About Us Advertise with us Be a Reporter E-Paper

Breaking Newsದೇಶಪ್ರಚಲಿತ

ಗರ್ಭಿಣಿ ಹೆಂಡತಿಯ ಚಿಕಿತ್ಸೆಗಾಗಿ ತನ್ನ ಮಗುವನ್ನೆ ಮಾರಲು ಮುಂದಾದ  ವ್ಯಕ್ತಿ

ಉತ್ತರ ಪ್ರದೇಶ: ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಹೆಂಡತಿಯ ಚಿಕಿತ್ಸೆಗಾಗಿ ತನ್ನ ಮಗುವನ್ನು 25,000 ಮಾರಲು ಮುಂದಾದ ವ್ಯಕ್ತಿಯನ್ನು ಪೊಲೀಸರು ತಡೆದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ.

ಉತ್ತರ ಪ್ರದೇಶದ ಕನ್ನೌಜ್​ನ ಬರೇತಿ ದರಾಪುರ್​ ಗ್ರಾಮದ ಅರ್ವಿಂದ್ ಬಂಜಾರಾ ಎಂಬಾತನೇ ತನ್ನ ಮಗುವನ್ನ ಮಾರಲು ಯತ್ನಿಸಿದ ವ್ಯಕ್ತಿ. 7 ತಿಂಗಳ ಗರ್ಭಿಣಿಯಾಗಿರುವ ಅರ್ವಿಂದ್​ನ ಪತ್ನಿ ಸುಖ್​ದೇವಿಯು ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದಳು. ಚಿಕಿತ್ಸೆಗಾಗಿ ಆಕೆಯನ್ನು ಅಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ವೈದ್ಯರು ಆಕೆಯ ಚಿಕಿತ್ಸೆಗಾಗಿ ರಕ್ತ ಹೊಂದಿಸುವಂತೆ ತಿಳಿಸಿದ್ದಾರೆ. ಹಣವಿಲ್ಲದೆ ದಿಕ್ಕೇ ತೋಚದ ಅರ್ವಿಂದ್​ ಬೇರೆ ದಾರಿ ಇಲ್ಲದೇ ತನ್ನ ಮಗುವನ್ನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾನೆ.

ಮಗುವನ್ನು ಮಾರಾಟ ಮಾಡುತ್ತಿದ್ದ ವಿಆಚಾರ ತಿಳಿದ ಪೊಲೀಸರು ವ್ಯಕ್ತಿಯನ್ನು ತಡೆದು ಚಿಕಿತ್ಸೆಗೆ ಅಗತ್ಯವಿದ್ದ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close