About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಪ್ರಧಾನಿ ಹತ್ಯೆಗೆ ಸಂಚು; ಇನ್ನು ಜನ ಸಾಮಾನ್ಯರ ಕತೆ ಏನು?

ಬೆಂಗಳೂರು:  ದೇಶದ ಪ್ರಧಾನಿ ಹತ್ಯೆಗೆ ಸಂಚು ನಡೆಸಲಾಗುತ್ತಿದೆ ಎಂದರೆ ಇನ್ನು ಜನ ಸಾಮಾನ್ಯರ ಕತೆ ಏನು? ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಎಂದು ವಸತಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರನ್ನು ಹತ್ಯೆ ಮಾಡುವ ಸಂಚು ನಡೆಸುವುದು ಸಾಮಾನ್ಯದ ವಿಷಯವಲ್ಲ. ಇದು ಅತ್ಯಂತ ಖಂಡನೀಯ. ಯಾರೇ ಆಗಿದ್ದರೂ ಅವರನ್ನು ಬಂಧಿಸಿ ವಿಚಾರಣೆ ನಡೆಸಲೇಬೇಕು. ಆರೋಪಿಗಳು ಯಾರೆಂಬುದನ್ನು ಸಮಗ್ರ ತನಿಖೆಗೆ ಸಂಚಿನ ಸೂತ್ರಧಾರನನ್ನು ಬಂಧಿಸಿ ದೇಶದ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಹತ್ಯೆಗೆ ಸಂಚು ನಡೆಯುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಯಾಚರಣೆ ನಡೆಸುವ ಬದಲು ಸಂಚುಕೋರರ ಜಾಲವನ್ನು ಸಮಗ್ರವಾಗಿ ಪತ್ತೆಹಚ್ಚಿ ಬಹಿರಂಗಪಡಿಸಬೇಕು. ಸಂಚುಕೋರರನ್ನು ದೇಶದ್ರೋಹಿ ಎಂದು ಘೋಷಣೆ ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close