About Us Advertise with us Be a Reporter E-Paper

ಗುರು

ವಸಂತಪುರ ಕಲ್ಯಾಣಿಗೆ ಮರುಜೀವ

ಕಾರ್ತಿಕ ಸುಧನ

ಬೆಂಗಳೂರಿನಲ್ಲಿ ಒಂದೆಡೆ ಕೆರೆಗಳು, ಕಲ್ಯಾಣಿಗಳು ಕಣ್ಮರೆಯಾಗುತ್ತಿದ್ದರೆ, ಮತ್ತೊಂದೆಡೆ ನದಿಕಾಲುವೆಗಳು ಒತ್ತುವರಿಗೆ ತಮ್ಮ ದಿಕ್ಕುದೆಸೆಯನ್ನೆ ಬದಲಿಸಿ ಕೊಂಡು ಕಿರಿದಾಗುತ್ತಿವೆ. ಅಂತರ್ಜಲ ಮಟ್ಟ ದಿನದಿಂದ ಕುಸಿಯುತ್ತಿದೆ. ಭವಿಷ್ಯದಲ್ಲಿ, ಇನ್ನೊಂದು ದಶಕದೊಳಗೆ ಬೆಂಗಳೂರು ಗಂಭೀರ ಜಲಕ್ಷಾಮಕ್ಕೆ ತುತ್ತಾಗುವ ಸಂಭವವಿದೆ ಎಂಬ ಪರಿಸರ ವಿಜ್ಞಾನಿಗಳ ಎಚ್ಚರಿಕೆಯ ನಡುವೆ ಕೆಲವು ಸರ್ಕಾರೇತರ ಸಂಘ, ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಪರಿಸರ ಪ್ರೇಮಿಗಳು ಅಲ್ಲಲ್ಲಿ, ಸದ್ದಿಲ್ಲದೆ ಅಂತರ್ಜಲ ಸಂರಕ್ಷಿಸುವ ಕಾಯಕ ಮಾಡುತ್ತಿದ್ದಾರೆ. ಅದಕ್ಕೊಂದು ನಿದರ್ಶನ ಬೆಂಗಳೂರಿನ ವಸಂತಪುರದ ಕಲ್ಯಾಣಿಗೆ ಮರುಜೀವ ಸಿಕ್ಕಿರುವುದು.

ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ವಸಂತಪುರದ ಸರ್ವೇ 21ರಲ್ಲಿರುವ ವಸಂತ ವಲ್ಲಭರಾಯ ಸ್ವಾಮಿ ದೇವಸ್ಥಾನದ ಶಿಥಿಲಾವಸ್ಥೆಯಲ್ಲಿದ್ದ ಪುರಾತನ ಕಾಲದ ಕಲ್ಯಾಣಿ ಈಗ ಹೊಸರೂಪದಲ್ಲಿ ಪುನರ್ ನಿರ್ಮಾಣಗೊಂಡಿದ್ದು, ಭಕ್ತಾದಿಗಳನ್ನು ಮತ್ತು ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಮರಾಠರ ಕಾಲದಲ್ಲಿ ಶಿವಾಜಿ ಅವರ ತಂದೆ ಷಹಾಜೀ ಬೋಂಸ್ಲೆ ಈ ಸ್ಥಳದಲ್ಲಿ ಶಿಬಿರ ಹೂಡಿದ್ದ ಸಂದರ್ಭದಲ್ಲಿ ಈ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು ಎಂಬ ಐಹಿತ್ಯವಿದೆ. ಇನ್ನು 12ನೇ ಶತಮಾನದಲ್ಲಿ ರಾಜ್ಯಭಾರ ನಡೆಸುತ್ತಿದ್ದ ಚೋಳರು ವಸಂತ ವಲ್ಲಭ ದೇವಾಲಯವನ್ನು ನಿರ್ಮಿಸಿದರು ಎಂದೂ ಹೇಳಲಾಗುತ್ತದೆ. 73 ಮೀ ಉದ್ದ, ಮೀ ಅಗಲ, 6 ಮೀ ಆಳದ ಈ ಕಲ್ಯಾಣಿಯ ಮೆಟ್ಟಿಲುಗಳನ್ನು ಕಲ್ಲುಗಳಿಂದ, ಎಲ್ಲೂ ದಿಕ್ಕುಗಳಿಂದಲೂ ಕಲ್ಯಾಣಿಗೆ ಇಳಿಯುವಂತೆ ನಿರ್ಮಿಸಲಾಗಿತ್ತು. ಕಲ್ಯಾಣಿಯ ನೀರು ವಸಂತ ವಲ್ಲಭ ಸ್ವಾಮಿಯ ಅಭಿಷೇಕ, ಇತರೆ ಧಾರ್ಮಿಕ ಕಾರ್ಯಗಳಿಗೆ ಮತ್ತು ಜನರ ಕುಡಿಯುವ ನೀರಿಗೂ ಬಳಕೆಯಾಗುತ್ತಿತ್ತು. 1980ರ ವರೆಗೂ ಇದೇ ಕಲ್ಯಾಣಿಯ ನೀರು ಅಕ್ಕಪಕ್ಕದ ಜನರಿಗೆ ಆಸರೆಯಾಗಿತ್ತು.

ಆ ನಂತರ ನಗರೀಕರಣದ ಪರಿಣಾಮ ಕಲ್ಯಾಣಿಯ ಜಲಮೂಲಕ್ಕೆ ಕಂಟಕ ಎದುರಾಯಿತು. ಅಕ್ಕಪಕ್ಕದ ಚರಂಡಿಯ ಕೊಳಚೆ ನೀರು ಕಲ್ಯಾಣಿ ಶುರುವಾಗಿದ್ದರಿಂದ ಜನರೂ ಈ ನೀರಿನ ಬಳಕೆಯನ್ನು ನಿಲ್ಲಿಸಿದರು. ಕಲ್ಯಾಣಿಯ ಮೆಟ್ಟಿಲುಗಳು ಶಿಥಿಲಗೊಂಡು, ಹೂಳು ತುಂಬಿಕೊಂಡು ಕೊಳಚೆ ಪ್ರದೇಶವಾಯಿತು. ಗತ ವೈಭವ ಕಳೆದುಕೊಂಡು ವಸಂತಪುರದ ಕಲ್ಯಾಣಿ ಅವಸಾನದ ಅಂಚಿಗೆ ತಲುಪಿತ್ತು. 2003 ರಿಂದಲೇ ಕಲ್ಯಾಣಿಯ ಜೀರ್ಣೋದ್ಧಾರಕ್ಕೆ ವಸಂತಪುರದ ಸ್ಥಳೀಯರು, ವಸಂತ ವಲ್ಲಭನ ಭಕ್ತರು ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ, ಯೋಜನೆಗೆ ಸಾಕಷ್ಟು ಹಣ ಬೇಕಾಗಿದ್ದರಿಂದ, ಮುಜರಾಯಿ ಇಲಾಖೆಯಾಗ ಲಿ, ಬಿಬಿಎಂಪಿಯಾಗಲಿ ಇದರ ಬಗ್ಗೆ ಆಸಕ್ತಿಯನ್ನು ತೋರಿರಲಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close