About Us Advertise with us Be a Reporter E-Paper

ಸಿನಿಮಾಸ್

ವರ್ಣಮಯ ನ್ಯೂ ಜಾನರ್‌ನ ಹಾರರ್ ಮೂವಿ

ಯಾವುದಾದರೂ ದೆವ್ವದ ಸಿನಿಮಾ ಹಿಟ್ ಆಯ್ತು ಅಂದ್ರೆ ಸಾಲು ಸಾಲು ದೆವ್ವದ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗುತ್ತವೆ. ಕನ್ನಡ ಚಿತ್ರಗಳಲ್ಲಿಯೂ ಇಂತಹ ಹಾರರ್ ಚಿತ್ರಗಳಿಗೇನು ಬರವಿಲ್ಲ. ಸಾಮಾನ್ಯವಾಗಿ ಹಾರರ್ ಸಿನಿಮಾ ಎಂದಾಕ್ಷಣ ಅಲ್ಲೊಂದು ಸವಾಲು, ರೋಚಕತೆ, ಕೌತುಕತೆ ಇದ್ದೇ ಇರುತ್ತದೆ. ಸೆಟ್ಟೇರುವ ಹೊಸ ಹಾರರ್ ಸಿನಿಮಾಗಳು ಉಳಿದ ಚಿತ್ರಗಳಿಗಿಂತ ಕೊಂಚ ಭಿನ್ನವಾಗಿದ್ದರೆ ಮಾತ್ರ ಸಿನಿ ರಸಿಕರ ಮನ ತಲುಪಲು ಸಾಧ್ಯ.

ಇಂತಹುದೇ ಹಾರರ್ ಸಸ್ಪೆನ್‌ಸ್ ಕಥಾ ಹಂದರವನ್ನಿಟ್ಟುಕೊಂಡು ತಯಾರಾಗುತ್ತಿರುವ ‘ವರ್ಣಮಯ’ ಮಿಕ್ಕೆಲ್ಲ ಹಾರರ್ ಸಿನಿಮಾಗಳಿಗಿಂತ ಭಿನ್ನತೆಯನ್ನು ಕಾಯ್ದುಕೊಂಡಿದೆ. ಎಲ್ಲ ಚಿತ್ರಗಳಲ್ಲಿರುವಂತೆ ಹಾಂಟೆಡ್ ಹೌಸ್, ಕಾಡು, ದೆವ್ವ ಪೀಡಿತ ಜಾಗ, ಪಿಕ್‌ನಿಕ್, ಶೂಟಿಂಗ್, ಸಂಶೋದನೆಗೆ, ಮನೆಗೆ ವಾಸಕ್ಕೆ ಬರುವುದು ನಂತರ ದೆವ್ವದ ಕಾಟ ಶುರುವಾಗುವುದು. ಆನಂತರ ಆ ದೆವ್ವವನ್ನು ಕಂಡುಹಿಡಿಯಲು ಮಾಡುವ ಸರ್ಕಸ್ಸು, ದೆವ್ವ ಸಿಕ್ಕ ಮೇಲೆ ಆ ದೆವ್ವದ ಡ್ರೀಮ್ ಕೇಳುವುದು, ಆಮೇಲೆ ಅದಕ್ಕೊಂದು ಪರಿಹಾರ ಇತ್ಯಾದಿ ಸರ್ವೇಸಾಮಾನ್ಯ. ಆದರೆ ವರ್ಣಮಯ ಇವೆಲ್ಲ ರಗಳೆಗಳಿಂದ ಹೊರತಾದ ಸಿನಿಮಾ ಎಂಬುದು ನಿರ್ದೇಶಕರ ಅಂಬೋಣ.

ಇಲ್ಲಿ ಕಾಡುವ ಜಾಗವಾಗಲಿ, ಭೂತ ಬಂಗಲೆಯಾಗಲಿ ಕನ್ನಡದ ಮಟ್ಟಿಗೆ ವೈಜ್ಞಾನಿಕ ನೆಲೆಗಟ್ಟಿನ ಮೂಲಕ ದೆವ್ವ ಭೂತದ ವಿಶ್ಲೇಷಣೆ ಮಾಡಿರುವ ಸಿನಿಮಾ ಇದಾಗಿದ್ದು, ಇಲ್ಲಿ ದೆವ್ವ ನಿಜವೋ ಸುಳ್ಳೋ ಎಂಬುದರ ವೈಜ್ಞಾನಿಕ ವಿವರ ಇದೆಯಂತೆ. ಹಾಗಾಗಿ ವರ್ಣಮಯ ಮಾಮೂಲಾದ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಚಿತ್ರದಲ್ಲಿ ನಾಯಕ ಒಬ್ಬ ಅಂತಾರಾಷ್ಟ್ರೀಯ ಚಿತ್ರ ಕಲಾವಿದ. ಆತನ ಸುತ್ತ ನಡೆಯುವ ಅನೂಹ್ಯ ಘಟನೆಗಳಿಂದ ವಿಚಲಿತನಾಗುವ ನಾಯಕ ಅದರ ಹಿಂದಿನ ರಹಸ್ಯ ಭೇದಿಸಲು ತನ್ನ ಮನಶಾಸ್ತ್ರಜ್ಞ ಗೆಳತಿಯ ಸಹಾಯ ಪಡೆಯುತ್ತಾನೆ. ಚಿತ್ರ ಒಂದೊಂದೇ ಗಂಟುಗಳು ತೆರೆದುಕೊಳ್ಳುತ್ತದೆ. ಮುಂದುವರೆದಂತೆ ಇಡೀ ಸಿನಿಮಾ ಕುತೂಹಲ ಕೆರಳಿಸುತ್ತಾ ಸಾಗುತ್ತದೆ.

ಚಿತ್ರವನ್ನು ರಿಧಿ ಎಂಟರ್ಟೈನ್‌ಮೆಂಟ್‌ಸ್ ಲಾಂಛನದಡಿಯಲ್ಲಿ ದೀಪ್ತಿ ದಾಮೋದರ್ ನಿರ್ಮಿಸಿದ್ದು, ಈ ಹಿಂದೆ ಪುಟಾಣಿ ಸಫಾರಿ ಎನ್ನುವ ಯಶಸ್ವಿ ಮಕ್ಕಳ ಚಿತ್ರವನ್ನು ನಿರ್ದೇಶಿಸಿರುವ ರವೀಂದ್ರ ವೆಂಶಿ ‘ವರ್ಣಮಯ’ಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವರ್ಣಮಯದ ನಾಯಕ ನಟನಾಗಿ ರಾಜ್ ಪ್ರಥಮ ಬಾರಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಕ್ತಿ ಎಸ್ ಶೆಟ್ಟಿ, ಸುನಿತಾ ಮಾರಿಯೋ ಪಿಂಟೋ, ಆರಾಧ್ಯ ಅಟ್ಟಾವರ, ಮಂಡ್ಯ ಉಮೇಶ್ ಸಿಂಧನೂರು, ಹರೀಶ್ ಕುಂದೂರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು , ವಿನೋದ್ ಮತ್ತು ಸುದಾಂಶು ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಶ್ರೀಗುರು ಹಿನ್ನೆಲೆ ಸಂಗೀತ ನೀಡಿದ್ದು ಜೀವನ ಗೌಡರ ಛಾಯಾಗ್ರಹಣ, ಸಿ.ರವಿಚಂದ್ರನ್‌ರವರ ಸಂಗೀತ ಚಿತ್ರಕ್ಕಿದೆ.

Tags

Related Articles

Leave a Reply

Your email address will not be published. Required fields are marked *

Language
Close