About Us Advertise with us Be a Reporter E-Paper

Breaking Newsರಾಜ್ಯ

ನಿರುದ್ಯೋಗ ನಿವಾರಿಸಲು ಕೌಶಲ್ಯ ಜವಾನ್ ಯೋಜನೆ ಜಾರಿ: ಸಚಿವ ಆರ್.ವಿ.ದೇಶಪಾಂಡೆ

ತುಮಕೂರು: ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ಕೌಶಲ್ಯ ತರಬೇತಿ ಇಲಾಖೆಯಿಂದ ಮಾಜಿ ಸೈನಿಕರಿಗೆ ಕೌಶಲ್ಯ ಜವಾನ್, ದಿವ್ಯಾಂಗರಿಗೆ ಕೌಶಲ್ಯ ರಥ ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ತಾಲೂಕಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ನೂತನ ತರಬೇತಿ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನಿವೃತ್ತ ಸೈನಿಕರಿಗೆ ಕೌಶಲ್ಯ ಜವಾನ್ ಹಾಗೂ ವಿಕಲಚೇತನರು, ಅಂಧರು ಮತ್ತಿತರರಿಗೆ ತರಬೇತಿ ನೀಡಲು ಕೌಶಲ್ಯ ರಥ ಯೋಜನೆ ಜಾರಿಗೆ ತರಲಾಗುವುದು. ವಿಚಲಚೇತನರು ಇರುವಲ್ಲಿಗೆ ಹೋಗಿ ಅವರನ್ನು ಗುರುತಿಸಿ ಅಲ್ಲಿಯೇ ಅವರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಡೆನ್ಮಾರ್ಕ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ 22 ಜಿಟಿಟಿಸಿ ಕೇಂದ್ರ ತೆರೆಯಲು ನಿರ್ಧರಿಸಲಾಗಿತ್ತು, ಈಗಾಗಲೆ 9 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ತರಬೇತಿ ಪಡೆದವರಿಗೆ ಬೃಹತ್ ಕಂಪನಿಗಳಲ್ಲಿ ಉದ್ಯೋಗ ದೊರಕುತ್ತಿವೆ ಎಂದು ಹೇಳಿದರು.

ಕೌಶಲ್ಯ ತರಬೇತಿ
ಪ್ರಧಾನಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಉದ್ಯೋಗ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಆದ್ದರಿಂದ ರಾಜ್ಯ ಸರಕಾರ ಕೈಗಾರಿಕೆಗಳಿಗೆ ಯಾವ ರೀತಿಯ ಕೌಶಲ್ಯ ಬೇಕು ಎಂಬುದನ್ನು ತಿಳಿದು ಅದೇ ಮಾದರಿಯ ಕೌಶಲ್ಯ ತರಬೇತಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close