About Us Advertise with us Be a Reporter E-Paper

ಸಿನಿಮಾಸ್

ನಮ್ ಹುಡುಗ್ರು ಕಥೆಯಲ್ಲಿ ಉಪೇಂದ್ರ ಅಣ್ಣನ ಮಗ

- ಸಚಿನ್

ಸೆಕೆಂಡ್ ಹಾಫ್ ಸಿನಿಮಾದಲ್ಲಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಉಪೇಂದ್ರ ಅಣ್ಣನ ಮಗ ನಿರಂಜನ್, ಈಗ ನಮ್ ಹುಡುಗ್ರು ಕಥೆ ಚಿತ್ರದ ಮೂಲಕ ಸೋಲೋ ಪರ್ಫಾಮೆನ್‌ಸ್ಗೆ ರೆಡಿಯಾಗಿದ್ದಾರೆ. ಈ ಬಗ್ಗೆ ನಿರಂಜನ್ ಮಾತನಾಡಿದಿಷ್ಟು…

* ಉಪೇಂದ್ರ ಅವರು ನಿಮ್ಮನ್ನು ಗೈಡ್ ಮಾಡಿದ್ದುಂಟಾ…
ಹೌದು ಒಬ್ಬ ನಟನಿಂದ ಪಾತ್ರಕ್ಕೆ ನಿರ್ದೇಶಕರಾದವರು ಎಷ್ಟರಮಟ್ಟಿಗೆ ನಿರೀಕ್ಷೆ ಮಾಡ್ತಾರೆ. ನಟನಾದವನು ಸನ್ನಿವೇಶಗಳನ್ನು ನಿಭಾಯಿಸುವಲ್ಲಿ, ವ್ಯಕ್ತಿತ್ವಗಳನ್ನು ಹ್ಯಾಂಡಲ್ ಮಾಡುವಲ್ಲಿ ಹೇಗಿರಬೇಕು. ಪಾತ್ರದಲ್ಲಿ ಯಾವ ರೀತಿ ಇನ್ ವಾಲ್‌ವ್ ಆಗಬೇಕು. ಯಾವ ರೀತಿ ಬಿಹೇವ್ ಮಾಡಬೇಕು. ಹಂಬಲ್ ಆಗಿರಬೇಕು. ಇತ್ಯಾದಿ ಚಿಕ್ಕ ಚಿಕ್ಕ ವಿಚಾರಗಳನ್ನು ಅವರು ಮಗುವಿಗೆ ತಿದ್ದಿ ಹೇಳುವ ಹಾಗೆ ನನಗೆ ಗೈಡ್ ಮಾಡಿದ್ದಾರೆ. ಚಿಕ್ಕಪ್ಪನಾಗಿ, ನಟನಾಗಿ, ನಿರ್ದೇಶಕರಾಗಿ ಅವರೇ ನನಗೆ ಮಾದರಿ.

* ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕೆ ನಿಮ್ಮ ತಯಾರಿ..
ನಾನು ಡಿಗ್ರಿಯಲ್ಲಿದ್ದಾಗ ಥಿಯೇಟರ್‌ಗೆ ಸೇರಿದೆ. ಬೆಂಗಳೂರು, ಮೈಸೂರು ಸೇರಿದಂತೆ ಸುಮಾರು 12 ಸ್ಟೇಜ್ ಶೋ ಕೊಟ್ಟಿದ್ದೇನೆ. ಮೂರ್ನಾಲ್ಕು ತಿಂಗಳು ಉಪ್ಪಿ 2 ಚಿತ್ರಕ್ಕೆ ಸಹ ನಿರ್ದೇಶಕನಾಗಿ ಮಾಡಿದ್ದೆ. ಡಿಗ್ರಿ ಅಂತಿಮ ವರ್ಷದಲ್ಲಿರುವಾಗ ನನಗೆ ಸೆಕೆಂಡ್ ಹಾಫ್ ಸಿನಿಮಾದಿಂದ ಆಫರ್ ಬಂತು. ನಾನು ಸ್ಕ್ರೀನ್ ಟೆಸ್‌ಟ್ ಕೊಟ್ಟೆ. ನನ್ನ ರಂಗಭೂಮಿ ಅನುಭವದ ಮೇಲೆ ಆ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಸಿಕ್ಕಿತು. ಆ ಪಾತ್ರ ಹೈಲೈಟ್ ಆಯ್ತು ಕೂಡ. ಚಿಕ್ಕಮ್ಮನ (ಪ್ರಿಯಾಂಕ ಉಪೇಂದ್ರ) ಜೊತೆ ನಟಿಸುವ ಅವಕಾಶ ದೊರೆಯಿತು.

