About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ವಿಶ್ವ ಸಂಸ್ಥೆ ಮಾಜಿ ಮಹಾಕಾರ್ಯದರ್ಶಿ ಅನ್ನಾನ್‌ ನಿಧನ

ವಿಶ್ವ ಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ಕೋಫಿ ಅನ್ನಾನ್‌ ನಿಧನರಾಗಿದ್ದಾರೆ.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಈ ಕುರಿತು ಅನ್ನಾನ್‌ರ ಟ್ವಿಟರ್‌ ಹ್ಯಾಂಡ್‌ನಲ್ಲಿ ಅಧಿಕೃತವಾಗಿ ಹೇಳಲಾಗಿದ್ದು, “ಅನ್ನಾನ್‌ ಕುಟುಂಬ ಹಾಗು ಪ್ರತಿಷ್ಠಾನವು ಅವರ ನಿಧನದ ಸುದ್ದಿಯನ್ನು ಅತೀವ ದುಃಖದಿಂದ ತಿಳಿಸುತ್ತದೆ. ಅಲ್ಪಾವಧಿ ಅನಾರೋಗ್ಯಕ್ಕೆ ಈಡಾಗಿದ್ದ ನೊಬೆಲ್‌ ಪುರಸ್ಕೃತ ಅನ್ನಾನ್‌ ಶಾಂತಿಯುತವಾಗಿ ಇಹಲೋಕ ತ್ಯಜಿಸಿದ್ದಾರೆ” ಎಂದು ತಿಳಿಸಲಾಗಿದೆ.

ಸಿರಿಯಾಗೆ ಕಳುಹಿಸಿದ್ದ ವಿಶ್ವ ಸಂಸ್ಥೆಯ ವಿಶೇಷ ನಿಯೋಗದಲ್ಲಿದ್ದ ಅನ್ನಾನ್‌ 1996-2006ರ ನಡುವಿನ ಎರಡು ಅವಧಿಗೆ ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.

ಪಶ್ಚಿಮ ಆಫ್ರಿಕಾ ಕರಾವಳಿಯ ಘಾನಾ ದೇಶದ ಅನ್ನಾನ್‌ ನಿಧನಕ್ಕೆ ಜಗತ್ತಿನೆಲ್ಲೆಡೆಯಿಂದ ಶ್ರದ್ಧಾಂಜಲಿ ಅರ್ಪಿತವಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close