಉಳಿದಿರುವ ಬಿರಿಯಾನಿ ತಿಂದು ಹೋಗಿರುವ ಸ್ವಾರಸ್ಯಕರ ಘಟನೆ ನಡೆದಿದೆ.

ಆದರೆ ಹೋಟೆಲ್ ನಿಂದ ಹೊರಗೆ ಹೋಗಬೇಕಾದರೆ ಕ್ಯಾಶ್ ಕೌಂಟರ್ ನಲ್ಲಿದ್ದ ಲ್ಯಾಪ್‍ಟಾಪ್‍ನ್ನು ಕಳವು ಮಾಡಿದ್ದಾರೆ. ಇದೀಗ ಕಳ್ಳರಿಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close