About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ: ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆ

ಶೋಪಿಯಾನ: ಜಮ್ಮು-ಕಾಶ್ಮೀರದಲ್ಲಿ ದಿನೇ ದಿನೇ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಶುಕ್ರವಾರ ಮುಂಜಾನೆ ಉಗ್ರರು ಅಪಹರಿಸಿದ್ದ ನಾಲ್ವರು ಪೊಲೀಸರಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ.

ಗ್ರಾಮಸ್ಥರ ಸಹಾಯದಿಂದ ಒಬ್ಬರು ಪೊಲೀಸರು ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರರ ಹೀನ ಕೃತ್ಯಕ್ಕೆ ಫಿರ್ದೋಸ್ ಅಹ್ಮದ್ ಕುಚೆ, ಕುಲ್ದೀಪ್ ಸಿಂಗ್ ಮತ್ತು ನಿಸಾರ್ ಅಹ್ಮದ್ ಧೋಬ್ ಹುತಾತ್ಮರಾದ ಪೊಲೀಸರು. ಹಿಜ್ಬುಲ್ ಉಗ್ರರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ರವಾರ ಮುಂಜಾನೆ ದಕ್ಷಿಣ ಕಾಶ್ಮೀರದ ಶೋಪಿಯಾನದಿಂದ ನಾಲ್ಕು ಮಂದಿ ಪೊಲೀಸರನ್ನು ಭಯೋತ್ಪಾದಕರು ಅಪಹರಿಸಿದ್ದರು. ಅಲ್ಲದೆ ಭಯೋತ್ಪಾದಕರು, ಪೊಲೀಸರಿಗೆ ವೃತ್ತಿಯಿಂದ ರಾಜೀನಾಮೆ ನೀಡುವಂತೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಎಂಟು ಮಂದಿ ಕುಟುಂಬಸ್ಥರನ್ನು ಕಿಡ್ನಾಪ್ ಮಾಡಿದ ಮೂರು ವಾರಗಳ ಬಳಿಕ ಇದೀಗ ಮೂವರು ಪೊಲೀಸರನ್ನು ಅಪಹರಣ ಮಾಡಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಸೇನೆ ಜತೆ ಪೊಲೀಸರು ಕೈಜೋಡಿಸಿರುವುದು ಭಯೋತ್ಪಾದಕರ ನಿದ್ದೆಗೆಡಿಸಿದೆ. ಹೀಗಾಗಿ ಉಗ್ರರು ಪೊಲೀಸರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಪೊಲೀಸರನ್ನು ಸೇವೆಯಿಂದ ರಾಜೀನಾಮೆ ಪಡೆಯುವಂತೆ ಉಗ್ರರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close