About Us Advertise with us Be a Reporter E-Paper

Breaking Newsವಿದೇಶ

ಅಮೆರಿಕ-ಪಾಕ್‌ ಸಂಭಂದ ವೃದ್ಧಿಸಲು ಇಮ್ರಾನ್​ ಖಾನ್​ ಪ್ರಯತ್ನ

ಇಸ್ಲಮಾಬಾದ್​: ನಾನು ಹುಟ್ಟಿನಿಂದಲೇ ಆಶಾವಾದಿ. ಅಲ್ಲದೆ, ಒಬ್ಬ ಕ್ರೀಡಾಪಟು ಯಾವಾಗಲೂ ಆಶಾವಾದಿಯಾಗಿರುತ್ತಾನೆ. ಆತ ಮೈದಾನಕ್ಕೆ ಹೆಜ್ಜೆಯಿಡುತ್ತಲೇ ಜಯ ಸಾಧಿಸುವ ಭರವಸೆಯನ್ನು ಹೊಂದಿರುತ್ತಾನೆ ಎಂದು ಹೇಳುವ ಮೂಲಕ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್​ ಖಾನ್​ ಅಮೆರಿಕ ಜತೆ ಮತ್ತೆ ಸಂಬಂಧ ಗಟ್ಟಿಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇಸ್ಲಮಾಬಾದ್​ನಲ್ಲಿ ಬುಧವಾರ ಅಮೆರಿಕದ ವಿದೇಶಾಂಗ ವ್ಯವಹಾರಗಳ ಮುಖ್ಯ ಸಲಹೆಗಾರ ಮೈಕ್ ಪೊಂಪಿಯೊ ಅವರನ್ನು ಭೇಟಿ ಮಾಡಿ ಇಮ್ರಾನ್​ ಮಾತನಾಡಿ, ಉಗ್ರರ ನಿಗ್ರಹದಲ್ಲಿ ಪಾಕ್​ ವಿಫಲವಾಗಿದೆ ಎಂದು ಅಮೆರಿಕ ತನ್ನ ನೆರವನ್ನು ತಡೆಯಿಡಿದಿರುವುದು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಮ್ರಾನ್​ ನಾನು ಆಶಾವಾದಿ ಎಂದು ಹೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಪಾಕ್​ಗೆ ಭೇಟಿ ನೀಡಿದ ಪೊಂಪಿಯೊ ನಾಲ್ಕು ಗಂಟೆ ಕಾಲ ಮಾತ್ರ ಅಲ್ಲಿ ಉಳಿದಿದ್ದರು. ಅಲ್ಲಿಂದ ಭಾರತಕ್ಕೆ ಹೊರಡುವ ಮುನ್ನ ಮಾತನಾಡಿದ ಅವರು, ಮತ್ತೆ ಉತ್ತಮ ಸಂಬಂಧ ಮುಂದುವರಿಸಲು ಇದೊಂದು ಅಡಿಪಾಯವಾಗಿದೆ. ಒಟ್ಟಿಗೆ ಮುಂದುವರಿಯುವ ಭರವಸೆ ಇದೆ ಎಂದು ಹೇಳಿದರು.

ನಾವು ಇನ್ನು ಬಹಳ ದೂರ ಸಾಗಬೇಕಿದೆ. ಹೆಚ್ಚು ಹೆಚ್ಚು ಚರ್ಚೆಯನ್ನು ಮಾಡಬೇಕಿದೆ. ನಮ್ಮ ಜಂಟಿ ಬದ್ಧತೆಯನ್ನು ತಲುಪಲು ಕಾರ್ಯಪ್ರವೃತ್ತರಾಗಲು ಇದು ಸುಸಂದರ್ಭ. ನಾವು ಅನೇಕ ಬಾರಿ ಮಾತನಾಡಿದ್ದೇವೆ. ಹಲವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಆದರೆ, ಅವುಗಳನ್ನು ನಾವು ವಾಸ್ತವವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಆರ್ಥಿಕ, ಉದ್ಯಮ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸಲು ಅವಕಾಶ ಇದೆ ಎಂದು ಹೇಳಿದ ಅವರು, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ಉಭಯ ದೇಶಗಳು ಜತೆಯಾಗಿ ಕಾರ್ಯನಿರ್ವಹಿಸಬೇಕೆಂದರು.

Related Articles

Leave a Reply

Your email address will not be published. Required fields are marked *

Language
Close