About Us Advertise with us Be a Reporter E-Paper

Breaking Newsದೇಶಪ್ರಚಲಿತ

ಅಲೋಕ್ ವರ್ಮಾ ವಜಾ ಆತುರದ ನಿರ್ಧಾರ: ಸುಪ್ರೀಂ ಮಾಜಿ ನ್ಯಾ. ಎ.ಕೆ.ಪಟ್ನಾಯಕ್

ದೆಹಲಿ: ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದ್ದು ತುಂಬ ಆತುರದ ನಿರ್ಧಾರ ಎಂದು ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಹೇಳಿದ್ದಾರೆ.

ಅಲೋಕ್ ವರ್ಮಾ ವಿರುದ್ಧ ಭ್ರಷ್ಟಾಚಾರದ ತನಿಖೆ ನಡೆಸಿದ ಎಸ್‌ವಿಸಿ ಸಂಸ್ಥೆಯ ಮೇಲ್ವಿಚಾರಕರಾಗಿರುವ ಪಟ್ನಾಯಕ್ ಮಾಧ್ಯಮದೊಂದಿಗೆ ಮಾತನಾಡಿ, ಸಿಬಿಐ ನಿರ್ದೇಶಕ ವರ್ಮಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದ ಸಮಿತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದು ತರಾತುರಿಯ ನಿರ್ಧಾರವೆಂದು ತೋರುತ್ತದೆ ಎಂದು ತಿಳಿಸಿದ್ದಾರೆ.

ಅಲೋಕ್ ವರ್ಮಾ ಅವರ ವಿರುದ್ಧದ ತನಿಖೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರ ದೂರುಗಳನ್ನು ಆಧರಿಸಿತ್ತು. ಸಿವಿಸಿಯಿಂದ ಕಳುಹಿಸಲಾದ ವರದಿಗೆ ಆಸ್ಥಾನಾ ಸಹಿ ಮಾಡಿದ್ದರು. ಆದರೆ, ತನಿಖೆ ವೇಳೆ ಅವರ ಉಪಸ್ಥಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅಗ್ನಿಶಾಮಕ ದಳದ ಡಿಜಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಅದನ್ನು ಒಪ್ಪದ ಅಲೋಕ್ ವರ್ಮಾ ರಾಜೀನಾಮೆ ನೀಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close