ರಿಲೀಸ್‌ಗೆ ರೆಡಿಯಾದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’

Posted In : ಸಿನಿಮಾಸ್

‘ಅಕಿರಾ’ ಚಿತ್ರದ ನಂತರ ನಟ ಅನೀಶ್ ತೇಜೇಶ್ವರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದರೆ ಜುಲೈ ತಿಂಗಳಿನಲ್ಲಿ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಬರೋದು ಖಚಿತ ಎನ್ನಲಾಗುತ್ತಿದೆ. ವಿಂಕ್‌ವಿಷಲ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರಕ್ಕೆ ಅಜಿತ್ ವಾಸನ್ ಉಗ್ಗಿನ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ ಸಂಗೀತ ನಿರ್ದೇಶನವಿದ್ದು, ಬಾಬಾ ಭಾಸ್ಕರ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಚಿತ್ರದ ಸಾಹಸ ದೃಶ್ಯಗಳನ್ನು ವಿಕ್ರಂ ಮೋರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್‌ಗೆ ನಾಯಕಿಯಾಗಿ ನಿಶ್ವಿಕಾ ಜೊತೆಯಾಗಿದ್ದಾರೆ. ಉಳಿದಂತೆ, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ವಾಸು ಹವಾ ಜೋರಾಗಿದ್ದು ಚಿತ್ರ ಸಿನಿ ಪ್ರಿಯರಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಮೂಡಿಸುವಲ್ಲಿ ಯಶಸ್ವಿ ಯಾಗಿದೆ.

Leave a Reply

Your email address will not be published. Required fields are marked *

twelve + eleven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top