About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ವಿಜಯ್ ಮಲ್ಯ ಪರ ಗಡ್ಕರಿ ಬ್ಯಾಟಿಂಗ್: ವಂಚಕ ಎನ್ನಬೇಡಿ ಎಂದ ಕೇಂದ್ರ ಸಚಿವರು

ಮುಂಬೈ: ಒಂದು ಬಾರಿ ಸಾಲ ತೀರಿಸಲಾಗದೆ ಹೋದ ಮಾತ್ರಕ್ಕೆ ವಿಜಯ್ ಮಲ್ಯರನ್ನು ‘ಕಳ್ಳ’ ಎಂದು ಬಿಂಬಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ಗಡ್ಕರಿ, ಕಳೆದ 4 ದಶಕಗಳಿಂದ ಮಲ್ಯ ಸಮಯಕ್ಕೆ ಸರಿಯಾಗಿ ಸಾಲ ತೀರಿಸುತ್ತಿದ್ದರು. ವ್ಯವಹಾರ ಅಂದಮೇಲೆ ಲಾಭ, ನಷ್ಟ ಇದ್ದೇ ಇರುತ್ತೆ. ಅದಕ್ಕೆ ಅವರು ಸಾಲ ತೀರಿಸಲು ಆಗಿಲ್ಲ. ಒಂದು ಸಾರಿ ಸಾಲ ತೀರಿಸಿಲ್ಲ ಅಂತ ಅವರನ್ನ ಕಳ್ಳ ಅಂತ ಕರಿಯೋದು ಸರಿಯಲ್ಲ. ಒಮ್ಮೆ ಸಾಲ ತೀರಿಸಲು ವಿಫಲರಾಗಿದ್ದಾರೆ. ಇನ್ನೊಂದು ಅವಕಾಶ ನೀಡಿ ನೋಡಬಹುದು ಎಂದರು.

ನೀರವ್ ಮೋದಿ ಅಥವಾ ಮಲ್ಯ ಯಾರೇ ವಂಚನೆ ಎಸಗಿದರೆ ಅವರನ್ನು ಜೈಲಿಗೆ ಕಳಿಸುವುದು ಸರಿ. ಆದರೆ ಆರ್ಥಿಕ ಮುಗ್ಗಟ್ಟಿನಲ್ಲಿರುವವರನ್ನು ವಂಚಕರು ಎಂದೆನ್ನುವುದು ಸರಿಯಲ್ಲ. ಹಾಗೆ ಮಾಡಿದರೆ ಆರ್ಥಿಕತೆ ಅಭಿವೃದ್ದಿ ಸಾಧ್ಯವಾಗದು ಎಂದು ಅವರು ಹೇಳಿದರು.

ವಿಜಯ್ ಮಲ್ಯ ವಿವಿಧ ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ಸಾಲ ಮರುಪಾವತಿಸದೇ, ದೇಶ ಬಿಟ್ಟು ಓಡಿ ಹೋಗಿ ಲಂಡನ್​ನಲ್ಲಿದ್ದಾರೆ. ವಿದೇಶಕ್ಕೆ ಪಲಾಯನವಾಗಿರುವ ಮಲ್ಯರನ್ನು ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರದ ಪ್ರಯತ್ನಿಸ್ತಿದೆ. ಈ ಬೆನ್ನಿಗೇ ಮಲ್ಯ ಬಗ್ಗೆ ಗಡ್ಕರಿ ಕರುಣೆ ತೋರಿಸಿರುವುದು ಅಚ್ಚರಿ ಮೂಡಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close