* ನಿಮ್ಮ ಸಿನಿಮಾ ಕರಿಯರ್‌ಗೆ ಫ್ಯಾಮಿಲಿ ಸಪೋರ್ಟ್ ಹೇಗಿದೆ..
ಚಿಕ್ಕ ವಯಸ್ಸಿನಿಂದ ನಾನು ಕಲ್ಚರಲ್ ಆ್ಯಕ್ಟಿವಿಟೀಸ್‌ನಲ್ಲಿ ಭಾಗವಹಿಸುತ್ತಿದ್ದೆ. ನನ್ನ ಆಸಕ್ತಿಯನ್ನು ಮನಗಂಡು ನನ್ನ ಪೇರೆಂಟ್‌ಸ್ ಪರೋಕ್ಷವಾಗಿ ಪ್ರೋತ್ಸಾಹ ಮಾಡ್ತಾನೆ ಬಂದಿದ್ದಾರೆ. ನನ್ನ ಡೆಡಿಕೇಶನ್, ಕೆಲಸಗಳನ್ನು ಈ ಗಾಗಲೇ ನೋಡಿರೋ ಅವರು ನನ್ನ ಪ್ರತಿ ಹೆಜ್ಜೆಗಳಿಗೂ ಬೆಂಬಲವಾಗಿ ನಿಂತಿದ್ದಾರೆ.

* ‘ನಮ್ ಹುಡುಗ್ರು ಕಥೆ’ ಸಿನಿಮಾದಲ್ಲಿ ನಿಮಗಿಷ್ಟವಾದದ್ದು…
ಮುಖ್ಯವಾಗಿ ಹೆಚ್ಚು ಸೆಳೆದದ್ದು ಆ ಸಿನಿಮಾ ಸ್ಕ್ರಿಪ್‌ಟ್. ಸುಮಾರು ಎರಡೂವರೆ ಗಂಟೆ ಕಣ್ಣಿಗೆ ಕಟ್ಟುವಂತೆ ನಿರ್ದೇಶಕರು ಕಥೆ ಪ್ರೆಸೆಂಟ್ ಮಾಡಿದ್ರು. ಸಿನಿಮಾದಲ್ಲಿ ಅನೇಕ ಟ್ವಿಸ್‌ಟ್ಗಳು, ಟರ್ನಿಂಗ್ ಪಾಯಿಂಟ್‌ಗಳು ಮೇಲಾಗಿ ಸಿನಿಮಾ ಟಚ್ ಹೊಂದಿರೋದು ನನಗೆ ಹೆಚ್ಚು ಲೈಕ್ ಆಯ್ತು. ಪ್ರೇಕ್ಷಕರನ್ನ ಸಿನಿಮಾ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತೆ ಅನ್ನೋ ನಂಬಿಕೆ ಇದೆ.

* ನಮ್ ಹುಡುಗ್ರು ಕಥೆ ಸಿನಿಮಾಕ್ಕಾಗಿ ನಿಮ್ಮ ತಯಾರಿ…
ಈ ಸಿನಿಮಾಕ್ಕೂ ಮುಂಚಿತವಾಗಿ ನಾನು ಜಿಮ್ನಾಸ್ಟಿಕ್, ಫೈಟಿಂಗ್, ಮಾರ್ಷಲ್ ಆರ್ಟ್‌ಸ್ ಕಲಿಯಲು ಪ್ರಾರಂಭಿಸಿದ್ದೆ. ಜತೆಗೆ ಸಿನಿಮಾ ಸಲುವಾಗಿ ಮಂಡ್ಯ ಸ್ಲಾಂಗ್ ಕಲಿಯೋದಕ್ಕೆ ಪ್ರಾರಂಭಿಸಿದ್ದೇನೆ. ನಾನು ವೆಸ್ಟರ್‌ನ್ ಡ್ಯಾನ್ಸರ್ ಕೂಡಾ.

* ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ..?
ಈ ಸಿನಿಮಾ ಮತ್ತೊಂದು ಪ್ರಾಜೆಕ್‌ಟ್ ತುಂಬಾ ಇಷ್ಟಾಗಿದೆ. ಅದು ಜನವರಿಗೆ ಟೇಕ್ ಅಪ್ ಆಗುವ ಸಾಧ್ಯತೆ ಇದೆ. ಅದರ ಬಗ್ಗೆ ಮುಂದೆ ಮಾತಾಡೋಣ.

Tags

Related Articles

Leave a Reply

Your email address will not be published. Required fields are marked *

Language
Close