About Us Advertise with us Be a Reporter E-Paper

ಸಿನಿಮಾಸ್
Trending

ನಿರ್ದೇಶಕನಾಗುವ ಸಾಮಾನ್ಯನ ಕತೆ ‘ವಿಧಾತ್ರು’..!

ಸಾಮಾನ್ಯವಾಗಿ ನಿರ್ದೇಶಕನಾಗುವ ಹಂಬಲವಿರುವವರು ಮೊದಲು ಕೈಹಾಕುವುದು ಕಿರು ಚಿತ್ರಗಳಿಗೆ ಇತ್ತೀಚೆಗೆ ಅನೇಕ ಕಿರು ಚಿತ್ರಗಳು ಹಿರಿತೆರೆಗೆ ಹಾರಲು ಬಯಸುವವರಿಗೆ ಆರೋಗ್ಯಕರ ವೇದಿಕೆಯಾಗಿ ನಿಂತಿರುವದನ್ನು ನಾವು ನೋಡಿದ್ದೇವೆ. ಅದೇ ಕಾರಣಗಳಿಂದ ಅನೇಕ ನವ ನಿರ್ದೇಶಕರುಗಳು ಕಿರು ಚಿತ್ರದತ್ತ ಸಾಗುತ್ತಿದ್ದಾರೆ.

ಈಗ ಇದೇ ಸಾಲಿಗೆ ‘ವಿಧಾತ್ರು’ ಕಿರುಚಿತ್ರ ಕೂಡ ಸೇರಿಕೊಂಡಿದೆ. ನಿರ್ದೇಶಕನಾಗುವ ಆಸೆ ಹೊತ್ತ ಯುವಕನೊಬ್ಬ ಎಲ್ಲರನ್ನು ಎದುರು ಹಾಕಿಕೊಂಡು ಕೊನೆಗೆ ಅಂದುಕೊಂಡದ್ದನ್ನು ಸಾಧಿಸುವುದೇ ಈ ಚಿತ್ರದ ಕತೆ. ಇಲ್ಲೊಂದು ತಂದೆ ಮಗನ ಬಾಂಧವ್ಯವನ್ನೂ ಸಹ ಎತ್ತಿ ಹಿಡಿಯಲಾಗಿದೆ.  ಜನುಮದ ಜೋಡಿ ಧಾರಾವಾಹಿಯಲ್ಲಿ ನಟಿಸಿದ್ದ ವಿವೇಕ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತೇಜಸ್ವಿನಿ ರಮೇಶ್, ಗಿರೀಶ್, ನಿಸರ್ಗ, ನಾಗೇಂದ್ರ ಷಾ ಮುಂತಾದರು ಇತರೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದು, ವಿಶ್ವಕೌಂಡಿನ್ಯ ಛಾಯಗ್ರಹಣ, ಪ್ರಕಾಶ್ ಸಂಕಲನ ಚಿತ್ರಕ್ಕಿದೆ. 2.38 ಲಕ್ಷ ರೂ. ವೆಚ್ಚದಲ್ಲಿ ತಯಾರಾಗಿರುವ ‘ವಿಧಾತ್ರು’ ಚಿತ್ರವನ್ನು, ಜನವರಿ ಒಂದರಂದು ‘ಚೂರಿಕಟ್ಟೆ’ ಚಿತ್ರದ ನಿರ್ದೇಶಕ ರಾಘು ಶಿವಮೊಗ್ಗ ಲೋಕಾರ್ಪಣೆ ಮಾಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close