About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಯುಎಸ್ ಓಪನ್‌: ಫೆಡರರ್ ಔಟ್‌, ಜೊಕೊವಿಚ್ ಇನ್‌

ನ್ಯೂಯಾರ್ಕ್: ಪ್ರಶಸ್ತಿ ಗೆಲ್ಲುವ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರು ಅಂತಿಮ 16ರ ಹಂತದಲ್ಲಿ ಜಾನ್ ಮಿಲ್‌ಮನ್ ವಿರುದ್ಧ ಸೋಲುವ ಮೂಲಕ ಯುಎಸ್ ಓಪನ್‌ನಿಂದ ನಿರಾಸೆಯೊಂದಿಗೆ ಹೊರನಡೆದರು. ಅಲ್ಲದೆ, ತನ್ನ ವೃತ್ತಿ ಜೀವನದಲ್ಲೆ ಇದೇ ಮೊದಲ ಬಾರಿಗೆ ಅಗ್ರ 50 ರ ಶ್ರೇಯಾಂಕದ ಮೇಲಿನ ಆಟಗಾರನ ವಿರುದ್ಧ ಫೆಡರರ್ ಸೋತು ಆಘಾತಕ್ಕೆ ಒಳಗಾದರು.

ಮಂಗಳವಾರ ಇಲ್ಲಿನ ಅರ್ತೂರ್ ಸ್ಟೇಡಿಯಂನಲ್ಲಿ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಆಟ ಆಡುವಲ್ಲಿ ವಿಫಲರಾದ ಫೆಡರರ್ 3-6, 7-5, 7-6(7), 7-6(3) ಅಂತರದಲ್ಲಿ ಜಾನ್‌ಮಿಲ್‌ಮನ್ ವಿರುದ್ಧ ಸೋಲೊಪ್ಪಿಕೊಂಡರು.

ಇದರೊಂದಿಗೆ ಯುಎಸ್ ಓಪನ್‌ನಲ್ಲಿ ಭಾಗವಹಿಸಿದ್ದ 14ರಲ್ಲಿ ಎರಡು ಬಾರಿ ಫೆಡರರ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಂತಾಯಿತು. ಇದರೊಂದಿಗೆ ಫೆಡರರ್ ಆಟ ನೋಡಲು ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಭಾರಿ ನಿರಾಸೆಯುಂಟಾಯಿತು.

ಕ್ವಾರ್ಟರ್‌ಫೈನಲ್ ತಲುಪಿದ ಜೊಕೊವಿಚ್: ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜಾವೊ ಸೌಸಾ ಅವರನ್ನು ಮಣಿಸಿ ಯುಎಸ್ ಓಫನ್ ಅಂತಿಮ ಎಂಟರಘಟ್ಟಕ್ಕೆ ತಲುಪಿದ್ದಾರೆ.

ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ವಿಂಬಲ್ಡನ್ ಚಾಂಪಿಯನ್ ಜೊಕೊವಿಚ್ ಅವರು ತನ್ನ ಶೈಲಿಯ ಆಟದೊಂದಿಗೆ ಜಾವೊ ಸೌಸಾ ಅವರನ್ನು 6-3, 6-4, 6-3 ಅಂತರದಲ್ಲಿ ಸೋಲಿಸಿದರು. ಇದರಲ್ಲಿ ಒಂಬತ್ತು ಏಸ್‌ಗಳ ಮೂಲಕ ಸರ್ಬಿಯಾ ಆಟಗಾರ ಗೆಲುವಿನ ನಗೆ ಬೀರಿದರು. ಪಂದ್ಯದ ಮೂರು ಸೆಟ್‌ಗಳಲ್ಲಿ ಅತ್ಯುತ್ತಮ ಆಟವಾಡಿದ ಜೊಕೊವಿಚ್ ಕ್ವಾರ್ಟರ್‌ನಲ್ಲಿ ಜಾನ್ ಮಿಲ್‌ಮನ್ ಅವರನ್ನು ಎದುರಿಸಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close