About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಅಮೆರಿಕದ ಕೇರಳ ಮೂಲದ ಜನರಲ್ಲಿ ಸಹಾಯ ಮಾಡುವಂತೆ ಪಿಣರಾಯಿ ಮನವಿ

ನ್ಯೂಯಾರ್ಕ್: ಭಾರಿ ಪ್ರವಾಹ, ಭೂಕುಸಿತದಿಂದ ಅಪಾರ ನಷ್ಟ ಹೊಂದಿರುವ ಕೇರಳ ರಾಜ್ಯದ ಮರು ನಿರ್ಮಾಣಕ್ಕೆ ಅಮೆರಿಕದಲ್ಲಿರುವ ಕೇರಳ ಮೂಲದ ಜನರು ಸಹಾಯ ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದರು.

ಅಮೆರಿಕದ ನ್ಯೂಯಾರ್ಕ್ ನಲ್ಲಿ ಕೇರಳ ಮೂಲದ ಜನರೊಂದಿಗೆ ಸಭೆ ನಡೆಸಿದ ಪಿಣರಾಯಿ ವಿಜಯನ್ ಅವರು, ಕೇರಳ ಮರುನಿರ್ಮಾಣಕ್ಕೆ ತಮ್ಮ ಒಂದು ತಿಂಗಳ ವೇತನವನ್ನು ನೀಡುವಂತೆ ಕೋರಿದರು. ಕೇರಳ ಮರುನಿರ್ಮಾಣಕ್ಕೆ ಸಾಕಷ್ಟು ಹಣ ಬೇಕಾಗಿದ್ದು, ಅದಕ್ಕೆ ನಿಮ್ಮೆಲ್ಲರ ಸಹಾಯಹಸ್ತ ಅತಿ ಮುಖ್ಯ. ಮಕ್ಕಳು ಕೂಡ ತಾವು ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ವಾಸವಾಗಿರುವ ಕೇರಳ ಮೂಲದ ಜನರ ಸಹಾಯಹಸ್ತ ನಮಗೆ ಬೇಕಾಗಿದೆ ಎಂದು ವಿನಂತಿಸಿದರು.

ಕೇರಳದಲ್ಲಿ ಉಂಟಾದ ಭಾರಿ ಪ್ರವಾಹದಿಂದ  ರಾಜ್ಯ ಅಕ್ಷರಶಃ ತತ್ತರಿಸಿ ಹೋಗಿದೆ. ಕೇರಳ ರಾಜ್ಯ ಮರುನಿರ್ಮಾಣ ಬಹುದೊಡ್ಡ ಚಾಲೆಂಜ್ ಆಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಅವರ ಪುನರ್ ನಿರ್ಮಾಣ ಕಾರ್ಯವೂ ಆಗಬೇಕಿದೆ. ಹೀಗಾಗಿ ನಿಮ್ಮ ಸಹಾಯ ಅಗತ್ಯವಾಗಿದೆ ಎಂದು ಕೇಳಿಕೊಂಡರು. ಇನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಕೇರಳದ ಕ್ಯಾಬಿನೆಟ್ ಮಂತ್ರಿಗಳು, ಹಿರಿಯ ಅಧಿಕಾರಿಗಳು ಹಣ ಸಂಗ್ರಹಿಸಲು ವಿದೇಶಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇತ್ತೀಚೆಗೆ 17 ದಿನಗಳ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದರು. ಸೆಪ್ಟೆಂಬರ್ 19ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸೆ.24ಕ್ಕೆ ವಾಪಸ್ ಆಗಲಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಕೇರಳ ಮೂಲದ ಜನರೊಂದಿಗೆ ಅವರು ಸಭೆ ನಡೆಸಿ, ಸಹಾಯ ಮಾಡುವಂತೆ ವಿನಂತಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close