ಉಪ್ಪಿ ಪಕ್ಷದ ವೆಬ್ ಸೈಟ್ ಲೋಕಾರ್ಪಣೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಗೌರವಾನ್ವಿತ ಸಂಸ್ಥಾಪಕ ಉಪೇಂದ್ರ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಲುವಾಗಿ ಪಕ್ಷದ ಹೊಸ ವೆಬ್ ಸೈಟ್ ಶನಿವಾರ ಲೋಕಾರ್ಪಣೆ ಮಾಡಿದ್ದಾರೆ.

ಕೆಪಿಜೆಪಿ ಪಕ್ಷ ಹಾಗೂ ಉಪೇಂದ್ರ ಅವರ ರಾಜಕೀಯ ಕಾರ್ಯಕ್ರಮಗಳನ್ನು ಈ ವೆಬ್ ಸೈಟ್ ನಲ್ಲಿ ನೋಡಬಹುದು. ‘ಕೆಪಿಜೆಪಿ ಉಪ್ಪಿ’ ಹೆಸರಿನಲ್ಲಿ ಉಪೇಂದ್ರ ಅವರ ವೆಬ್ ಸೈಟ್ ಬಿಡುಗಡೆಯಾಗಿದ್ದು, ಪಕ್ಷದ ಗುರಿ, ಪಕ್ಷದ ಚಟುವಟಿಕೆಗಳು ಹೇಗಿರಬೇಕು. ಜನರನ್ನು ತಲುಪುವುದು ಹೇಗೆ ಎಂಬ ಬಗ್ಗೆ ವಿವರಗಳಿವೆ.

ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಿದ ಉಪೇಂದ್ರ, ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್ ನಲ್ಲಿ ತಮ್ಮ ವಿವರವನ್ನ ಅಪ್ ಡೇಟ್ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶವಿದೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ ಎಂದು ಉಪ್ಪಿ ಹೇಳಿದರು.

Leave a Reply

Your email address will not be published. Required fields are marked *

19 − eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top