ವಿಶ್ವವಾಣಿ

ವಾಜಪೇಯಿ ನಿಧನ: ದೇಶದಾದ್ಯಂತ  7 ದಿನ ಶೋಕಾಚರಣೆ

ದೆಹಲಿ: ಮಾಜಿ ಪ್ರಧಾನಿ ವಾಜಪೇಯಿ ನಿಧನದ ಹಿನ್ನಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಕರ್ನಾಟಕ ಸರಕಾರ. ಅಲ್ಲದೇ  ದೇಶದಾದ್ಯಂತ  7 ದಿನಗಳ ಕಾಲ ಶೋಕಾಚರಣೆ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ಸರಕಾರದ ಉನ್ನತ ಮೂಲ ಮಾಹಿತಿಗಳ ಪ್ರಕಾರ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಖಾಸಗಿ ಸಂಘಟನೆಗಳು, ಸರಕಾರದಿಂದ ರಜೆ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಅದ್ದರಿಂದ ಸರಕಾರದ ಆದೇಶಕ್ಕೆ ನಾವು ಬದ್ದ ಎಂದು ತಿಳಿಸಿದೆ. ಆದರೆ ಕೆಲವು ರಾಜ್ಯಗಳು ಅಧಿಕೃತವಾಗಿ ರಜೆ ಘೋಷಿಸಿಕೊಂಡಿದೆ.

ಕರ್ನಾಟಕ ಸೇರಿದಂತೆ ದೆಹಲಿ ಹಾಗೂ ಉತ್ತರ ಪ್ರದೇಶದ ಸರಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಇನ್ನುಳಿದಂತೆ ಯಾವುದೆ ರಾಜ್ಯಗಳು ಅಧಿಕೃತವಾಗಿ ರಜೆ ಕುರಿತು ಮಾಹಿತಿ ನೀಡಿಲ್ಲ.