ವಾಣಿಜ್ಯ ತೆರಿಗೆ ವಿಭಾಗದ ಅಧಿಕಾರಿಯ ಪತ್ನಿ ಜತೆ ಅಸಭ್ಯ ವರ್ತನೆ: ಆರೋಪಿ ಬಂಧನ 

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಕರ್ನಾಟಕ ರಾಜ್ಯ ಟೆನಿಸ್ ಅಸೋಸಿಯೇಷನ್ ನಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಅಧಿಕಾರಿಯ ಪತ್ನಿಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸ ವರ್ಷಾಚರಣೆಗೆ ಅಸೋಸಿಯೇಷನ್ ವತಿಯಿಂದ ಆಯೋಜಿಸಲ್ಪಟ್ಟ ಪಾರ್ಟಿಗೆ ಅಧಿಕಾರಿ ತಮ್ಮ ಪತ್ನಿಯನ್ನು ಕರೆ ತಂದಿದ್ದು, ಆಕೆಯನ್ನು ಹಾಲ್ ನಲ್ಲಿ ಬಿಟ್ಟು ಕೌಂಟರ್ ಬಳಿ ಊಟ ತರಲು ಬಂದ ಸಂದರ್ಭ, 15 ಮಂದಿಯ ತಂಡ ಆಕೆಯ ಬಳಿ ಸೆಲ್ಪಿ ತೆಗೆದುಕೊಳ್ಳಬೇಕು ಎಂದು ದುರ್ವರ್ತನೆ ತೋರಿದ್ದಾರೆ.
ಆಕೆ ಪತಿಯ ಬಳಿ ಬಂದು ವಿಷಯ ತಿಳಿಸಿದಾಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ದೂರಿನ ಮೇರೆಗೆ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿ ಪೊಲೀಸರು ಐಪಿಸಿ ಸೆಕ್ಷನ್ 501, 510 ಹಾಗೂ 149ರ ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿದ್ದು, 15 ಮಂದಿಯ ಪೈಕಿ ಶಿವರಾಜ್ ಎಂಬವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ  ಶೋಧ ನಡೆದಿದೆ.

Leave a Reply

Your email address will not be published. Required fields are marked *

six + eleven =

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top