About Us Advertise with us Be a Reporter E-Paper

ವಿ +

ಒಂದು ಬೊಗಸೆಯ ತುಂಬಾ ಖುಷಿಯ ಟ್ರಿಕ್ಕು!

ಸದಾಶಿವ್ ಸೊರಟೂರು

ನಾನು ನನ್ನ ಮಗಳು ಮನೆಯ ಟೆರೇಸ್ ಮೇಲೆ ಕೂತಿzವು. ನಾನು ರಸ್ತೆಯ ಕಡೆಗೆ ದೃಷ್ಟಿ ಚಾಚಿ ಹೋಗಿ ಬರುವ ವರನ್ನು ನೋಡುತ್ತಿz. ತಣ್ಣಾನೆಯ ಗಾಳಿ ಬೀಸುತ್ತಿತ್ತು. ಸ್ವಲ್ಪ ಜೋರಾಗಿಯೇ ಇತ್ತು ಎನ್ನಿ! ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಡಬ್ಬಿಗಳನ್ನು ಜೋಡಿಸುತ್ತಾ ಮನೆ ಕಟ್ಟುವ ಆಟ ಆಡುತ್ತಿ ದ್ದಳು ಮಗಳು. ಗಾಳಿ ಪ್ರತಿ ಬಾರಿ ಬೀಸಿ ಮನೆ ಬೀಳಿಸಿ ದಾಗಲೂ ಚಪ್ಪಾಳೆ ತಟ್ಟಿ ಖುಷಿ ಪಡುತ್ತಿದ್ದಳು. ಮತ್ತೆ ಕಟ್ಟುತ್ತಿದ್ದಳು. ಮತ್ತೆ ಬೀಳುತ್ತಿತ್ತು. ಮತ್ತೆ ಚಪ್ಪಾಳೆ, ನಗು, ಕೇಕೆಗಳಿದ್ದವು.

ಮಗುವಿನ ಆ ಅಪರಿಮಿತ ಖುಷಿ ನನ್ನ ಸೆಳೆದು ಬಿಟ್ಟಿತು. ಮತ್ತೆ ಮತ್ತೆ ಬಿದ್ದು ಹೋಗುತ್ತಿದ್ದ ಮನೆಯನ್ನು ನೋಡಿ ಎಷ್ಟೊಂದು ಖುಷಿ ಪಡುತ್ತಾಳೆ. ಅವಳಿಗೆ ಗೊತ್ತು ಆ ಮನೆ ಶಾಶ್ವತವಾದದ್ದಲ್ಲ ಅಂತ. ಅದರ ಮೇಲೆ ಅವಳಿಗೆ ಯಾವುದೇ ಆಸೆಗಳಿಲ್ಲ. ಅದರಿಂದ ಬಯಸು ವುದೂ ಏನು ಇಲ್ಲ. ಅದೊಂದು ಆ ಕ್ಷಣದ ನಿರ್ಮಿತಿ. ಅದೆಷ್ಟು ಖುಷಿ ಕೊಡುತ್ತಿತ್ತು ಅವಳಿಗೆ. ಆ ವಿಚಾರ ಕಾಡತೊಡಗಿತು.

ನಮ್ಮ ಪ್ರತಿಕ್ಷಣದ ಖುಷಿಯೂ ಸೋರಿ ಹೋಗು ತ್ತಿರುವುದು ಹೀಗೇನಾ ಅಂತ ಅನಿಸಿತು. ನಾವು ಮುಂದೆ ಬರುವ ಯಾವುದನ್ನೋ ನೆಚ್ಚಿಕೊಂಡು, ಶಾಶ್ವತವಾಗಿ ಉಳಿಯಬೇಕೆಂದು ಕೆಲವೊಂದರ ಬಗ್ಗೆ ಹಠಕ್ಕೆ ಬಿದ್ದೋ, ಅತಿಯಾದ ಮುಂದಾಲೋಚನೆ ಕ್ರಮದಿಂದಲೊ ಬರದ ಇನ್ಯಾವುದೋ ಬದುಕಿಗೆ ಹಪಾಹಪಿಸುತ್ತೇವೆ. ಇಂದಿನ ದಿನಗಳನ್ನು ಹಾಳು ಮಾಡಿಕೊಳ್ಳುತ್ತೇವೆ. ನಮ್ಮ ಎಲ್ಲಾ ನೋಟವು ದೂರದಲ್ಲಿ ಏನೋ ಇದೆ ಎಂಬುದರ ಕಡೆಯೆ ನೆಟ್ಟಿರುತ್ತದೆ. ಯಾವಾಗ ನಾವೊಂದು ಶಾಶ್ವತ ಆಸೆಗೆ ಬೀಳುತ್ತೇವೆಯೋ, ಆಗ ನಮ್ಮಲ್ಲಿ ಬೇರೆಯದೇ ಕ್ರಿಯೆ ಗಳು ಜಾಗೃತವಾಗುತ್ತವೆ. ಹೊಟ್ಟೆಕಿಚ್ಚು, ಕೋಪ, ತೀವ್ರ ಸ್ಪರ್ಧೆ, ಮೋಸ ಇವುಗಳು ಗರಿಗೆದುರುತ್ತವೆ. ಇವುಗಳನ್ನು ಸಾಕಿಕೊಂಡರೆ ಇವು ಯಾವ ಹೊತ್ತಿನಲ್ಲಿ ತಾನೇ ನೆಮ್ಮದಿ ಕೊಟ್ಟಾವು? ಒಂದು ಸ್ವಚ್ಛ ನಗು ಅರಳಿಸಲು ಇವುಗಳಿಂದ ಸಾಧ್ಯವೇ? ಒಂದು ನಿಷ್ಕಲ್ಮಷ ಪ್ರೀತಿಯನ್ನು ಕಾಣ ಬಹುದಾ? ಎಂದಿಗೂ ಸಾಧ್ಯವಿಲ್ಲ. ಹಾಗಾದರೆ ನಮ್ಮ ಪಾಲಿಗೆ ಸಂತೋಷಗಳಾದರೂ ಎಲ್ಲಿ?

‘ಹಣ ಮಾಡ್ತೀನಿ ಅಂತ ಹೊರಟರೆ ಹಣ ಸಿಗುತ್ತೆ, ಹೆಸರು ಮಾಡ್ತೀನಿ ಅಂತ ಹೊರಟರೆ ಬರೀ ಹೆಸರು ಸಿಗುತ್ತೆ ಆದರೆ ಕೆಲಸ ಮಾಡ್ತೀನಿ ಅಂತ ಹೊರಟರೆ ಇವೆರಡರ ಜೊತೆ ಖುಷಿಯೂ ಸಿಗುತ್ತದೆ’ ಅಂತ ಕನ್ನಡದ ಲೇಖಕರೊಬ್ಬರು ಹೇಳುತ್ತಾರೆ. ಎಂತಹ ಅರ್ಥಗರ್ಭಿತ ಮಾತು. ನಾವು ಜೀವನದಲ್ಲಿ ಸಂತೋಷ, ನೆಮ್ಮದಿ ಬೇಕೆಂದುಕೊಳ್ಳುತ್ತೇವೆ. ಆದರೆ ನಾವು ಅವುಗಳು ಇರುವಲ್ಲಿ ಬಿಟ್ಟು ಬೇರೆ ಕಡೆ ಹುಡುಕುತ್ತೇವೆ ಇಲ್ಲವೇ ಅವುಗಳನ್ನಲ್ಲದೇ ಬೇರೆಯೆದ್ದನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ.

ಈ ‘ಪರ್ಮನೆಂಟ್’ ಅನ್ನುವ ಭಾವವಿದೆಯಲ್ಲ ಅದು ಬದುಕಿನ ಎ ಜಂಜಡಗಳಿಗೆ ಕಾರಣ. ಅದೊಂದು ರೋಗ, ಚಟ. ಅದನ್ನು ಬಿಟ್ಟು ಈ ದಿನ ಇಂದಿಗಷ್ಟೇ ಅಂದುಕೊಂಡು ಬದುಕಿದರೆ ಅಲ್ಲಿ ಆನಂದವಿದೆ. ಇಲ್ಲಿ ಯಾವುದೂ ನನ್ನದಲ್ಲ ಅನ್ನುವ ಭಾವವೇ ಆನಂದದ ಉನ್ನತಮಟ್ಟ. ಅದು ಮತ್ತೆಲ್ಲಿಯೂ ಸಿಗುವುದಿಲ್ಲ!

Tags

Related Articles

Leave a Reply

Your email address will not be published. Required fields are marked *

Language
Close